ನವದೆಹಲಿ:ಅತಿಥಿ ದೇವೋ ಭವ ಅಂತಾರೆ ಆದರೆ, ಈ ಮಾತಿಗೆ ಕಳಂಕ ತರುವ ಕೆಲಸವನ್ನು ಇಲ್ಲೊಬ್ಬ ಇನ್​​ಸ್ಟಾಗ್ರಾಂ ಬಳಕೆದಾರ ಮಾಡಿದ್ದಾನೆ. ವಿದೇಶದಿಂದ ಭಾರತಕ್ಕೆ ಬರುವ ಮಹಿಳಾ ಪ್ರವಾಸಿಗರ ಜತೆ ರೀಲ್ಸ್​ ಮಾಡುವುದಲ್ಲದೆ, ಅವರಿಗೆ ದರ ನಿಗದಿ ಮಾಡುವ ಮೂಲಕ ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ.
ಮಹಿಳಾ ಪ್ರವಾಸಿಗರಿಗೆ ಕಿರುಕುಳ ನೀಡಿರುವ ಸಾಕಷ್ಟು ವಿಡಿಯೋಗಳನ್ನು @guru__brand0000 ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಆರೋಪಿ ಯುವಕ ಪೋಸ್ಟ್​ ಮಾಡಿದ್ದಾನೆ. ಕೆಲವೊಂದು ವಿಡಿಯೋಗಳಂತೂ ತೀರಾ ಕಳಪೆಯಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್​ ಹೆಚ್ಚಿಸಿಕೊಳ್ಳುವ ದುರಾಸೆಯಿಂದ ಈ ದುಷ್ಕೃತ್ಯ ಎಸಗುತ್ತಿದ್ದು, ಅವನ ವಿರುದ್ಧ ಕಠಿಣ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ.
ಈ ವಿಚಾರವನ್ನು ಎಕ್ಸ್​ ಬಳಕೆದಾರರೊಬ್ಬರು ಬೆಳಕಿಗೆ ತಂದಿದ್ದು, ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಭಾರತದಲ್ಲಿ ಕೆಟ್ಟ ಅನುಭವವಾಗಲು ಇಂತಹ ಹುಡುಗರೇ ಕಾರಣ. ಪ್ರವಾಸಿಗರಿಗೆ ಕಿರುಕುಳ ನೀಡುತ್ತಿರುವ ಈ ಯುವಕನನ್ನು ಜೈಪುರ್​ ಪೊಲೀಸರು ಕೂಡಲೇ ಬಂಧಿಸಿ, ಮೂಲಭೂತ ನಾಗರಿಕ ಪ್ರಜ್ಞೆ ಮತ್ತು ಅತಿಥಿ ದೇವೋ ಭವ ಎಂಬುದರ ಅರ್ಥವನ್ನು ತಿಳಿಸಿ ಎಂದಿದ್ದಾರೆ.
Guys like these are the reason why international tourists have bad experience in India.@jaipur_policeshould arrest this guy for harassing tourists and teach him basic civic sense and the meaning of Atithi Devo Bhava.pic.twitter.com/I59AymLtHQ
— Madhur Singh (@ThePlacardGuy)June 22, 2024

ವಿಡಿಯೋದಲ್ಲಿರುವ ಯುವಕನ ಹೆಸರು ಗುರು. ಆತ ನಾಲ್ವರು ವಿದೇಶಿ ಮಹಿಳಾ ಪ್ರವಾಸಿಗರ ಬಳಿಗೆ ಹೋಗಿ, ನಾಚಿಕೆ ಬಿಟ್ಟು ಅವರ ದರಗಳನ್ನು ನಿರ್ಧರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ನೀವು ಈ ಮಹಿಳೆಯರನ್ನು 150 ರೂಪಾಯಿಗೆ ಪಡೆಯಬಹುದು ಎಂದು ಹೇಳಿದ್ದಾನೆ. ಅಲ್ಲದೆ, ಪ್ರತಿಯೊಬ್ಬ ಮಹಿಳೆಯ ಕಡೆ ಕೈ ತೋರಿಸಿ, ಈಕೆಯನ್ನು 150 ರೂಪಾಯಿಗೆ, ಈಕೆ 200 ರೂ., ಈಕೆಗೆ 500 ರೂ. ಮತ್ತು ಈಕೆಯನ್ನು 300 ರೂ. ಕೊಟ್ಟು ಪಡೆಯಬಹುದು ಎಂದು ಹೇಳಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ಗುರು ಏನು ಹೇಳುತ್ತಿದ್ದಾನೆ ಎಂಬುದು ಮಹಿಳೆಯರಿಗೆ ತಿಳಿಯದೇ ಆತನ ಕ್ಯಾಮೆರಾದತ್ತ ಕೈ ಬೀಸುತ್ತಲೇ ಇರುವುದು ವಿಡಿಯೋದಲ್ಲಿದೆ.
ಗುರುವಿನ ಇನ್​ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ನೋಡಿದರೆ, ರೀಲ್‌ಗಳ ಸಲುವಾಗಿ ಜೈಪುರದಲ್ಲಿ ಪ್ರವಾಸಿಗರಿಗೆ ಕಿರುಕುಳ ನೀಡುತ್ತಿರುವುದು ಸ್ಪಷ್ಟವಾಗಿದೆ. ಇದಿಷ್ಟೇ ಅಲ್ಲದೆ ಬೈಕ್ ಸ್ಟಂಟ್ ಮಾಡುವ ರೀಲ್​ಗಳನ್ನೂ ಸಹ ಗುರು ಪೋಸ್ಟ್ ಮಾಡಿದ್ದಾನೆ. ಎಕ್ಸ್ ಬಳಕೆದಾರರು ಗುರುವಿನ ವಿಡಿಯೋಗಳನ್ನು ಪೋಸ್ಟ್​ ಮಾಡಿ, ಜೈಪುರ ಪೊಲೀಸರನ್ನು ಟ್ಯಾಗ್ ಮಾಡುವ ಮೂಲಕ ಆತನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
This dude is highly problematic and is ruining the image of Jaipur.@Jaipur_policeplease take actionpic.twitter.com/R3Cudz8dor
— Madhur Singh (@ThePlacardGuy)June 22, 2024

ವಿದೇಶಿ ಪ್ರವಾಸಿಗರಿಗೆ ಕಿರುಕುಳ ನೀಡುವ ಮೂಲಕ ಈ ಯುವಕ ಜೈಪುರದ ಹೆಸರನ್ನು ಹಾಳುಮಾಡುತ್ತಿದ್ದಾನೆ ಎಂದು ಅನೇಕ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಜೈಪುರ ಪೊಲೀಸರು, ಮೇಲೆ ತಿಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮಕ್ಕಾಗಿ ಉನ್ನತ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.(ಏಜೆನ್ಸೀಸ್​)
ಡಿಎಸ್​ಪಿ ಆಗಿದ್ದವರು ಈಗ ಕಾನ್ಸ್​ಟೆಬಲ್!​ ಮಹಿಳಾ ಪೇದೆ ಜತೆ ಬೆತ್ತಲಾಗಿ ಸಿಕ್ಕಿಬಿದ್ದ ಪೊಲೀಸ್​ ಅಧಿಕಾರಿಗೆ ಹಿಂಬಡ್ತಿ

ಮಾವಿನ ವಾಟೆಯಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 14 =
Remember me
