ಚೆನ್ನೈ:ಕರೊನಾ ಸೋಂಕು ಹರಡುವಿಕೆಗೆ ಭೀಕರತೆಯನ್ನು ಗಮನದಲ್ಲಿ ಇಟ್ಟುಕೊಂಡ ತಮಿಳುನಾಡು ಸರ್ಕಾರ, ಹೀಗೆಯೇ ಮುಂದುವರೆದರೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ ಎಂದು ಮನಗಂಡಿದೆ. ಇದೇ ಕಾರಣಕ್ಕೆ ರಾಜ್ಯದ ಐದು ಮಹಾನಗರಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಮಾಡಲಾಗಿದೆ.ಚೆನ್ನೈ, ಕೊಯಮತ್ತೂರು, ಮಧುರೈ, ಸೇಲಂ, ತಿರುಪುರ ನಗರಗಳಲ್ಲಿ ಇನ್‌ಸ್ಟೆಂಟ್‌ ಲಾಕ್‌ಡೌನ್‌ ಹೇರಲಾಗಿದೆ. ಈ ನಿಯಮದ ಅನ್ವಯ ದಿನಸಿಗಳನ್ನು ತೆಗೆದುಕೊಳ್ಳಲು ಕೂಡ ಜನರು ಮನೆಯಿಂದ ಹೊರಕ್ಕೆ ಹೋಗುವಂತಿಲ್ಲ. ಈ ಐದು ನಗರಗಳಿಂದಲೇ ಶೇ.46ರಷ್ಟು ಕರೊನಾ ಸೋಂಕಿನ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.ಈಗಿರುವ ನಿಬಂಧನೆಗಳನ್ನು ಇನ್ನಷ್ಟು ಬಿಗಿಗೊಳಿಸಿ, ಸಂಪೂರ್ಣ ಲಾಕ್‌ಡೌನ್‌ ಮಾಡಲಾಗಿದೆ. ಇದು ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ್ದಾರೆ. ರಾತ್ರಿ 9 ಗಂಟೆಯವರೆಗೆ ಈ ನಿಯಮವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಸೂಚಿಸಿದ್ದಾರೆ.ಚೆನ್ನೈ, ಕೊಯಮತ್ತೂರು ಮತ್ತು ಮಧುರೈಗಳಲ್ಲಿ ನಾಲ್ಕು ದಿನ ಹಾಗೂ ಸೇಲಂ, ತಿರುಪುರಗಳಲ್ಲಿ ಮೂರು ದಿನ ಲಾಕ್‌ಡೌನ್‌ ನಿಯಮಗಳು ಅನ್ವಯ ಆಗಲಿದೆ. ಪರಿಸ್ಥಿತಿ ವೀಕ್ಷಿಸಿ ಇದನ್ನು ಮುಂದುವರೆಸಬೇಕೇ ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.ಈ ಸಮಯದಲ್ಲಿ ದಿನಸಿ ಅಂಗಡಿ, ತರಕಾರಿ ಮಾರುಕಟ್ಟೆ, ಸಾರ್ವಜನಿ ಸಂಚಾರ ಸೇರಿದಂತೆ ಯಾವುದೂ ಲಭ್ಯ ಇರುವುದಿಲ್ಲ. ಮೊಬೈಲ್‌ ಔಟ್‌ಲೆಟ್‌ಗಳ ಮೂಲಕ ತರಕಾರಿ ಮತ್ತು ಹಣ್ಣು ಮನೆ ಬಾಲಿಲಿಗೆ ಬರಲಿವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.ಚೆನ್ನೈ ಒಂದರಲ್ಲಿಯೇ ಶೇ.27 ಪ್ರಕರಣಗಳು ದಾಖಲಾಗಿವೆ. ಇಲ್ಲಿ 495 ಕರೊನಾ ಸೋಂಕಿತರಿದ್ದು, ಕೊಯಮತ್ತೂರಿನಲ್ಲಿ 141, ಮಧುರೈನಲ್ಲಿ 60, ತಿರುಪುರದಲ್ಲಿ 110 ಹಾಗೂ ಸೇಲಂನಲ್ಲಿ 30 ಪ್ರಕರಣಗಳು ದಾಖಲಾಗಿವೆ.ಇಲ್ಲಿಯವರೆಗೆ 1,755 ಕರೊನಾ ಕೇಸ್‌ಗಳು ಪತ್ತೆಯಾಗಿದ್ದು, ಒಬ್ಬರೂ ಗುಣಮುಖರಾಗಿಲ್ಲ. ಈಗಾಗಲೇ 22 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್‌)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eighteen − fourteen =
Remember me
