ತಿರುವನಂತಪುರಂ:ಆನ್​ಲೈನ್​ನಲ್ಲಿ ತರಗತಿ ನಡೆಸುತ್ತಿದ್ದ ಶಿಕ್ಷಕಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಕಾಮೆಂಟ್​ ಮಾಡಿದವರ ವಿರುದ್ಧ ಕೇರಳದ ಸೈಬರ್​ ಕ್ರೈಂ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಗರ್ಭಿಣಿ ಆನೆ ಕೊಂದ ಪ್ರಕರಣದಲ್ಲಿ ಮೂವರ ಬಂಧನ: ಮರಣೋತ್ತರ ವರದಿಯಲ್ಲಿ ನೋವಿನ ಸಂಗತಿ
ಕೇರಳದ ಶಿಕ್ಷಣಕ್ಕಾಗಿ ಮೂಲಭೂತ ಸೌಕರ್ಯ ಮತ್ತು ತಂತ್ರಜ್ಞಾನ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವರು ಎಡಿಜಿಪಿ ಮನೋಜ್​ ಅಬ್ರಾಹಂ ಅವರಿಗೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಕ್ರಮ ತೆಗದುಕೊಳ್ಳಲಾಗಿದೆ.
ಫೇಸ್​ಬುಕ್​, ಇನ್​ಸ್ಟಾಗ್ರಾಂ, ಯೂಟ್ಯೂಬ್​ ಮತ್ತು ವಾಟ್ಸ್​ಆ್ಯಪ್​ಗಳಲ್ಲಿ ಶಿಕ್ಷಕಿ ವಿರುದ್ಧ ಅವಹೇಳನಕಾರಿಯಾಗಿ ಕಾಮೆಂಟ್​ ಮಾಡಿದ್ದು, ರಾಜ್ಯ ಯುವ ಆಯೋಗವು ಸಹ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದೆ. ಯುವ ಆಯೋಗದ ಚೇರ್​ ಪರ್ಸನ್​ ಚಿಂಥ ಜೆರೊಮ್​ ಘಟನೆ ಸಂಬಂಧ ಕಿಡಿಕಾರಿದ್ದು, ಶಿಕ್ಷಕಿ ವಿರುದ್ಧ ಅಸಭ್ಯ ಕಾಮೆಂಟ್​ ಮಾಡಿದವರು ವಿಕೃತ ಮನಸ್ಸಿನವರು ಹಾಗೂ ಇದನ್ನು ಕೇರಳ ಒಪ್ಪುವುದಿಲ್ಲ. ಮತ್ತಿದು ನಮ್ಮ ಸಂಸ್ಕೃತಿಗೆ ವಿರುದ್ಧ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:PHOTO GALLERY| ಪಾರುಲ್​ಗೆ ಬರ್ತಡೇ ಖುಷಿ​: ಬಚ್ಚನ್​ ಬ್ಯೂಟಿಯ ಹಾಟ್​ ಫೋಟೋ ನೋಡಿದ್ರೆ ಪ್ಯಾರ್​ಗೆ ಆಗ್ಬಿಡುತ್ತೆ!
ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರ ಮತ್ತು ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವಾಗ ಅವರನ್ನು ಅವಮಾನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಾಧ್ಯವಾದಷ್ಟು ಬೇಗ ಅಪರಾಧಿಗಳನ್ನು ಬಂಧಿಸಿ ಕಾನೂನು ಕ್ರಮಗಳನ್ನು ತೆಗದುಕೊಳ್ಳಬೇಕೆಂದು ಯುವ ಆಯೋಗ ಆಗ್ರಹಿಸುತ್ತದೆ. ಕ್ರಮ ತೆಗೆದುಕೊಂಡ ಬಗ್ಗೆ ಎರಡು ವಾರಗಳಲ್ಲಿ ವರದಿ ಸಲ್ಲಿಸಲು ಆಯೋಗ ಕೇಳಿದೆ.
ಶಿಕ್ಷಕಿಯನ್ನು ಟ್ರೋಲ್​ ಮಾಡಿದ್ದಲ್ಲದೆ ಅವರ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿ ಅಸಭ್ಯವಾಗಿ ಕಾಮೆಂಟ್​ ಮಾಡಿರುವುದು ಗಮನಕ್ಕೆ ಬಂದಿದೆ. ಇದರೊಂದಿಗೆ ಶಿಕ್ಷಕಿಯ ಹೆಸರಿನಲ್ಲಿ ಅನೇಕ ನಕಲಿ ಖಾತೆಯು ಸಹ ಸೃಷ್ಟಿಸಲಾಗಿದೆ. ವಿಕ್ಟರ್​ ಚಾನಲ್​ ಹೆಸರಿನ ಯೂಟ್ಯೂಬ್​ ಚಾನಲ್​ನಲ್ಲೂ ಸಹ ಶಿಕ್ಷಕಿಯ ವಿಡಿಯೋಗೆ ಅಶ್ಲೀಲವಾಗಿ ಕಾಮೆಂಟ್​ ಮಾಡಿದ್ದಾರೆ. ಅನೇಕ ಕಾಮೆಂಟ್​ಗಳನ್ನು ವಿಕ್ಟರ್ಸ್​ ಚಾನಲ್​ ತೆಗೆದು ಹಾಕಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಬೇಡಮ್ಮ ಆನ್​ಲೈನ್ ಗುಮ್ಮ: ತಜ್ಞರು, ವೈದ್ಯರು, ನಟರ ಆಕ್ರೋಶ, ಇಲಾಖೆಯಲ್ಲೇ ಆಕ್ಷೇಪ
ಆರ್​ಟಿಇ ಪ್ರವೇಶ ಪ್ರಕ್ರಿಯೆ ಆರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 6 =
Remember me
