ನವದೆಹಲಿ: ದಿ. ಸುಷ್ಮಾ ಸ್ವರಾಜ್​ ಅವರು ವಿದೇಶಾಂಗ ಸಚಿವೆಯಾಗಿದ್ದ ವೇಳೆ ಜನರಿಗೆ ಮಾಡಿದ ಸಹಾಯವನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಟ್ವಿಟರ್​ ಇಂಡಿಯಾ ಸ್ಮರಿಸಿ ವಿಡಿಯೋ ಒಂದನ್ನು ಅಪ್​ಲೋಡ್​ ಮಾಡಿದೆ.
ಸುಷ್ಮಾ ಸ್ವರಾಜ್​ ಅವರು ಉತ್ತಮ ನಾಯಕಿ. ವಿಶ್ವದ ಇತರ ರಾಷ್ಟ್ರಗಳಲ್ಲಿದ್ದ ಭಾರತೀಯರನ್ನು ತಲುಪಲು ಅವರು ಟ್ವಿಟರ್​ ಬಳಸಿಕೊಂಡಿದ್ದು ಮಾತ್ರ ಗಮನಾರ್ಹ. ಕುಟುಂಬಗಳನ್ನು ಒಗ್ಗೂಡಿಸಲು ಹಾಗೂ ಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡಲು ಅವರು ಟ್ವಿಟರ್​ ಬಳಸಿಕೊಂಡಿದ್ದರು ಎಂದು ಹೊಗಳಿದೆ.
ಈ ಸಂದರ್ಭದಲ್ಲಿ ಟ್ವಿಟರ್ ಇಂಡಿಯಾ ಸುಷ್ಮ ಸ್ವರಾಜ್​ ಅವರ ಮಗಳು ಬಾನ್ಸುರಿ ಸ್ವರಾಜ್​ ಅವರನ್ನು ಒಳಗೊಂಡ ವಿಶೇಷ ವಿಡಿಯೋ ಪೋಸ್ಟ್ ಮಾಡಿದೆ.
ಬಾನ್ಸುರಿ ಸ್ವರಾಜ್​ ಮೊದಲು ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. ನಂತರ ಸುಷ್ಮಾ ಸ್ವರಾಜ್ ಅವರ ಮಗಳಾಗಲು ನಾನು ಅದೃಷ್ಟ ಮಾಡಿದ್ದೇನೆ. ನಾನು ನನ್ನ ತಾಯಿಯನ್ನು ಅನುಸರಿಸುತ್ತಿದ್ದೇನೆ. ಅಲ್ಲದೆ ಸ್ವತಃ ವಕೀಲ ವೃತ್ತಿಯಲ್ಲಿ ತಾಯಿಯ ಆದರ್ಶಗಳನ್ನು ಪಾಲಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸುಷ್ಮ ಸ್ವರಾಜ್​ ಅವರು ವಿದೇಶಾಂಗ ಸಚಿವೆಯಾಗಿದ್ದ ವೇಳೆ ನಡೆದ ಒಂದು ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.
ಜರ್ಮನಿಯಲ್ಲಿ ಭಾರತೀಯ ಮಹಿಳೆಯೊಬ್ಬರು ಟ್ರಾವೆಲ್​ ಏಜೆಂಟರಿಂದ ಮೋಸಕ್ಕೆ ಒಳಗಾಗಿದ್ದರು. ಈ ವೇಳೆ ಅವರನ್ನು ಜರ್ಮನ್​ ಸರ್ಕಾರ ಆಕೆಯ 8 ವರ್ಷದ ಮಗಳ ಜತೆ ನಿರಾಶ್ರಿತರ ಶಿಬಿರದಲ್ಲಿ ಬಿಟ್ಟಿತ್ತು. ಈ ವೇಳೆ ಆ ಮಹಿಳೆ ವಿಡಿಯೋ ಮಾಡಿ ಟ್ವಿಟರ್​ನಲ್ಲಿ ಅಪ್​ಲೋಡ್​ ಮಾಡಿದ್ದರು. ವಿಡಿಯೋ ಅಪ್​ಲೋಡ್​ ಆದ ತಾಸು ಒಳಗೆ ಉತ್ತರಿಸಿದ ಸುಷ್ಮಾ ಸ್ವರಾಜ್​ ಅವರು ಮಗಳೊಂದಿಗೆ ಆ ತಾಯಿ ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗಲು ಸಹಾಯ ಮಾಡಿದರು ಎಂದು ಅವರು ಸ್ಮರಿಸಿದರು.
ಈ ವಿಡಿಯೋವನ್ನು ಅಂದಾಜು 23 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದಾರೆ ಅಲ್ಲದೆ 300 ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
