ಪ್ರತಿಯೊಬ್ಬರಿಗೂ ಸಂಪಾದನೆ ಮತ್ತು ಬಂಡವಾಳ ಹೂಡಿಕೆ ಬಗ್ಗೆ ವಿಶೇಷ ಕಾಳಜಿ ಇರುತ್ತೆ. ಅದಕ್ಕಾಗಿ ಕೆಲವರು ಬಹು ಆಸ್ತಿ ನಿಧಿ(Multi-Asset Fund)ಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದಕ್ಕಾಗಿಯೇ ಹಲವಾರು ಫಂಡ್ ಹೌಸ್‌ಗಳಿವೆ. ಆಯ್ಕೆ ಮಾಡುವಾಗ ಫಂಡ್‌ನ ದೀರ್ಘಾವಧಿಯ ಟ್ರ್ಯಾಕ್ ರೆಕಾರ್ಡ್ ಪರಿಶೀಲಿಸಲು ಮರೆಯದಿರಿ ಮತ್ತು ವಿವಿಧ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ನಿಧಿಗೆ ಆಸ್ತಿ ಹಂಚಿಕೆ ಆಯ್ಕೆಗಳು ಹೇಗೆ ಪ್ಯಾನ್ ಆಗಿವೆ ಎಂಬುದರತ್ತಲೂ ಗಮನ ಹರಿಸಿ. ಈ ವರ್ಗದಲ್ಲಿ ಸ್ಥಿರವಾದ ಆದಾಯ ನೀಡುವ ಯೋಜನೆಗಳಲ್ಲಿ ICICI ಪ್ರುಡೆನ್ಶಿಯಲ್ ಮಲ್ಟಿ-ಆಸೆಟ್ ಫಂಡ್ ಪ್ರಮುಖ ಸ್ಥಾನದಲ್ಲಿದೆ.
ಬಹು ಆಸ್ತಿ ನಿಧಿ ಯೋಜನೆಯು ಹೈಬ್ರಿಡ್​ ವರ್ಗದ ಒಂದು ಭಾಗವಾಗಿದೆ. ನಿಧಿಯನ್ನ ಮೂರು ಆಸ್ತಿ ವರ್ಗಗಳಲ್ಲಿ ಹೂಡಿಕೆ ಮಾಡಬಹುದು. ಇದರರ್ಥ ಸಾಲ, ಇಕ್ವಿಟಿ ಮತ್ತು ಆಸ್ತಿ ವರ್ಗದಲ್ಲಿ ಹೂಡಿಕೆ ಮಾಡಬಹುದು.
ನಿಧಿಯ ರಚನೆಯನ್ನು ಗಮನಿಸಿದರೆ, ಹೂಡಿಕೆದಾರರು ಈ ನಿಧಿಯನ್ನು ಪೋರ್ಟ್ಫೋಲಿಯೊದ ಪ್ರಮುಖ ಭಾಗವಾಗಿ ಪರಿಗಣಿಸಬಹುದು. ಆದ್ದರಿಂದ, ದೀರ್ಘಾವಧಿಯ ಹೂಡಿಕೆ ಉತ್ತಮ. ಇದು ಒಂದು ರೀತಿಯಲ್ಲಿ ಇಕ್ವಿಟಿಯ ಚಂಚಲತೆಯನ್ನು ಸರಿದೂಗಿಸಲು ಸಹಾಯ ಮಾಡುತ್ತದೆ. ಅಲ್ಲದೆ, ದೀರ್ಘಾವಧಿ ಸಾಲ ಮತ್ತು ಸ್ಥಿರ ಆದಾಯ ಗಳಿಸಲು ಸಹಾಯ ಮಾಡುತ್ತದೆ. ಚಿನ್ನವೂ ಬಲವರ್ಧನೆ ಮತ್ತು ಬೆಳವಣಿಗೆಯ ಹಂತಗಳನ್ನು ಹೊಂದಿದೆ. ಬಂಡವಾಳವನ್ನು ಮಾರುಕಟ್ಟೆಯ ಅಪಾಯಗಳು ಮತ್ತು ಹಣದುಬ್ಬರದಿಂದ ರಕ್ಷಿಸುತ್ತದೆ.
