ನವದೆಹಲಿ:ಪ್ರಧಾನಿ ಮೋದಿ ವಿರುದ್ಧ​ ವಾಗ್ದಾಳಿ ನಡೆಸುವ ಭರದಲ್ಲಿ ಬಾಲಿವುಡ್​ ಬ್ಯೂಟಿ ಐಶ್ವರ್ಯಾ ರೈ ಬಗ್ಗೆ ಹಗುರವಾಗಿ ಮಾತನಾಡಿದ ರಾಹುಲ್​ ಗಾಂಧಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಬಿಜೆಪಿ ಕೂಡ ಕೆಂಡಾಮಂಡಲವಾಗಿದೆ. ನಟಿ ಐಶ್ವರ್ಯಾ ರೈ ಅವರನ್ನು ಅವಮಾನಿಸಿದ ಬಳಿಕ ರಾಹುಲ್​ ಗಾಂಧಿ ಅವರು ಇನ್ನಷ್ಟು ಕೆಳಮಟ್ಟಕ್ಕೆ ಕುಸಿದರು ಎಂದು ಬಿಜೆಪಿ ಜರಿದಿದೆ.
ರಾಜ್ಯ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ಅವರು ಕನ್ನಡತಿಯಾಗಿರುವ ಐಶ್ವರ್ಯಾ ರೈ ಅವರನ್ನು ಅವಮಾನಿಸಿರುವ ಬಗ್ಗೆ ಪ್ರಶ್ನೆ ಮಾಡಿದೆ.
ಭಾರತೀಯರ ನಿರಂತರ ನಿರಾಕರಣೆಗಳಿಂದ ಹತಾಶೆ ಒಳಗಾಗಿರುವ ರಾಹುಲ್ ಗಾಂಧಿ, ಭಾರತದ ಹೆಮ್ಮೆಯ ಐಶ್ವರ್ಯಾ ರೈ ಅವರನ್ನು ಅವಮಾನಿಸುವ ಇನ್ನಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ. ಶೂನ್ಯ ಸಾಧನೆ ಮಾಡಿರುವ ನಾಲ್ಕನೇ ತಲೆಮಾರಿನ ರಾಜಕೀಯ ಮನೆತನದ ಕುಡಿಯು ಈಗ ಭಾರತಕ್ಕೆ ಹೆಚ್ಚು ಕೀರ್ತಿ ತಂದ ಐಶ್ವರ್ಯಾ ರೈ ವಿರುದ್ಧ ನಿಂದನೆಗೆ ಇಳಿದಿದೆ ಎಂದು ಬಿಜೆಪಿ ಕುಟುಕಿದೆ.
ಸಿದ್ದರಾಮಯ್ಯನವರೇ, ನಿಮ್ಮ ಬಾಸ್ ಕನ್ನಡಿಗರನ್ನು ಅವಮಾನಿಸುವುದನ್ನು ಮುಂದುವರೆಸಿದ್ದಾರೆ. ಈ ಸಂದರ್ಭದಲ್ಲಿ ನೀವು ನಿಮ್ಮ ಕನ್ನಡಾಭಿಮಾನವನ್ನು ಎತ್ತಿ ಹಿಡಿಯುತ್ತೀರಾ? ಮತ್ತು ಇಂತಹ ಅಗೌರವದ ಮಾತುಗಳ ವಿರುದ್ಧ ಮಾತನಾಡುತ್ತೀರಾ? ಅಥವಾ ನಿಮ್ಮ ಸಿಎಂ ಕುರ್ಚಿಯನ್ನು ಕಾಪಾಡಲು ಮೌನವಾಗಿರುತ್ತೀರಾ? ಎಂದು ಬಿಜೆಪಿ ಕುಟುಕಿದೆ.
