ನವದೆಹಲಿ:ವಿಶ್ವ ಪ್ರಾಣಿಗಳ ದಿನದ ಅಂಗವಾಗಿ ತಮ್ಮ ತಾಯಿ ಸೋನಿಯಾ ಗಾಂಧಿಗೆ ಅವರ ಪುತ್ರ, ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಗೋವಾದ ವಿಶೇಷ ತಳಿಯ ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ್ದರು. ನಾಯಿಮರಿಗೆ ನೂರಿ ಎಂದು ಹೆಸರಿಟ್ಟಿದ್ದರು. ಆದರೆ, ಆ ನಾಯಿಮರಿಗೆ ನೂರಿ ಎಂದು ಹೆಸರಿಟ್ಟಿದ್ದಕ್ಕೆ ಅಸಾದುದ್ದೀನ್​ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಆಕ್ಷೇಪಿಸಿದೆ.
ನಾಯಿಮರಿಗೆ ನೂರಿ ಎಂದು ಹೆಸರಿಡುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಅವಮಾನ ಮಾಡಿದ್ದಾರೆ. ಈ ಕ್ರಮ ಸರಿಯಲ್ಲ. ಇದು ಖಂಡನೀಯ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಐಎಂಐಎಂ ಪಕ್ಷದ ನಾಯಕ ಮೊಹಮ್ಮದ್​ ಫರ್ಹಾನ್, ರಾಹುಲ್​ ಗಾಂಧಿ ತಮ್ಮ ಮನೆಯ ಸಾಕು ನಾಯಿಗೆ ನೂರಿ ಎಂದು ಹೆಸರಿಡುವ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳಿಗೆ ಅವಮಾನ ಮಾಡಿದ್ಧಾರೆ. ಮ್ಮ ಮುದ್ದಿನ ನಾಯಿಗೆ ನೂರಿ ಎಂದು ಹೆಸರಿಟ್ಟಿರುವುದು ಸರಿಯಲ್ಲ. ರಾಹುಲ್ ಗಾಂಧಿ ಕ್ರಮ ಖಂಡನೀಯ ಮತ್ತು ನಾಚಿಕೆಗೇಡಿನ ಸಂಗತಿ.
ಇದನ್ನೂ ಓದಿ:ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಸಾರಥ್ಯದಲ್ಲಿ ಹೆಮ್ಮರವಾಗಿ ಬೆಳೆದ ವಿದ್ಯಾಕಾಶಿ; ಜೆಎಸ್​ಎಸ್​ ಸುವರ್ಣ ಮಹೋತ್ಸವ: 1973-2023
ರಾಹುಲ್ ಗಾಂಧಿ ನೂರಿ ಎಂಬ ಹೆಸರನ್ನು ಹೊಂದಿರುವ ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾಡಿದ ಅವಮಾನವಿದು. ಇದು ಮುಸ್ಲಿಂ ಹೆಣ್ಣುಮಕ್ಕಳು ಮತ್ತು ಮುಸ್ಲಿಂ ಸಮುದಾಯದ ಬಗ್ಗೆ ಗಾಂಧಿ ಕುಟುಂಬ ಯಾವ ರೀತಿಯ ಗೌರವ ಹೊಂದಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಎಐಎಂಐಎಂ ಪಕ್ಷದ ನಾಯಕ ಮೊಹಮ್ಮದ್​ ಫರ್ಹಾನ್ ವಾಗ್ದಾಳಿ ನಡೆಸಿದ್ದಾರೆ.
ಗೋವಾದ ವಿಶೇಷ ತಳಿಯಾದ 3 ತಿಂಗಳ ವಯಸ್ಸಿನ ಜಾಕ್ ರಸೆಲ್ ಟೆರಿಯರ್ ನಾಯಿಮರಿಯನ್ನು ರಾಹುಲ್ ಗಾಂಧಿ ತಮ್ಮ ಮನೆಗೆ ತಂದಿದ್ದರು. ಈ ನೂರಿಯನ್ನು ನೋಡಿ ಸೋನಿಯಾ ಗಾಂಧಿ ಕೂಡ ಅಚ್ಚರಿಯಿಂದ, ಎತ್ತಿ ಮುದ್ದಾಡಿದ ವಿಡಿಯೋವನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + twelve =
Remember me
