ಶ್ರೀನಗರ:ಸಂಸತ್​ ಮೇಲಿನ ದಾಳಿ ಪ್ರಕರಣದ ಅಪರಾಧಿಯಾಗಿ ಗಲ್ಲುಶಿಕ್ಷೆಯಿಂದ ಮೃತಪಟ್ಟಿರುವ ಅಫ್ಜಲ್​ ಮರಣ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಲಿಬರೇಶನ್​ ಫ್ರಂಟ್​(ಜೆಕೆಎಲ್​ಎಫ್​) ಸಂಘಟನೆ ಭಾನುವಾರ ಬಂದ್​ಗೆ ಕರೆ ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕಣಿವೆ ನಾಡಿನಲ್ಲಿ ಇಂಟರ್ನೆಟ್​ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
2001ರಲ್ಲಿ ಸಂಸತ್ತಿನ ಮೇಲೆ ನಡೆದ ದಾಳಿಯಲ್ಲಿ ಅಫ್ಜಲ್​ ಕೈವಾಡ ಇರುವುದು ಸ್ಪಷ್ಟವಾದ ಬೆನ್ನಲ್ಲೇ ಆತನಿಗೆ ಗಲ್ಲು ಶಿಕ್ಷೆ ವಿಧಿಸಿ, ಫೆಬ್ರವರಿ 9, 2013ರಂದು ನೇಣಿಗೆ ಏರಿಸಲಾಯಿತು.
ಇಂದು ಮರಣ ವಾರ್ಷಿಕೋತ್ಸವ ಇರುವುದರಿಂದ ಜಮ್ಮು ಕಾಶ್ಮೀರ ಲಿಬರೇಶನ್​ ಫ್ರಂಟ್​(ಜೆಕೆಎಲ್​ಎಫ್​) ಸಂಘಟನೆ ಬಂದ್​ಗೆ ಕರೆ ನೀಡಿದೆ. ಇದಲ್ಲದೆ, ಫೆ.11ರಂದು ನ್ಯಾಶನಲ್​ ಲಿಬರೇಶನ್​ ಫ್ರಂಟ್​(ಎನ್​ಎಲ್​ಎಫ್​) ಸಂಘಟನೆಯ ಸಂಸ್ಥಾಪಕ ಮಖ್ಬೂಲ್​ ಭಟ್​ ಮರಣ ವಾರ್ಷಿಕೋತ್ಸವ ಇರುವುದರಿಂದ ಆ ದಿನವೂ ಬಂದ್​ಗೆ ಕರೆ ನೀಡಲಾಗಿದೆ.
ಬಂದ್​ ಆಚರಣೆ ಹಿನ್ನೆಲೆಯಲ್ಲಿ ಕಾಶ್ಮೀರದ ಕೆಲ ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ವಿಶೇಷ ಸ್ಥಾನಮಾನ ರದ್ದಾದ ಬಳಿಕ ಹೇರಲಾಗಿದ್ದ ನಿರ್ಬಂಧಗಳು ಸಡಿಲಗೊಂಡ ನಂತರ ಮತ್ತೆ ಕಾಶ್ಮೀರ ಸಹಜ ಸ್ಥಿತಿಯತ್ತ ಮರಳಿತ್ತು. ಇದೀಗ ಬಂದ್​ ಕರೆ ನೀಡಿರುವುದರಿಂದ ಮತ್ತೊಮ್ಮೆ ಅದೇ ಪರಿಸ್ಥಿತಿ ಕಾಶ್ಮೀರದಲ್ಲಿ ನಿರ್ಮಾಣವಾಗಿದೆ.
ಇನ್ನು ಬಂದ್​ಗೆ ಕರೆ ನೀಡಿರುವ ಜೆಕೆಎಲ್​ಎಫ್​ ನಾಯಕರುಗಳ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.
ಇನ್ನು ಮಖ್ಬೂಲ್​ ಭಟ್​ ಓರ್ವ ಕಾಶ್ಮೀರಿ ಪ್ರತ್ಯೇಕತವಾದಿ. ಅಫ್ಜಲ್​ ಮತ್ತು ಮಖ್ಬೂಲ್​ ಭಟ್​ ಇಬ್ಬರನ್ನು 2013ರ ಫೆ. 9 ಮತ್ತು 1984ರ ಫೆ. 11ರಂದು ತಿಹಾರ್​ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + eighteen =
Remember me
