ಲೂಧಿಯಾನ:ಹತ್ತು ಮಹಿಳೆಯರು ಸೇರಿದಂತೆ ಹದಿನಾಲ್ಕು ಜನರನ್ನು ಬಂಧಿಸುವುದರೊಂದಿಗೆ ಅಂತರರಾಜ್ಯ ವೇಶ್ಯಾವಾಟಿಕೆ ದಂಧೆಯ ಜಾಲವನ್ನು ಪತ್ತೆ ಹಚ್ಚಿರುವುದಾಗಿ ಪಂಜಾಬಿನ ಲುಧಿಯಾನ ಪೊಲೀಸರು ಹೇಳಿದ್ದಾರೆ. ಲಾಕ್​ಡೌನ್​ನಿಂದಾಗಿ ಕೆಲಸ ಕಳೆದುಕೊಂಡ ವಿವಿಧ ರಾಜ್ಯಗಳ ನಿರ್ಗತಿಕ ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.
ಶನಿವಾರ (ಮಾರ್ಚ 6) ಬೆಳಿಗ್ಗೆ ಲೂಧಿಯಾನದ ಹೊಸ ಸುಭಾಷ್ ನಗರದ ನಿವಾಸಿ ಮಂಜಿತ್ ಕೌರ್ ಅಲಿಯಾಸ್ ಪಮ್ಮಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಅವರ ಮನೆಗೆ ಧಾಳಿ ನಡೆಸಲಾಯಿತು. ಅವಳೊಂದಿಗೆ ದಂಧೆಯಲ್ಲಿ ತೊಡಗಿದ್ದ ಒಂಭತ್ತು ಮಹಿಳೆಯರು ಮತ್ತು ಒಬ್ಬ ಪುರುಷ ಸಹಚರನನ್ನೂ, ಗ್ರಾಹಕರಾಗಿ ಬಂದಿದ್ದ ಮೂವರು ಪುರುಷರನ್ನೂ ಬಂಧಿಸಲಾಗಿದೆ. ಅನೈತಿಕ ಸಂಚಾರ ತಡೆ ಕಾಯ್ದೆ 1956 ರ ಸೆಕ್ಷನ್ 3, 4 ಮತ್ತು 5 ರ ಅಡಿಯಲ್ಲಿ ಟಿಬ್ಬಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಲುಧಿಯಾನ ಎಡಿಸಿಪಿ ರೂಪಿಂದರ್ ಕೌರ್ ಸ್ರಾನ್ ಹೇಳಿದ್ದಾರೆ.
ಇದನ್ನೂ ಓದಿ:ಮಂಚದ ಮೇಲೆ ನೇಣಿಗೆ ಶರಣಾದ ಮಹಿಳೆ! ಗಂಡನೇ ಕೊಲೆ ಮಾಡಿರುವ ಶಂಕೆ
ಮುಖ್ಯ ಆರೋಪಿ ಪಮ್ಮಿ, ಈ ದಂಧೆಯ ಕಿಂಗ್​ಪಿನ್ ಆಗಿದ್ದು, ನಿರ್ಗತಿಕ ಹುಡುಗಿಯರನ್ನು ಆಮಿಷವೊಡ್ಡುವ ಮೂಲಕ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಾಯಿಸುತ್ತಿದ್ದಳು, ಕೋವಿಡ್ ಲಾಕ್‌ಡೌನ್‌ನಿಂದಾಗಿ ಆರ್ಥಿಕ ತೊಂದರೆಗೆ ಸಿಲುಕಿದ ಮಹಿಳೆಯರನ್ನು ಟಾರ್ಗೆಟ್​ ಮಾಡುತ್ತಿದ್ದಳು ಎನ್ನಲಾಗಿದೆ. ಪಮ್ಮಿ, 2018 ರಲ್ಲಿ ಜೋಧೇವಾಲ್ ಬಸ್ತಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಇದೇ ರೀತಿಯ ಪ್ರಕರಣದಲ್ಲಿ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಬಂದು ಮನೆಯಲ್ಲೇ ಅಕ್ರಮ ಚಟುವಟಿಕೆ ಮುಂದುವರೆಸಿದ್ದಳು ಎನ್ನಲಾಗಿದೆ.
