ನವದೆಹಲಿ:ವಂದೇ ಭಾರತ ಯೋಜನೆಯ 4ನೇ ಹಂತದ ಭಾಗವಾಗಿ ಭಾರತದಿಂದ ಅಮೆರಿಕಕ್ಕೆ ಅಂತಾರಾಷ್ಟ್ರೀಯ ವೈಮಾನಿಕ ಸೇವೆ ಒದಗಿಸಲು ಏರ್​ ಇಂಡಿಯಾ ಸಜ್ಜಾಗಿದೆ. ಈ ಸೇವೆಗಾಗಿ ಬುಕ್ಕಿಂಗ್​ ಈಗಾಗಲೆ ಆರಂಭವಾಗಿದ್ದು, ಜು.22ರಿಂದ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಸಂಸ್ಥೆ ಘೋಷಿಸಿದೆ.
ಈ ಬಗ್ಗೆ ಟ್ವಿಟ್ಟರ್​ನಲ್ಲಿ ಹೇಳಿಕೆ ನೀಡಿರುವ ಏರ್​ ಇಂಡಿಯಾ, ಜು.22ರಿಂದ ಆರಂಭವಾಗಿ ಆಗಸ್ಟ್​ 31ರವರೆಗೆ ಅಮೆರಿಕಕ್ಕೆ 180 ವಿಮಾನಗಳ ಸಂಚಾರ ಏರ್ಪಡಿಸಲಾಗುವುದು. ಹೈದರಾಬಾದ್​, ಚೆನ್ನೈ, ಬೆಂಗಳೂರು, ಕೊಚ್ಚಿ, ಮುಂಬೈ ಮತ್ತು ಅಹಮದಾಬಾದ್​ನಿಂದ ಅಮೆರಿಕಕ್ಕೆ ಹೋಗಲು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಹೇಳಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್ ಮುಂದೂಡಿದ ಐಸಿಸಿ; ಐಪಿಎಲ್ ಹಾದಿ ಸುಗಮ…
ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ, ವಿದೇಶದಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಭಾರತ ಸರ್ಕಾರ ಏರ್ಪಡಿಸಿರುವ ವಂದೇ ಭಾರತ ಯೋಜನೆಯ ರೀತಿಯಲ್ಲಿ ತಮ್ಮ ವಿಮಾನಗಳನ್ನು ಭಾರತಕ್ಕೆ ಕಳುಹಿಸಲು ಅವಕಾಶ ನೀಡುವಂತೆ ಅಮೆರಿಕ, ಫ್ರಾನ್ಸ್​ ಮತ್ತು ಜರ್ಮನಿಗಳಿಂದ ಬೇಡಿಕೆ ಬಂದಿದೆ. ಸದ್ಯಕ್ಕೆ ಈ ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ.
ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಭಾರತಕ್ಕೆ ಕರೆತರಲು ನಾಲ್ಕನೇ ಹಂತದ ವಂದೇ ಭಾರತ್​ ಯೋಜನೆ ಜು.3ರಿಂದ ಜಾರಿಯಲ್ಲಿದೆ. ಈ ಸೌಲಭ್ಯವನ್ನು ಬಳಸಿಕೊಳ್ಳಲು ಜನರು ಪೂರ್ವನಿಗಿದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಆಕ್ಸ್​ಫರ್ಡ್​ ವಿವಿ ಕರೊನಾ ಲಸಿಕೆ ಫಲಿತಾಂಶ ಪ್ರಕಟ; ಹೊಸ ಭರವಸೆ ಮೂಡಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