ವಿವಾದ ಏನು?ಜನವರಿ 22 ರಂದು ನಡೆದ ರಾಮಮಂದಿರ ಸಮಾರಂಭದಲ್ಲಿ ಐಶ್ವರ್ಯಾ ರೈ ಉಪಸ್ಥಿತಿಯ ವಿರುದ್ಧ ರಾಹುಲ್ ಗಾಂಧಿ ಮಾತನಾಡಿರುವ ವಿಡಿಯೋ ಕ್ಲಿಪ್‌ಗಳನ್ನು ಬಿಜೆಪಿ ಹಂಚಿಕೊಂಡಿದೆ. ಆದರೆ, ಗಮನಾರ್ಹ ಸಂಗತಿಯೆಂದರೆ, ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯಲ್ಲಿ ಐಶ್ವರ್ಯಾ ರೈ ಹಾಜರಿರಲಿಲ್ಲ. ಬದಲಾಗಿ ಪತಿ ಅಭಿಷೇಕ್ ಬಚ್ಚನ್ ಮತ್ತು ಮಾವ ಅಮಿತಾಭ್​ ಬಚ್ಚನ್ ಹಾಜರಿದ್ದರು.
Congress Clown Prince@RahulGandhinow has a dangerous & creepy obsession with successful & self-made women.
Frustrated by constant rejections by Indians, Rahul Gandhi has sunk to a new low of demeaning India's Pride Aishwarya Rai.
A fourth-generation dynast, with zero…pic.twitter.com/6TA442wWTZ
— BJP Karnataka (@BJP4Karnataka)February 21, 2024

ಭಾನುವಾರ ಪ್ರಯಾಗ್‌ರಾಜ್‌ನಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರಾ ಮೆರವಣಿಗೆಯಲ್ಲಿ ಮಾತನಾಡಿದ ರಾಹುಲ್​, ನೀವು ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ನೋಡಿದ್ದೀರಾ? ಅಲ್ಲಿ ಒಬ್ಬ ಒಬಿಸಿ ಮುಖವಾದರೂ ಇತ್ತೆ? ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ ಮತ್ತು ನರೇಂದ್ರ ಮೋದಿ ಇದ್ದರು? ದೇಶದ ಸಮಸ್ಯೆಗಳನ್ನು ಯಾವ ಟಿವಿಯಲ್ಲಿಯೂ ತೋರಿಸುತ್ತಿಲ್ಲ. ಕೇವಲ ಮೋದಿಯವರನ್ನು 24 ಗಂಟೆ ತೋರಿಸುತ್ತಾರೆ. ಅದನ್ನ ಬಿಟ್ಟು ಐಶ್ವರ್ಯಾ ರೈ ಕುಣಿಯುವುದನ್ನು ತೋರಿಸುತ್ತಾರೆ ಎಂದು ರಾಹುಲ್​ ಟೀಕಿಸಿದ್ದಾರೆ. ಇದೇ ಮಾತು ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಕಾರ್ಯಕ್ರಮದಲ್ಲಿ ಸಾವಿರಾರು ಗಣ್ಯರು, ರಾಜಕಾರಣಿಗಳು, ಗಣ್ಯರು ಪಾಲ್ಗೊಂಡಿದ್ದರು. ಆದಾಗ್ಯೂ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕಾರ್ಯಕ್ರಮವನ್ನು ಬಿಟ್ಟುಬಿಡಲು ನಿರ್ಧರಿಸಿದವು, ಬಿಜೆಪಿ ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.(ಏಜೆನ್ಸೀಸ್​)
ಹಾವು ಕಡಿತಕ್ಕೆ ಒಂಟೆಯ ಕಣ್ಣೀರೇ ಮದ್ದು! ಅಚ್ಚರಿಯಾದ್ರೂ ಇದು ಸತ್ಯ, ಹಾವಿನ ವಿಷವೂ ಏನು ಮಾಡಲಾಗದು

ಹುಡುಗಿಯರಿಗೆ ಇದು ಸುಲಭ, ಹುಡುಗರ ಬಗ್ಗೆ ಯೋಚಿಸಿದ್ರೆ ಅಯ್ಯೋ ಪಾಪ ಅನ್ಸುತ್ತೆ ಎಂದ ನಿತ್ಯಾ ಮೆನನ್!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
