ಮುಂಬೈ:ಟಾಟಾ ಕಂಪನಿಯ ಈ ಷೇರು ಖರೀದಿಸಲು ಬುಧವಾರ ಹೂಡಿಕೆದಾರರು ಮುಗಿಬಿದ್ದರು. ಟಾಟಾ ಗ್ರೂಪ್ ಕಂಪನಿಯಾದ ಟಿಆರ್​ಎಫ್ ಲಿಮಿಟೆಡ್​ (TRF Ltd.) ಷೇರುಗಳು ರಾಕೆಟ್ ಆಗಿ ಮಾರ್ಪಟ್ಟವು. ಟಿಆರ್​ಎಫ್​ ಕಂಪನಿಯ ಷೇರುಗಳು ಬುಧವಾರ ಒಂದೇ ದಿನದಲ್ಲಿ 20% ಏರಿಕೆ ಕಂಡು 328.40 ರೂ. ತಲುಪಿದವು. ಈ ಮೂಲಕ ಶೇ. 20 ಅಪ್ಪರ್​ ಸರ್ಕ್ಯೂಟ್​ ಹಿಟ್​ ಆದವು. ಅಂದರೆ, ಷೇರು ವಿನಿಮಯ ಕೇಂದ್ರದ ನಿಯಮದ ಪ್ರಕಾರ ಒಂದೇ ದಿನದಲ್ಲಿ ಶೇಕಡಾ 20ರ ಗರಿಷ್ಠ ಏರಿಕೆ ಮಿತಿಯನ್ನು ತಲುಪಿದವು. ಅಪ್ಪರ್​ ಸರ್ಕ್ಯೂಟ್​ ತಲುಪಿದ ನಂತರ, ಒಂದೇ ದಿನದಲ್ಲಿ ಶೇ. 20ಕ್ಕಿಂತ ಹೆಚ್ಚು ಬೆಲೆ ಏರಿಕೆಗೆ ಅವಕಾಶ ಇರುವುದಿಲ್ಲ. ಮಂಗಳವಾರ ಟಿಆರ್‌ಎಫ್‌ನ ಷೇರುಗಳು 273.70 ರೂ. ಇದ್ದವು.
ಈ ಮೂಲಕ ಕಂಪನಿಯ ಷೇರುಗಳು 52 ವಾರಗಳ ಹೊಸ ಗರಿಷ್ಠ ಮಟ್ಟವನ್ನು ಕೂಡ ತಲುಪಿದವು. TRF ಷೇರುಗಳಲ್ಲಿ ಈ ತೀವ್ರ ಏರಿಕೆಯು ದೊಡ್ಡ ಘೋಷಣೆಯ ನಂತರ ಬಂದಿದೆ. ತನ್ನ ಮಾತೃ ಸಂಸ್ಥೆ ಟಾಟಾ ಸ್ಟೀಲ್ ಜೊತೆಗಿನ ವಿಲೀನವನ್ನು ಟಿಆರ್​ಎಫ್​ ರದ್ದುಗೊಳಿಸಿದೆ. ವ್ಯವಹಾರದಲ್ಲಿನ ಸುಧಾರಣೆಯಿಂದಾಗಿ ಕಂಪನಿಯ ಮಂಡಳಿಯು ವಿಲೀನವನ್ನು ರದ್ದುಗೊಳಿಸಿದೆ.
ಕಂಪನಿಯ ವ್ಯವಹಾರ ಕಾರ್ಯಕ್ಷಮತೆಯಲ್ಲಿ ಸುಧಾರಣೆ ಕಂಡುಬಂದಿದೆ. ಟಾಟಾ ಗ್ರೂಪ್ ಕಂಪನಿಯಾದ ಟಿಆರ್‌ಎಫ್ ಬುಧವಾರದ ಷೇರು ವಿನಿಮಯ ಕೇಂದ್ರಕ್ಕೆ ನೀಡಿರುವ ಹೇಳಿಕೆಯಲ್ಲಿ, ಟಾಟಾ ಸ್ಟೀಲ್‌ನೊಂದಿಗೆ ವಿಲೀನಗೊಳಿಸುವ ಯೋಜನೆಯೊಂದಿಗೆ ಮುಂದುವರಿಯದಿರಲು ನಿರ್ಧರಿಸುವುದಾಗಿ ತಿಳಿಸಿದೆ. ಏಕೆಂದರೆ, ವ್ಯವಹಾರದಲ್ಲಿ ಉತ್ತಮ ಸುಧಾರಣೆ ಕಂಡುಬಂದಿದೆ. ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಕಂಪನಿಯ ಕಾರ್ಯಕ್ಷಮತೆ. ಆರ್ಡರ್ ಪ್ಲೇಸ್‌ಮೆಂಟ್, ಕ್ಯಾಪಿಟಲ್ ಇನ್ಫ್ಯೂಷನ್, ವೆಚ್ಚ ಮತ್ತು ಆಸ್ತಿ ಆಪ್ಟಿಮೈಸೇಶನ್‌ನಲ್ಲಿ ಸ್ವಂತ ಪ್ರಯತ್ನದಿಂದಾಗಿ ಕಾರ್ಯಕ್ಷಮತೆ ಸುಧಾರಿಸಿದೆ ಎಂದು ಟಿಆರ್​ಎಫ್​ ಹೇಳಿದೆ. ಸೆಪ್ಟೆಂಬರ್ 2022 ರಲ್ಲಿ ಟಾಟಾ ಸ್ಟೀಲ್ ಜೊತೆಗೆ ವಿಲೀನ ಒಪ್ಪಂದವನ್ನು ಟಿಆರ್​ಎಫ್​ ಮಾಡಿಕೊಂಡಿತ್ತು. ವಿಲೀನವನ್ನು ಹಿಂಪಡೆಯಲು ಟಾಟಾ ಸ್ಟೀಲ್ ಮಂಡಳಿಯು ತನ್ನ ಅನುಮೋದನೆಯನ್ನು ನೀಡಿದೆ.

4.5 ಲಕ್ಷ ಷೇರು ಇರುವ ಸಚಿನ್ ತೆಂಡೂಲ್ಕರ್ ಮತ್ತಷ್ಟು ಶ್ರೀಮಂತ: 3 ಪಟ್ಟು ಹೆಚ್ಚಳವಾದ ಕಂಪನಿಯ ಲಾಭ; ಸ್ಟಾಕ್​ ಬೆಲೆ ಅಪ್ಪರ್​ ಸರ್ಕ್ಯೂಟ್ ಹಿಟ್​

ಎಸ್​ಸಿ, ಎಸ್​ಟಿ, ಒಬಿಸಿ ಮೀಸಲಾತಿಯಿಂದ ಸರ್ಕಾರಿ ಕೆಲಸದಲ್ಲಿ ಗುಣಮಟ್ಟ ಕುಸಿತ: ನೆಹರು ಬರೆದ ಪತ್ರ ಓದಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ

ಹಿಂಡೆನ್‌ಬರ್ಗ್ ವಿವಾದ ಪೂರ್ವ ಮಟ್ಟ ಸಮೀಪಿಸಿದ ಅದಾನಿ ಷೇರು: ಇನ್ನೊಂದೇ ತಿಂಗಳಲ್ಲಿ 1,000-1,500 ರೂ. ಏರುತ್ತದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 2 =
Remember me