ಹೈಬ್ರಿಡ್ ಮ್ಯೂಚುಯಲ್ ಫಂಡ್‌ನ ಬಹು ಆಸ್ತಿ ವರ್ಗಕ್ಕೆ ಹೂಡಿಕೆ ಮಾಡುವುದರಿಂದ ಹಲವು ರೀತಿಯಲ್ಲಿ ಲಾಭದಾಯಕವಿದೆ. ಲಾಂಗ್​ ಟರ್ಮ್ ಹೂಡಿಕೆಯಲ್ಲಿ ರಿಟರ್ನ್ಸ್​ ಹೆಚ್ಚು.
ಅಪಾಯದಿಂದ ಪಾರಾಗಲು-ಹೊಂದಾಣಿಕೆಯ ಆದಾಯ ಹೆಚ್ಚಿಸುವ ಪ್ರಯತ್ನದಲ್ಲಿ ಬಹು-ಸ್ವತ್ತು ನಿಧಿಗಳ ಮೂಲಕ ವಿವಿಧ ಆಸ್ತಿ ವರ್ಗಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚು ಪರಿಣಾಮಕಾರಿ.ವಿವಿಧ ಆಸ್ತಿ ವರ್ಗಗಳಾದ್ಯಂತ ಹೂಡಿಕೆ ಮಾಡುವ ಜತೆಗೆ ಚಾಲ್ತಿಯಲ್ಲಿರುವ ಮಾರುಕಟ್ಟೆ ಪರಿಸರದಿಂದ ಲಾಭ ಪಡೆಯಲು ಬಹು-ಆಸ್ತಿ ನಿಧಿಗಳು ಇಳುವರಿ ಹೆಚ್ಚಿಸುವ ತಂತ್ರಗಳನ್ನು ಸಹ ಬಳಸುತ್ತವೆ.
ವಿವಿಧ ಆಸ್ತಿ ವರ್ಗಗಳ ಜತೆಗೆ ವಿವಿಧ ಮಾರುಕಟ್ಟೆ ಬಂಡವಾಳೀಕರಣಗಳಲ್ಲಿ ಹೂಡಿಕೆ ಮಾಡಲು ಬಹು-ಸ್ವತ್ತು ನಿಧಿಯು ನಮ್ಯತೆಯನ್ನು ಹೊಂದಿದೆ. ದೀರ್ಘಾವಧಿಯಲ್ಲಿ ನಿಮ್ಮ ಬಂಡವಾಳ ಹೂಡಕೆಯಲ್ಲಿ ಹೆಚ್ಚಿನ ಅಪಾಯ ತೆಗೆದುಕೊಳ್ಳಲು ಬಯಸದ ಸಂಪ್ರದಾಯವಾದಿ ಹೂಡಿಕೆದಾರರಿಗೆ ಈ ನಿಧಿಗಳು ಉತ್ತಮ ಆಯ್ಕೆ.
ವಿವಿಧ ಆಸ್ತಿ ವರ್ಗಗಳ ಮೇಲೆ ಪರಿಣಾಮ ಬೀರುವ ಪ್ರತಿಬೆಳವಣಿಗೆಯಲ್ಲೂ ಬೆಳವಣಿಗೆಯನ್ನೂ ಫಂಡ್ ಮ್ಯಾನೇಜರ್ ಟ್ರ್ಯಾಕ್ ಮಾಡುತ್ತಾರೆ.
ಈಕೆಯ ಮಾದಕ ಫೋಟೋ, ಉದ್ರೇಕಕಾರಿ ಮೆಸೇಜ್​ಗೆ ಬೋಲ್ಡ್ ಆದ ಬಳ್ಳಾರಿ ಶಿಕ್ಷಕನಿಗೆ 4 ವರ್ಷದ ಬಳಿಕ ಎದುರಾಯ್ತು ಸಂಕಷ್ಟ!

ನಿಮ್ಮನ್ನು ನೋಡ್ಬೇಕು ಬನ್ನಿ ಎಂದು ಗೋಗರೆದರೂ ಹಾಸ್ಟೆಲ್​ಗೆ ಬಾರದ ಅಪ್ಪ-ಅಮ್ಮ… ಬೆಂಗಳೂರಲ್ಲಿ ಬಿಇ ವಿದ್ಯಾರ್ಥಿ ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − twelve =
Remember me
