ನವದೆಹಲಿ:ಬಿಯರ್​ ಎಂದಾಕ್ಷಣ ಮದ್ಯಪಾನ ಪ್ರಿಯರು ಒಮ್ಮೆಲೆಗೆ ಚುರುಕಾಗುವುದು ಸಹಜ. ಅದರಲ್ಲೂ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಚಿಲ್ಡ್​ ಬಿಯರ್​ ಸಿಕ್ಕರೆ ಹೊಟ್ಟೆ ತಂಪಾಗೋದಂತು ಪಕ್ಕಾ. ಬಿಯರ್​ ಬಗ್ಗೆ ಇವರು ಇಷ್ಟೆಲ್ಲಾ ಯಾಕೆ ಮಾತನಾಡುತ್ತಿದ್ದಾರೆ ಎಂದು ಊಹಿಸುತ್ತಿದ್ದೀರಾ. ಏಕೆಂದರೆ ಇಂದು ಅಂತರಾಷ್ಟ್ರೀಯ ಬಿಯರ್​ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಆಂತರಾಷ್ಟ್ರೀಯ ಬಿಯರ್​ ದಿನವನ್ನು ಆಗಸ್ಟ್​ ತಿಂಗಳ ಮೊದಲ ಶುಕ್ರವಾರದೊಂದು ಆಚರಿಸಲಾಗುತ್ತಿದೆ. ಈ ವರ್ಷ ಅಂತರಾಷ್ಟ್ರೀಯ ಬಿಯರ್​ ದಿನಾಚರಣೆಯು ಆಗಸ್ಟ್​ 4ರಂದು ಆಚರಿಸಲಾಗುತ್ತಿದ್ದು, ಇದರ ಇತಿಹಾಸ ಹಾಗೂ ಮಹತ್ವ ಇಲ್ಲಿದೆ.
ಆಂತರಾಷ್ಟ್ರೀಯ ಬಿಯರ್​ ದಿನವನ್ನು ಆಚರಿಸುವುದು ಮದ್ಯಪಾನ ಪ್ರಿಯರಿಗೆ ತಮ್ಮ ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಕುಟುಂಬದೊಂದಿಗೆ ಸಮಯ ಕಳೆಯಲು ಒಂದು ಉತ್ತಮ ಅವಕಾಶವಾಗಿದೆ. ವಿವಿಧ ರೀತಿಯ ಬಿಯರ್ ಬ್ರ್ಯಾಂಡ್​ಗಳು ಮತ್ತು ಸ್ಥಳೀಯ ಬ್ರೂವರೀಸ್ ಉತ್ತೇಜಿಸುವ ನಿಟ್ಟಿನಲ್ಲಿ ಪ್ರತಿನಿತ್ಯ ಅಂತರಾಷ್ಟ್ರೀಯ ಬಿಯರ್​ ದಿನವನ್ನು ಆಚರಿಸಲಾಗುತ್ತಿದೆ.
2007ರಲ್ಲಿ ಕ್ಯಾಲಿಫೋರ್ನಿಯಾದ ಸಾಂಟಾ ಕ್ರೂಜ್​ನಲ್ಲಿ ಸ್ನೇಹಿತರ ಗುಂಪೊಂದು ಬಿಯರ್​ ಪಾರ್ಟಿಯನ್ನು ಆಯೋಜಿಸಿತ್ತು. ಇದು ತೀವ್ರ ಖ್ಯಾತಿ ಪಡೆದ ಪರಿಣಾಮ ಅಂದಿನಿಂದ ಆಗಸ್ಟ್​ ತಿಂಗಳ ಮೊದಲ ಶುಕ್ರವಾರದಂಉ ಅಂತರಾಷ್ಟ್ರೀಯ ಬಿಯರ್​ ದಿನವನ್ನಾಗಿ ಆಚರಿಸಲಾಗುತ್ತಿದೆ.
ಇದನ್ನೂ ಓದಿ:ಜಲಪಾತದ ಬಳಿ ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಪ್ರವಾಸಿಗ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − two =
Remember me
