ಮುಂಬೈ:ಪೆನ್ನಿ ಸ್ಟಾಕ್​ಗಳು ಹೂಡಿಕೆದಾರರಿಗೆ ಕೆಲವೊಮ್ಮೆ ಬಂಪರ್​ ಲಾಭವನ್ನೇ ನೀಡುತ್ತವೆ. ಕಡಿಮೆ ಬೆಲೆಯ ಷೇರುಗಳನ್ನು ಪೆನ್ನಿ ಸ್ಟಾಕ್​ ಎನ್ನುತ್ತಾರೆ. ಇಂತಹ ಒಂದು ಪೆನ್ನಿ ಸ್ಟಾಕ್​ ಮೂರೇ ತಿಂಗಳಲ್ಲಿ ಹೂಡಿಕೆದಾರರಿಗೆ 233.97%ರಷ್ಟು ಲಾಭ ನೀಡಿದೆ.
ಈ ಪೆನ್ನಿ ಸ್ಟಾಕ್​ ಬೆಟ್​ ಮಾಡುವುದನ್ನು ಅನೇಕ ಹೂಡಿಕೆದಾರರು ಈಗಲೂ ಮುಂದುವರಿಸಿದ್ದಾರೆ.
ಈ ಷೇರಿನ ಬೆಲೆ ಈಗ 58.11 ರೂಪಾಯಿಗೆ ಏರಿಕೆ ಕಂಡಿದೆ. ಶುಕ್ರವಾರ (ಜ. 19) ಇದರ ಬೆಲೆ 2.63 (4.74%) ರೂಪಾಯಿ ಹೆಚ್ಚಾಗಿದೆ. ಐದು ತಿಂಗಳ ಹಿಂದೆ ಈ ಷೇರಿನ ಬೆಲೆ 17 ರೂಪಾಯಿಗೆ ಆಸುಪಾಸಿನಲ್ಲಿತ್ತು. ಈ ಷೇರುಗಳಲ್ಲಿನ ಹೂಡಿಕೆಯು ಒಂದು ವರ್ಷದಲ್ಲಿ 495.39%ರಷ್ಟು ಲಾಭ ನೀಡಿದೆ.
ಈ ಕಂಪನಿಯ ಉತ್ಪನ್ನಗಳಲ್ಲಿ ಮೂನ್ ಎಲ್ಇಡಿ ಸರ್ಫೇಸ್ ಲೈಟ್ಸ್, ಎಲ್ಇಡಿ ಸ್ಪಾಟ್ ಲೈಟ್ಸ್, ಎಲ್ಇಡಿ ಎಸಿ ಸ್ಟ್ರೀಟ್ ಲೈಟ್ಸ್, ಎಲ್ಇಡಿ ಪ್ಲಾಸ್ಟಿಕ್ ಬಾಡಿ ಪ್ಯಾನಲ್ ಲೈಟ್ಸ್, ಎಲ್ಇಡಿ ಆರ್ಕಿಟೆಕ್ಚರಲ್ ಲೈಟ್ಸ್, ಎಲ್ಇಡಿ ಡೌನ್ಲೈಟ್ಸ್, ಗಾರ್ಡನ್/ಕಾಂಪೌಂಡ್ ಲೈಟಿಂಗ್, ಸೌರ ಚಾಲಿತ ಹೋಮ್ ಎಲ್ಇಡಿ ಲೈಟಿಂಗ್ ಸಿಸ್ಟಮ್ಸ್ ಮತ್ತು ಎಲ್ಇಡಿ ಆಧಾರಿತ ಬೀದಿ ದೀಪಗಳು ಪಾದಚಾರಿ/ ವಾಕ್-ಥ್ರೂ ಸೂಚನೆ ದೀಪಗಳು ಸೇರಿವೆ. ಪ್ರಸ್ತುತ, ಈ ಕಂಪನಿಯ ಎಲ್ಇಡಿ ದೀಪಗಳಿಗೆ ಸಾಕಷ್ಟು ಬೇಡಿಕೆಯಿದೆ.
ಈ ಕಂಪನಿಯ ಲಾಭದ ಬೆಳವಣಿಗೆಯು ಅಂದಾಜು 156 ಪ್ರತಿಶತ ಇದೆ. ಈ ಕಂಪನಿಯಲ್ಲಿ ಪ್ರವರ್ತಕರ ಷೇರು ಪಾಲು 72% ಇದೆ.
ಸೌರ ಶಕ್ತಿ ಬೆಳಕಿನ ಹೊಸ ಕ್ಷೇತ್ರಗಳ ಕಡೆಗೆ ಈಗ ಕಂಪನಿಯ ಗಮನ ಕೇಂದ್ರೀಕೃತವಾಗಿವೆ. ಇಂತಹ ಉಪಕ್ರಮಗಳು ಮಾರುಕಟ್ಟೆಯಲ್ಲಿ ದೊಡ್ಡ ಅವಕಾಶವನ್ನು ಒದಗಿಸಬಹುದಾಗಿದೆ. ಈ ಕಂಪನಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸಬಹುದಾಗಿದೆ.

ಮಧ್ಯಂತರ ಬಜೆಟ್ 2024: ತೆರಿಗೆದಾರರು ಬಯಸುವುದೇನು? ನಿಮಗೆ ದೊರೆಯಬಹುದಾದದ ಅನುಕೂಲಗಳೇನು?

ಈ ರೈಲ್ವೆ ಸ್ಟಾಕ್​ ನಿಮ್ಮ ಬಳಿ ಇದ್ದರೆ ನೀವು ಕುಬೇರರು: ಗರಿಷ್ಠ ಬೆಲೆ ಮುಟ್ಟಿದ ಷೇರಿಗೆ ಏಕೆ ಇಷ್ಟೊಂದು ಡಿಮ್ಯಾಂಡು?

580% ಮಧ್ಯಂತರ ಲಾಭಾಂಶ ನೀಡಲು ಸಜ್ಜಾಗಿದೆ ಈ ಕಂಪನಿ: ಈ ಸಂಸ್ಥೆಯ ಷೇರಿಗೆ ಈಗ ಕುದುರಿದೆ ಬೇಡಿಕೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 + four =
Remember me
