ಮುಂಬೈ:ಸರ್ಕಾರಿ ವಲಯದ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್​ ಷೇರುಗಳಿಗೆ ಕೆಲ ದಿನಗಳಿಂದ ಭಾರಿ ಬೇಡಿಕೆ ಬರುತ್ತಿದೆ. ಕಳೆದ ಒಂದು ವಾರದಲ್ಲಿ ಶೇಕಡಾ 11ಕ್ಕಿಂತ ಹೆಚ್ಚಾಗಿದೆ. ಒಂದು ತಿಂಗಳಲ್ಲಿ ಈ ಷೇರುಗಳ ಬೆಲೆ 26.78% ಹೆಚ್ಚಾಗಿದೆ.
ಷೇರು ವಿಭಜನೆ ನಿರ್ಧಾರವನ್ನು ಪ್ರಕಟಿಸಿದ ನಂತರ ಕೆನರಾ ಬ್ಯಾಂಕ್ ಷೇರುಗಳ ಬೆಲೆ ಫೆಬ್ರವರಿ 7 ರಂದು 52 ವಾರಗಳ ಗರಿಷ್ಠ 550 ರೂಪಾಯಿ ತಲುಪಿದೆ. ವಾರದ ವಹಿವಾಟಿನ ಕೊನೆಯ ದಿನವಾದ ಈ ಷೇರು ಬೆಲೆ 571 ರೂಪಾಯಿ ತಲುಪಿದೆ. ಹೂಡಿಕೆದಾರರು ಈ ಷೇರನ್ನು ಖರೀದಿಸುವ ಪ್ರಮಾಣ ಸಾಕಷ್ಟು ಹೆಚ್ಚಾಗಿದೆ.
ಇದು ಈ ಬ್ಯಾಂಕಿನ ಮೊದಲ ಸ್ಟಾಕ್ ವಿಭಜನೆಯಾಗಲಿದೆ. ಇದಕ್ಕಾಗಿ ಬ್ಯಾಂಕ್​ ಮಂಡಳಿಯ ಸಭೆಯನ್ನು ಫೆಬ್ರವರಿ 26 ರಂದು ನಿಗದಿಪಡಿಸಲಾಗಿದೆ.
ಬ್ಯಾಂಕ್‌ನ ಈಕ್ವಿಟಿ ಷೇರುಗಳ ಉಪ-ವಿಭಾಗ/ವಿಭಜನೆಗಾಗಿ ನಿರ್ದೇಶಕರ ಮಂಡಳಿಯಿಂದ ತಾತ್ವಿಕವಾಗಿ ಅನುಮೋದನೆ ಪಡೆಯಲು 26 ಫೆಬ್ರವರಿ 2024 ರಂದು ಸೋಮವಾರದಂದು ಬ್ಯಾಂಕ್‌ನ ನಿರ್ದೇಶಕರ ಮಂಡಳಿಯ ಸಭೆಯನ್ನು ಆಯೋಜಿಸಲಾಗಿದೆ ಎಂದು ಕೆನರಾ ಬ್ಯಾಂಕ್​ ತಿಳಿಸಿದೆ.
ಈ ಸಾರ್ವಜನಿಕ ವಲಯದ ಸಾಲದಾತ ಡಿಸೆಂಬರ್ ತ್ರೈಮಾಸಿಕದಲ್ಲಿ ರೂ 3,656 ಕೋಟಿ ನಿವ್ವಳ ಲಾಭವನ್ನು ವರದಿ ಮಾಡಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ನಿವ್ವಳ ಲಾಭದಲ್ಲಿ 26.87 ಶೇಕಡಾ ಜಿಗಿತವಾಗಿದೆ.
ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿ (NPA) ಕಳೆದ ವರ್ಷ ಶೇ. 5.89ರಿಂದ ಈಗ ಶೇ. 4.39ಕ್ಕೆ ಇಳಿದಿದೆ.
ಡಿಸೆಂಬರ್ 31 ರ ಹೊತ್ತಿಗೆ, ಬ್ಯಾಂಕ್ 9,585 ಶಾಖೆಗಳನ್ನು ಹೊಂದಿದ್ದು, ಇದರಲ್ಲಿ 3,095 ಗ್ರಾಮೀಣ, 2,742 ಅರೆ-ನಗರ, 1,906 ನಗರ ಮತ್ತು 1,842 ಮೆಟ್ರೋ ಜೊತೆಗೆ 10,463 ಎಟಿಎಂಗಳು ಇವೆ. ಬ್ಯಾಂಕ್ ಲಂಡನ್, ನ್ಯೂಯಾರ್ಕ್ ಮತ್ತು ದುಬೈನಲ್ಲಿ ಮೂರು ಸಾಗರೋತ್ತರ ಶಾಖೆಗಳನ್ನು ಹೊಂದಿದೆ.

90 ಲಕ್ಷ ವಾರಂಟ್​ ನೀಡುತ್ತಿದೆ ಸ್ಮಾಲ್ ಕ್ಯಾಪ್ ಫಾರ್ಮಾ ಸ್ಟಾಕ್‌: ಒಂದೇ ದಿನದಲ್ಲಿ ಷೇರು ಬೆಲೆ 12% ಏರಿಕೆ

ಫೆ. 14ರಂದು ಇದೆ ವ್ಯಾಲೆಂಟೆನ್ಸ್ ಡೇ: ಪ್ರೇಮಿಗಳ ದಿನಾಚರಣೆ ಸಂದರ್ಭ ಈ 7 ಷೇರುಗಳಿಗೆ ಬರಬಹುದು ಬೇಡಿಕೆ

ರಿಲಯನ್ಸ್ ಜತೆ ಬಸ್​ ತಯಾರಿಕೆ ಡೀಲು​: ಹೂಡಿಕೆದಾರರಿಗೆ 7330% ಲಾಭ ನೀಡಿದ ಷೇರಿಗೆ ಮತ್ತೆ ಈಗ ಡಿಮ್ಯಾಂಡು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + 8 =
Remember me
