ಅಮೆರಿಕದ ಫೆಡರಲ್ ರಿಸರ್ವ್ ಬುಧವಾರ ಬಡ್ಡಿ ದರವನ್ನು 25 ಅಂಕಗಳಷ್ಟು ಹೆಚ್ಚಿಸಿದೆ. ಬ್ಯಾಂಕಿಂಗ್ ವಲಯದಲ್ಲಿನ ಪ್ರಕ್ಷುಬ್ಧತೆ ಹಾಗೂ ಹಣದುಬ್ಬರದ ವಿರುದ್ಧದ ಹೋರಾಟಕ್ಕೆ ಅಮೆರಿಕ ಕೇಂದ್ರ ಬ್ಯಾಂಕ್ ಆದ್ಯತೆಯನ್ನು ನೀಡುತ್ತದೆ ಎಂಬ ಮಹತ್ವದ ಸಂಕೇತವನ್ನು ಈ ನಿರ್ಧಾರವು ರವಾನಿಸುತ್ತದೆ. ಗುರುವಾರದಂದು ಬ್ಯಾಂಕ್ ಆಫ್ ಇಂಗ್ಲೆಂಡ್ ಕೂಡ ಬಡ್ಡಿ ದರವನ್ನು ಶೇ. 0.25ರಷ್ಟು ಹೆಚ್ಚಿಸಿದೆ. 2021ರ ಡಿಸೆಂಬರ್​ನಿಂದ ಇದು ಸತತ ಹನ್ನೊಂದನೇ ಹೆಚ್ಚಳವಾಗಿದೆ. ಫೆಡರಲ್ ರಿಸರ್ವ್​ನ ಈ ಕ್ರಮಗಳು ಜಗತ್ತಿನ ಇತರೆ ದೇಶಗಳ ಕೇಂದ್ರ ಬ್ಯಾಂಕ್​ಗಳ ನಿರ್ಧಾರಗಳ ಮೇಲೆಯೂ ಪ್ರಭಾವ ಬೀರುತ್ತವೆ. ಏಕೆಂದರೆ ಈ ಬ್ಯಾಂಕ್​ಗಳು ಆರ್ಥಿಕ ಬೆಳವಣಿಗೆ, ಹಣದುಬ್ಬರ ಮತ್ತು ಕರೆನ್ಸಿ ಚಂಚಲತೆಯ ನಡುವೆ ಸೂಕ್ಷ್ಮವಾದ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತವೆ.
ಫೆಡರಲ್ ರಿಸರ್ವ್​ನಿಂದ ಬಡ್ಡಿ ದರ ಹೆಚ್ಚಳವು ನಿರೀಕ್ಷಿತವೇ ಆಗಿತ್ತು. ಹೆಚ್ಚುತ್ತಿರುವ ಹಣದುಬ್ಬರವನ್ನು (ಬೆಲೆ ಏರಿಕೆ) ನಿಯಂತ್ರಿಸಲು ಈ ಕ್ರಮವನ್ನು ಅದು ಕೈಗೊಂಡಿದೆ. ಆದರೆ, ಹಣದುಬ್ಬರವು ನಿರೀಕ್ಷೆಗಿಂತಲೂ ಅಧಿಕವಾಗಿರುವುದರಿಂದ ಈ ವರ್ಷದಲ್ಲಿ ಕನಿಷ್ಠ ಮತ್ತೊಂದು ಬಾರಿಯಾದರೂ ಬಡ್ಡಿ ದರ ಏರಿಕೆ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇದೇ ರೀತಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಕೂಡ ಮುಂದೆ ಬಡ್ಡಿ ದರ ಏರಿಕೆ ಮಾಡಲಿದೆ ಎಂಬ ಮುನ್ಸೂಚನೆಗಳು ಸ್ಪಷ್ಟವಾಗಿ ಕಂಡುಬರುತ್ತಿವೆ. ಇದರಿಂದಾಗಿ, ಇಎಂಐಗಳು ಮತ್ತು ಠೇವಣಿ ದರಗಳಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಇದನ್ನೂ ಓದಿ:ರಾಜಧಾನಿಯಲ್ಲಿ ಫ್ಲೆಕ್ಸ್​ ಅಳವಡಿಸಿದರೆ ಕಠಿಣ ಕ್ರಮ: ಸುತ್ತೋಲೆ ಹೊರಡಿಸಿದ ಬಿಬಿಎಂಪಿ