ದಂಧೆಯಲ್ಲಿ ತೊಡಗಿದ್ದ ಮಹಿಳಾ ಆರೋಪಿಗಳು ನೇಪಾಳ, ಕೇರಳ, ಹಿಮಾಚಲ ಪ್ರದೇಶ, ಹರಿಯಾಣ, ಉತ್ತರಾಖಂಡ್, ಪಂಜಾಬ್​ನ ಚಂಡೀಗಡ ಮತ್ತು ಅಮೃತಸರಕ್ಕೆ ಸೇರಿದವರಾಗಿದ್ದಾರೆ. ಆರಂಭಿಕ ವಿಚಾರಣೆಯ ಬಳಿಕ ಇತರ ರಾಜ್ಯದ ನಗರಗಳಲ್ಲಿ ಇದೇ ರೀತಿಯ ಕೆಲಸದಲ್ಲಿ ತೊಡಗಿರುವವರ ಹೆಸರುಗಳು ಬೆಳಕಿಗೆ ಬಂದಿವೆ. ಆರೋಪಿಗಳು ತಮ್ಮ ಜಾಲವನ್ನು ವಿಸ್ತರಿಸಲು ಅವರೊಂದಿಗೆ ಸಂಪರ್ಕದಲ್ಲಿದ್ದರು. ಈ ನಿಟ್ಟಿನಲ್ಲಿ ಅವರ ಕಾರ್ಯವಿಸ್ತಾರವನ್ನು ಅರಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ. ಇನ್ನೂ ಹೆಚ್ಚು ಜನರನ್ನು ಈ ಸಂಬಂಧದಲ್ಲಿ ಬಂಧಿಸುವ ಸಾಧ್ಯತೆಯಿದೆ ಎಂದು ಸ್ರಾನ್ ಹೇಳಿದ್ದಾರೆ.
ಇದನ್ನೂ ಓದಿ:ಮಹಿಳಾ ದಿನಾಚರಣೆಗೆ ಬಿಎಂಟಿಸಿ ಗಿಫ್ಟ್​! ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಬಾಕ್ಸ್-ಇಟ್
ಸ್ಥಳದಿಂದ ಏಳು ಮೊಬೈಲ್ ಫೋನ್, 28 ಪ್ಯಾಕೆಟ್ ಕಾಂಡೋಮ್, 3,630 ರೂ. ಮತ್ತು ಎರಡು ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿರ್ಬಂಧಿತ ಡ್ರಗ್ಸ್​​ ಕೂಡ ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಪೂರೈಕೆಯ ಮೂಲವನ್ನು ಕಂಡುಹಿಡಿಯಲು ವಿಚಾರಣೆ ಸಾಗಿದೆ ಎಂದಿದ್ದಾರೆ.
ಬಂಧಿತರಲ್ಲಿ, ದೆಹಲಿಯ ಓರ್ವ ಯುವತಿಯು ಲಾಕ್​ಡೌನ್​ ಸಮಯದಲ್ಲಿ ಸಂಬಂಧಿಕರಿಂದ ಪಡೆದ ಸಾಲವನ್ನು ಮರುಪಾವತಿಸಲು ಈ ಚಟುವಟಿಕೆಯಲ್ಲಿ ತೊಡಗಿರುವುದಾಗಿ ತಿಳಿಸಿದ್ದಾಳೆ. ಇನ್ನೊಬ್ಬ ಯುವತಿಯನ್ನು ಮುಖ್ಯ ಆರೋಪಿ ಪಮ್ಮಿ ನಗರದ ಗುರುದ್ವಾರದಿಂದ ಉದ್ಯೋಗ ಕೊಡಿಸುವ ನೆಪದಲ್ಲಿ ಕರೆತಂದು ಈ ಕೆಲಸಕ್ಕೆ ಹಚ್ಚಿದ್ದಾಳೆ. ಇನ್ನು ಕೆಲವು ಯುವತಿಯರು ಮನೆಯಲ್ಲಿ ಕಾರ್ಖಾನೆ ಮುಂತಾದೆಡೆ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಹೇಳಿ ಈ ಕೆಲಸದಲ್ಲಿ ತೊಡಗಿದ್ದಾರೆ ಎಂದು ಎಡಿಸಿಪಿ ಸ್ರಾನ್ ಹೇಳಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ನಟಿ ಪ್ರಿಯಾಂಕಾರ ಇತ್ತೀಚಿನ ಸಾಹಸ ಏನು ಗೊತ್ತೆ?!
ಜೆಇಇ ಮೇನ್ಸ್ : ಸದ್ಯದಲ್ಲೇ ಹೊರಬೀಳಲಿದೆ, ಫೆಬ್ರವರಿ ಪರೀಕ್ಷೆ ಫಲಿತಾಂಶ
‘ಮೋದಿ ಕಿ ದುಕಾನ್’​ನಲ್ಲಿ ​​ಕೈಗೆಟಕುವ ಬೆಲೆಯಲ್ಲಿ ಔಷಧಿಗಳು


ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:ten + 17 =
Remember me
