ನವದೆಹಲಿ:ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳ ರೈತರು ಹಮ್ಮಿಕೊಂಡಿರುವ ದೆಹಲಿ ಚಲೋ ಪ್ರತಿಭಟನೆ ಮೂರನೇ ದಿನಕ್ಕೆ ಮುಂದುವರಿದಿದೆ. ಪಂಜಾಬ್​ನಲ್ಲಿ ರೈಲು ತಡೆ ನಡೆದಿದ್ದು, ಮೊಬೈಲ್ ಇಂಟರ್​ನೆಟ್ ಸೇವೆಗೆ ನಿರ್ಬಂಧ ಹೇರಲಾಗಿದೆ. ಇನ್ನೊಂದೆಡೆ ರೈತರ ಪ್ರತಿಭಟನೆ ವಿರುದ್ಧ ಹರಿಯಾಣ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ.
ರೈತರ ಪ್ರತಿಭಟನೆ ಉತ್ತರ ರಾಜ್ಯಗಳ ಜೀವನಾಡಿಯನ್ನು ನಿಲ್ಲಿಸಿ ಜನಜೀವನವನ್ನು ನರಕವಾಗಿಸಿ ಭಯದ ಭಾವನೆ ಹುಟ್ಟುಹಾಕುತ್ತಿದೆ ಎಂದು ಹರಿಯಾಣ ಸರ್ಕಾರ ಗುರುವಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​ಗೆ ಮನವಿ ಸಲ್ಲಿಸಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಜಿ.ಎಸ್.ಸಂಧಾವಾಲಿಯ ಮತ್ತು ನ್ಯಾಯಮೂರ್ತಿ ವಿಕಾಸ್ ಸೂರಿ ಅವರಿದ್ದ ವಿಭಾಗೀಯ ಪೀಠಕ್ಕೆ ಅಫಿಡವಿಟ್ ಸಲ್ಲಿಸಿದೆ. ದೆಹಲಿ ಚಲೋಗೆ ಸಂಬಂಧಿಸಿ ಮಂಗಳವಾರ ಸಲ್ಲಿಕೆ ಆಗಿದ್ದ ಅರ್ಜಿಯೊಂದರ ಹಿನ್ನೆಲೆಯಲ್ಲಿ ಸ್ಥಿತಿಗತಿ ಕುರಿತಂತೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಕೇಂದ್ರ ಹಾಗೂ ಹರಿಯಾಣ ಮತ್ತು ಪಂಜಾಬ್ ಸರ್ಕಾರಗಳಿಗೆ ತಿಳಿಸಿತ್ತು. ಗುರುವಾರ ಬೆಳಗ್ಗೆ ವರೆಗೆ ಒಟ್ಟು 12ರಿಂದ 13 ಸಾವಿರ ರೈತರು, 1,120 ಟ್ರಾ್ಯಕ್ಟರ್ ಹಾಗೂ 1,320 ಟ್ರಾಲಿಗಳೊಂದಿಗೆ ಹರಿಯಾಣದ ಶಂಭು ಗಡಿಯಲ್ಲಿ ಹಾಗೂ 4ರಿಂದ 5 ಸಾವಿರ ರೈತರು, 450 ಟ್ರಾ್ಯಕ್ಟರ್, 470 ಟ್ರಾಲಿಗಳೊಂದಿಗೆ ಖನೌರಿ ಗಡಿಯಲ್ಲಿ ಜಮಾಯಿಸಿದ್ದಾರೆ ಎಂದು ಹರಿಯಾಣ ಸರ್ಕಾರ ಅಫಿಡವಿಟ್​ನಲ್ಲಿ ತಿಳಿಸಿದೆ.
ರೈಲು ಸಂಚಾರ ವ್ಯತ್ಯಯ:ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಗುರುವಾರ ದೆಹಲಿ- ಅಮೃತಸರ ಮಾರ್ಗದ ಕೆಲವು ರೈಲುಗಳ ಮಾರ್ಗ ಬದಲಿಸಬೇಕಾಯಿತು. ತಮ್ಮ ವಿರುದ್ಧ ಹರಿಯಾಣ ಪೊಲೀಸರ ಕ್ರಮವನ್ನು ಖಂಡಿಸಿ ರೈತರು ಪಂಜಾಬ್​ನ ಕೆಲವು ಪ್ರದೇಶಗಳಲ್ಲಿ ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ರೈತರು ಕೆಲವು ಟೋಲ್ ಪ್ಲಾಜಾಗಳಲ್ಲೂ ಧರಣಿ ನಡೆಸಿದ್ದು, ಟೋಲ್ ಫ್ರೀ ಆಗಿ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಂಬಂಧಪಟ್ಟವರನ್ನು ಒತ್ತಾಯಿಸಿದ್ದರು.
ಇಂಟರ್​ನೆಟ್ ಸೇವೆ ಸ್ಥಗಿತ:ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಹರಿಯಾಣದ ಅಂಬಾಲ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿನ ಮೊಬೈಲ್ ಇಂಟರ್​ನೆಟ್ ಸೇವೆಗಳ ಸ್ಥಗಿತವನ್ನು ಫೆ. 17ರವರೆಗೂ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಪಂಜಾಬ್​ನ ಪಟಿಯಾಲ, ಸಂಗ್ರೂರ್, ಫತೇಗರ್ ಸಾಹಿಬ್ ಜಿಲ್ಲೆಗಳಲ್ಲಿ ಫೆ.16ರವರೆಗೂ ಮೊಬೈಲ್ ಇಂಟರ್​ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಗಡಿ ಭಾಗದಲ್ಲಿ ಸಂಚಾರ ನಿರ್ಬಂಧ:ರೈತ ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ ಮತ್ತು ಹರಿಯಾಣ ಗಡಿಭಾಗದ ಆಯಕಟ್ಟಿನ ಜಾಗಗಳನ್ನು ಮುಚ್ಚಲಾಗಿದೆ. ಟಿಕ್ರಿ ಮತ್ತು ಸಿಂಘು ಗಡಿ ಮುಚ್ಚಲಾಗಿದ್ದು, ಉತ್ತರಪ್ರದೇಶದ ಘಾಜಿಪುರ ಗಡಿಭಾಗದ ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮೂವರು ಸಚಿವರ ಭೇಟಿ:ಪ್ರತಿಭಟನಾನಿರತ ರೈತ ಮುಖಂಡರನ್ನು ಭೇಟಿಯಾಗಲು ಚಂಡೀಗಢಕ್ಕೆ ಗುರುವಾರ ಸಂಜೆ ಮೂವರು ಕೇಂದ್ರ ಸಚಿವರು ತೆರಳಿದ್ದರು. ಕೃಷಿ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಗೃಹ ಸಚಿವಾಲಯದ ರಾಜ್ಯ ಸಚಿವ ನಿತ್ಯಾನಂದ ರೈ ಮಾತುಕತೆ ನಡೆಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