ಅಮೆರಿಕದ ಫೆಡರಲ್ ರಿಸರ್ವ್ ಮತ್ತು ಇತರ ಕೇಂದ್ರೀಯ ಬ್ಯಾಂಕ್​ಗಳನ್ನು ಬಡ್ಡಿ ದರ ಹೆಚ್ಚಳದಲ್ಲಿ ಕುರುಡಾಗಿ ಅನುಸರಿಸುವುದು ಅನಿವಾರ್ಯವಲ್ಲವಾದರೂ ಭಾರತದಲ್ಲಿನ ಬಡ್ಡಿ ದರಗಳು ವಾಸ್ತವವಾಗಿ ಅಮೆರಿಕದಲ್ಲಿನ ದರಗಳೊಂದಿಗೆ ಸಮಾನಾಂತರವಾಗಿ ಸಾಗುತ್ತವೆ. ಜನವರಿ ಮತ್ತು ಫೆಬ್ರುವರಿಯಲ್ಲಿ ಗ್ರಾಹಕ ಬೆಲೆ ಸೂಚ್ಯಂಕವು (ಸಿಪಿಐ) ಶೇ. 6ರ ಗಡಿಯನ್ನು ದಾಟಿರುವುದರಿಂದ ಏಪ್ರಿಲ್ ತಿಂಗಳಲ್ಲಿ ನಡೆಯುವ ಆರ್​ಬಿಐನ ನೀತಿ ವಿಮರ್ಶೆ ಸಭೆಯಲ್ಲಿ 25 ಅಂಶಗಳಷ್ಟು ಬಡ್ಡಿ ದರ ಹೆಚ್ಚಳವಾಗಬಹುದಾಗಿದೆ ಎಂದು ತಜ್ಞರು ಹೇಳುತ್ತಾರೆ. ಹದಗೆಡುತ್ತಿರುವ ಅಮೆರಿಕ ಹಣಕಾಸು ಪರಿಸ್ಥಿತಿ, 2023-24ರಲ್ಲಿ ದುರ್ಬಲ ದೇಶೀಯ ಬೇಡಿಕೆಯ ಸಾಧ್ಯತೆ ಪರಿಣಾಮವಾಗಿ ಆರ್​ಬಿಐನಿಂದ ಬಡ್ಡಿ ದರ ಹೆಚ್ಚಳ ಸಾಧ್ಯತೆಯೇ ದಟ್ಟವಾಗಿದೆ.
ಏಪ್ರಿಲ್ 3ರಿಂದ ಸಭೆ:ಆರ್​ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ತನ್ನ ಕಾರ್ಯತಂತ್ರವನ್ನು ನಿರ್ಧರಿಸಲು ಬರುವ ಏಪ್ರಿಲ್ 3-6 ರಂದು ಸಭೆ ಸೇರಲಿದೆ. ಬಡ್ಡಿ ದರ ಹೆಚ್ಚಳವನ್ನು ಈ ಸಂದರ್ಭದಲ್ಲಿ ಘೋಷಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ವಿಶ್ವಕರ್ಮ ಸಮುದಾಯ ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಲು ಇದು ಸಕಾಲ: ಕಂಬಾರ
ಆರು ಬಾರಿ ಹೆಚ್ಚಳ:ಪ್ರಸ್ತುತ ಹಣಕಾಸು ವರ್ಷದಲ್ಲಿ ಮೇ ತಿಂಗಳಿನಿಂದ ಇದುವರೆಗೆ ಆರು ಬಾರಿ ರೆಪೋ ದರವನ್ನು ಆರ್​ಬಿಐ ಏರಿಕೆ ಮಾಡಿದ್ದು, ಒಟ್ಟಾರೆಯಾಗಿ ಶೇ. 2.5ರಷ್ಟು ಬಡ್ಡಿ ದರ ಹೆಚ್ಚಳ ಮಾಡಲಾಗಿದೆ. ಈ ಹಣಕಾಸು ವರ್ಷದ ಮೇ 4ರಂದು 40 ಮೂಲ ಅಂಕಗಳಷ್ಟು ಬಡ್ಡಿ ದರವನ್ನು ಹೆಚ್ಚಳ ಮಾಡಿತ್ತು. ನಂತರ ಜೂನ್, ಆಗಸ್ಟ್ ಮತ್ತು ಸೆಪ್ಟೆಂಬರ್​ನಲ್ಲಿ ಮೂರು ಬಾರಿ 50 ಮೂಲ ಅಂಕಗಳಷ್ಟು ಏರಿಸಲಾಗಿತ್ತು. ಕಳೆದ ಡಿ. 6 ರಂದು 35 ಅಂಕ ಏರಿ ಮಾಡಲಾಗಿತ್ತು. ಇತ್ತೀಚೆಗೆ ಕಳೆದ ಫೆ. 