ಹೈದರಾಬಾದ್​:ಮಹಿಳೆಯೊಬ್ಬಳು ತನ್ನ ಒಂಬತ್ತನೇ ಪತಿಯಿಂದ ಕೊಲೆಯಾಗಿರುವ ಘಟನೆ ಹೈದರಾಬಾದಿನ ಪಹದಿ ಶರೀಫ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪರಪುರುಷರೊಂದಿಗಿನ ಸಲುಗೆಯೇ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.
ಮೃತ ಮಹಿಳೆಯನ್ನು ವರಲಕ್ಷ್ಮೀ (30) ಎಂದು ಗುರುತಿಸಲಾಗಿದ್ದು, ಆರೋಪಿ ಪತಿ ನಾಗರಾಜನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬಗ್ಗೆ ವಿವರಣೆ ನೀಡಿರುವ ಸಬ್​ಇನ್ಸ್​ಪೆಕ್ಟರ್​ ಕುಮಾರಸ್ವಾಮಿ, ಹತ್ಯೆಯಾದ ವರಲಕ್ಷ್ಮೀ ಈಗಾಗಲೇ 8 ಮದುವೆಯಾಗಿದ್ದಳು. ಆರೋಪಿ ನಾಗರಾಜು ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯವನು. ಆತ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಜಲ್ಲಪಲ್ಲಿ ಮುನ್ಸಿಪಲ್​ ಏರಿಯಾದ ಶ್ರೀರಾಮ ಕಾಲನಿಯಲ್ಲಿ ಕಳೆದ 3 ವರ್ಷಗಳಿಂದ ವಾಸವಿದ್ದ. ವೃತ್ತಿಯಲ್ಲಿ ಕ್ಯಾಬ್​ ಡ್ರೈವರ್​ ಆಗಿದ್ದ ನಾಗರಾಜುವಿಗೆ ಸ್ಥಳೀಯ ನಿವಾಸಿ ವರಲಕ್ಷ್ಮೀ ಪರಿಚಯವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ರಿಯಾ ಕಂಟ್ರೋಲ್​ನಲ್ಲಿ ಸುಶಾಂತ್, 15 ಕೋಟಿ ರೂ. ರಹಸ್ಯ ಜತೆಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಫ್ಯಾಮಿಲಿ ಲಾಯರ್​!
ವರಲಕ್ಷ್ಮೀ ಕಾಟೆದನ್​ ಏರಿಯಾದ ಪೆಟ್ರೋಲ್​ ಬಂಕ್​ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಈಗಾಗಲೇ ಮದುವೆಯಾಗಿದ್ದ ಆಕೆಗೆ ಓರ್ವ ಮಗನಿದ್ದನು. ಇದರ ನಡುವೆ ನಾಗರಾಜು ಮತ್ತು ವರಲಕ್ಷ್ಮೀ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಆಕೆ ತನ್ನ ಪತಿ ಮತ್ತು ಮಗನನ್ನು ಬಿಟ್ಟು ಎರಡು ವರ್ಷಗಳ ಹಿಂದೆ ನಾಗರಾಜು ಜತೆ ವಿವಾಹವಾಗಿದ್ದಳು. ಇದಾದ ಕೆಲ ದಿನಗಳವರೆಗೆ ಇಬ್ಬರ ವೈವಾಹಿಕ ಜೀವನ ಪ್ರಶಾಂತವಾದ ಕಡಲಿನಂತೆಯೇ ಇತ್ತು. ಇದರ ನಡುವೆ ವರಲಕ್ಷ್ಮೀ ಪರ ಪುರುಷರೊಂದಿಗೆ ಸಖ್ಯ ಬೆಳೆಸಿರುವುದು ಹಾಗೂ ಅವರೊಂದಿಗೆ ತುಂಬಾ ಸಲುಗೆಯಿಂದಿರುವುದು ನಾಗರಾಜುಗೆ ಗೊತ್ತಾಗಿದೆ. ಇದೇ ವಿಚಾರ ಇಬ್ಬರ ನಡುವಿನ ಜಗಳಕ್ಕೆ ಬುನಾದಿಯಾಯಿತು ಎಂದು ಮಾಹಿತಿ ನೀಡಿದರು.
ಹೀಗೆ ಇಬ್ಬರ ನಡುವೆ ಪ್ರತಿದಿನ ಜಗಳ ನಡೆಯುತ್ತಿರುವಾಗ ಮಂಗಳವಾರ ಬೆಳಗ್ಗೆ ಇಬ್ಬರ ನಡುವಿನ ಗಲಾಟೆ ತಾರಕಕ್ಕೇರಿ, ತಾಳ್ಮೆ ಕಳೆದುಕೊಂಡ ನಾಗರಾಜು, ವರಲಕ್ಷ್ಮೀ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ತಾನೇ ಪಹದಿ ಶರೀಫ್​ ಪೊಲೀಸ್​ ಠಾಣೆಗೆ ಬಂದು ಶರಣಾದನು ಎಂದು ಸಬ್​ಇನ್ಸ್​ಪೆಕ್ಟರ್​ ಕುಮಾರಸ್ವಾಮಿ ತಿಳಿಸಿದರು.
ಗಂಡನೊಂದಿಗಡ ಕ್ಯಾತೆ ತೆಗೆದಿದ್ದ ವರಲಕ್ಷ್ಮೀ ಮತ್ತೊಬ್ಬನನ್ನು ಮದುವೆಯಾಗಲು ತಯಾರಾಗಿದ್ದಳು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಪದೇಪದೆ ಜಗಳ ಮಾಡುತ್ತಿದ್ದಳು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡ: ಪ್ರಿಯಕರನ ಜತೆ ಸೇರಿ ಸಂಚು ರೂಪಿಸಿ ಕೊಂದ ಪತ್ನಿ!
ಅರ್ಧ ಕೋಟಿ ವರದಕ್ಷಿಣೆ ಜತೆಗೆ ಅದ್ಧೂರಿ ಮದ್ವೆ: ಮೊದಲ ರಾತ್ರಿ ಗಂಡ ಹೇಳಿದ್ದನ್ನು ಕೇಳಿ ಕುಸಿದುಬಿದ್ದ ಯುವತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 5 =
Remember me
