ನವದೆಹಲಿ:ಕಳೆದ ಮೂರುದಿನಗಳಿಂದ ಈಶಾನ್ಯ ದೆಹಲಿಯಲ್ಲಿ ಸಿಎಎ ಪರ-ವಿರೋಧಿ ಬಣಗಳ ಪ್ರತಿಭಟನೆ ನಡೆಯುತ್ತಿದೆ.
ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸರು, ರಕ್ಷಣಾ ಸಿಬ್ಬಂದಿ ಮೇಲೆ ಉದ್ರಿಕ್ತರ ಗುಂಪು ದಾಳಿ ಮಾಡುತ್ತಿದೆ. ಕಲ್ಲು ತೂರಾಟ, ಆ್ಯಸಿಡ್​ ದಾಳಿ ಮಾಡುತ್ತಿದೆ.
ಈ ಗಲಭೆಯಲ್ಲಿ ಪೊಲೀಸ್ ಪೇದೆಯೊಬ್ಬ ಮೃತಪಟ್ಟಿದ್ದು ವರದಿಯಾಗಿದೆ. ನಿನ್ನೆ ಪ್ಯಾರಾಮಿಲಿಟರಿ ಸೈನಿಕನೋರ್ವನ ಮೇಲೆ ಆ್ಯಸಿಡ್​ ದಾಳಿಯಾಗಿತ್ತು. ಇಂದು ಬೆಳಗ್ಗೆ ಗುಪ್ತಚರ ಇಲಾಖೆ ಅಧಿಕಾರಿಯೋರ್ವನ ಮೃತದೇಹ ಮೋರಿಯಲ್ಲಿ ಪತ್ತೆಯಾಗಿದೆ.
ಈ ಮೃತ ಅಧಿಕಾರಿಯನ್ನು ಅಂಕಿತ್​ ಶರ್ಮಾ ಎಂದು ಗುರುತಿಸಲಾಗಿದೆ. ಅಂಕಿತ್​ ಶರ್ಮಾ ಮಂಗಳವಾರ ಸಂಜೆ ಮನೆಗೆ ಹೋಗುತ್ತಿದ್ದಾಗ, ಚಾಂದ್​ ಬಾಘ್​ ಸೇತುವೆ ಮೇಲೆ ಅವರ ಮೇಲೆ ಪ್ರತಿಭಟನಾಕಾರರ ಗುಂಪು ಹಲ್ಲೆ ಮಾಡಿದೆ. ಈ ವೇಳೆ ಮೃತಪಟ್ಟ ಅವರನ್ನು ಮೋರಿಯೊಳಗೆ ಎಸೆದು ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರದಿಂದಲೂ ಕಾಣೆಯಾಗಿದ್ದ ಅಂಕಿತ್​ ಶರ್ಮಾರನ್ನು ಮನೆಯವರು ಹುಡುಕುತ್ತಿದ್ದರು. ಇಂದು ಮೃತದೇಹ ಸಿಕ್ಕಬಳಿಕ ಮಾತನಾಡಿದ ಅಂಕಿತ್​ ಅವರ ತಂದೆ ರವೀಂದ್ರ ಶರ್ಮಾ, ತಮ್ಮ ಮಗನ ಮೇಲೆ ಹಲ್ಲೆ ನಡೆಸಿದವರು ಆಮ್​ ಆದ್ಮಿ ಪಾರ್ಟಿ ಬೆಂಬಲಿಗರು ಎಂದು ಆರೋಪಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + twelve =
Remember me