8ರಂದು 25 ಅಂಕ ಹೆಚ್ಚಳ ಕೈಗೊಳ್ಳಲಾಗಿತ್ತು. ನಿರಂತರವಾಗಿ ರೆಪೊ ದರ ಹೆಚ್ಚಳದ ಪರಿಣಾಮವನ್ನು ಸಾಲಗಾರರು ಎದುರಿಸುವಂತಾಗಿದೆ. ಇದರಿಂದಾಗಿ, ಸಾಲ ಪಡೆದುಕೊಂಡ ಗ್ರಾಹಕರು ಸಾಲ ಮರುವಪಾವತಿಯ ಕಂತುಗಳ ಮೊತ್ತ ಅಥವಾ ಸಾಲ ಮರುಪಾವತಿ ಅವಧಿ ಈಗಾಗಲೇ ಸಾಕಷ್ಟು ಅಧಿಕವಾಗಿದ್ದು, ಈಗ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ.
ಅಮೆರಿಕ ಮತ್ತು ಇತರ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿ ಬಡ್ಡಿ ದರಗಳು ಏರಿದಾಗ ವಿದೇಶಿ ಹೂಡಿಕೆದಾರರು, ವಿಶೇಷವಾಗಿ ಅಮೆರಿಕದ ಹೂಡಿಕೆದಾರರ ಅಮೆರಿಕದ ಸಾಲ ಮತ್ತು ಇತರ ಮಾರ್ಗಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಾರೆ. ಇದು ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಹಣದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. 2023ರ ಜನವರಿ ಆರಂಭದಿಂದ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್​ಪಿಐ) ಭಾರತೀಯ ಷೇರುಗಳಿಂದ 27,000 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಂಡಿದ್ದಾರೆ. ಎಫ್​ಪಿಐ ಹರಿವುಗಳು ಭಾರತಕ್ಕೆ ಮುಖ್ಯವಾಗಿದೆ. ಏಕೆಂದರೆ ಚಾಲ್ತಿ ಖಾತೆ ಕೊರತೆಯಿಂದ ಉಂಟಾಗುವ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಇವು ಸಹಾಯ ಮಾಡುತ್ತವೆ. ಕಳೆದ ವರ್ಷದಲ್ಲಿ ಎಫ್​ಪಿಐ ಹರಿವುಗಳು ಪುನಶ್ಚೇತನ ಕಂಡಿದ್ದವು. ಆದರೆ, ಹಣದುಬ್ಬರದ ವಿರುದ್ಧ ಫೆಡರಲ್ ರಿಸರ್ವ್ ಹೋರಾಟ ಮತ್ತು ಚೀನಾದಲ್ಲಿ ಮಾರುಕಟ್ಟೆ ಪುನರಾರಂಭದಿಂದ ಭಾರತದ ಷೇರು ಮಾರುಕಟ್ಟೆಯಲ್ಲಿ ಎಫ್​ಪಿಐ ಹರಿವು ಈಗ ಕಡಿಮೆಯಾಗತೊಡಗಿದೆ.
ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ತುಟ್ಟಿ ಭತ್ಯೆ ಶೇ. 4 ಹೆಚ್ಚಳ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − seven =
Remember me
