ನವದೆಹಲಿ:ಅಂತಾರಾಷ್ಟ್ರೀಯ ಒಲಿಂಪಿಕ್ಸ್​​ ಸಮಿತಿಯ ಅನುಮೋದನೆ ಪಡೆದ ನಂತರ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಮತ್ತು ಫ್ಲ್ಯಾಗ್ ಫುಟ್‌ಬಾಲ್ ಸೇರಿದಂತೆ ಐದು ಕ್ರೀಡೆಗಳನ್ನು ಸೇರಿಸಲಾಗುವುದು ಎಂದು ಕಮಿಟಿ ತಿಳಿದಿದೆ.
ಕ್ರಿಕೆಟ್ ಒಲಿಂಪಿಕ್ಸ್‌ನ ಒಂದು ಭಾಗವಾಗಿದೆ.2028 ರಲ್ಲಿ, ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಐದು ಹೊಸ ಆಟಗಳಿಗೆ ಸ್ಥಾನ ನೀಡಲಾಗಿದೆ.ಅದರಲ್ಲಿ ಕ್ರಿಕೆಟ್ ಕೂಡ ಒಂದು.ಕ್ರಿಕೆಟ್ ಜೊತೆಗೆ ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಸ್ಕ್ವಾಷ್ ಮತ್ತು ಲ್ಯಾಕ್ರೋಸ್ ಕೂಡ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದಿವೆ.
IOC Session approves@LA28’s proposal for 5⃣ additional sports:
⚾Baseball/🥎softball, 🏏cricket, 🏈flag football, 🥍lacrosse and ⚫squash have been officially included as additional sports on the programme for the Olympic Games Los Angeles 2028.#LA28pic.twitter.com/y7CLk2UEYx
— The Olympic Games (@Olympics)October 16, 2023

2028 ರಲ್ಲಿ, ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಜೊತೆಗೆ ಇನ್ನೂ ನಾಲ್ಕು ಕ್ರೀಡೆಗಳನ್ನು ಪರಿಚಯಿಸಲು ಸಂಘಟಕರು ಪ್ರಸ್ತಾಪಿಸಿದರು.ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿ (ಐಒಸಿ) ಕಾರ್ಯಕಾರಿ ಮಂಡಳಿ ಶುಕ್ರವಾರ (ಅಕ್ಟೋಬರ್ 13) ಇದಕ್ಕೆ ಅನುಮೋದನೆ ನೀಡಿದೆ.ಈ ಕುರಿತು ಇಂದು ಸಭೆ ನಡೆದಿದೆ. ಈ ನಿರ್ಧಾರಕ್ಕೆಮಂಡಳಿಯ ಸದಸ್ಯರಲ್ಲಿ ಇಬ್ಬರು ಮಾತ್ರ ವಿರುದ್ಧವಾಗಿ ಮತ ಚಲಾಯಿಸಿದರು ಮತ್ತು ಉಳಿದವರು ಬೆಂಬಲಿಸಿದರು, ಒಲಿಂಪಿಕ್ಸ್‌ಗೆ ಐದು ಹೊಸ ಕ್ರೀಡೆಗಳ ಸೇರ್ಪಡೆಗೆ ಅನುಮೋದನೆ ನೀಡಲಾಯಿತು.ಈ ವಿಷಯವನ್ನು ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಹೇಳಿದ್ದಾರೆ.
2028 ರ ಒಲಿಂಪಿಕ್ಸ್‌ನಲ್ಲಿ ಪುರುಷರ ಮತ್ತು ಮಹಿಳಾ ಕ್ರಿಕೆಟ್ ನಡೆಸಲಾಗುವುದು.ಪ್ರಸ್ತುತ ಕ್ರಿಕೆಟ್‌ನಲ್ಲಿ ಮೂರು ಮಾದರಿಗಳಿವೆ ಆದರೆ ಟಿ20 ಮಾದರಿಯನ್ನು ನಡೆಸಲಾಗುವುದು.ಕೇವಲ ಆರು ತಂಡಗಳೊಂದಿಗೆ ಕ್ರಿಕೆಟ್ ಪಂದ್ಯಗಳನ್ನು ನಡೆಸುವ ಸಾಧ್ಯತೆಯಿದೆ. ಇನ್ನೂ ಕೆಲವು ತಂಡಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಲಾಸ್ ಏಂಜಲೀಸ್ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
1900ರಲ್ಲಿ ಪ್ಯಾರಿಸ್​​​ನಲ್ಲಿ ನಡೆದ ಒಲಿಂಪಿಕ್ಸ್​​​ನಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಅನ್ನು ಸೇರಿಸಲಾಯಿತು. ಅದರ ನಂತರ ಬೇರೆ ಯಾವುದೇ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಆಡಲಿಲ್ಲ. ಇದು ಮೊದಲ ಬಾರಿಗೆ  128 ವರ್ಷಗಳ ಬಳಿಕ ಒಪ್ಪಿಗೆ ದೊರೆತ ಬಳಿಕ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸ್ಪರ್ಧೆ ನಡೆಯಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 1 =
Remember me
