ನವದೆಹಲಿ:ಕಡಿಮೆ ಮಟ್ಟದಲ್ಲಿ ಮೌಲ್ಯ ಖರೀದಿ ಮತ್ತು ಈಕ್ವಿಟಿ ಮಾರುಕಟ್ಟೆಯಲ್ಲಿ ಚೇತರಿಕೆಯ ನಡುವೆ ಭಾರೀ ಹೊಡೆತವನ್ನು ಅನುಭವಿಸಿದ ಒಂದು ದಿನದ ನಂತರ 10 ಲಿಸ್ಟೆಡ್
ಮಂಗಳವಾರದ ಭಾರೀ ಪ್ರಮಾಣದಲ್ಲಿ ಕುಸಿತಗೊಂಡಿದ್ದ ಅದಾನಿ ಸಮೂಹದ ಷೇರುಗಳ ಬೆಲೆಗಳು ಬುಧವಾರ ಸಾಕಷ್ಟು ಚೇತರಿಕೆ ಕಂಡಿವೆ. ಅದಾನಿ ಸಮೂಹದ 10 ಲಿಸ್ಟೆಡ್​ ಕಂಪನಿಗಳ ಪೈಕಿ ಒಂಬತ್ತು ಕಂಪನಿಗಳ ಷೇರುಗಳ ಬೆಲೆಗಳು ಬುಧವಾರ ಏರಿಕೆ ಕಂಡಿವೆ.
ಬುಧವಾರದ ವಹಿವಾಟಿನ ಮುಕ್ತಾಯದ ವೇಳೆಗೆ, ಅದಾನಿ ಗ್ರೀನ್ ಎನರ್ಜಿ ಷೇರುಗಳ ಬೆಲೆ ಶೇಕಡಾ 11.01 ಏರಿಕೆಯಾಯಿತು. ಅದಾನಿ ಪೋರ್ಟ್ಸ್ ಶೇಕಡಾ 8.59 ರಷ್ಟು, ಅಂಬುಜಾ ಸಿಮೆಂಟ್ಸ್ ಶೇಕಡಾ 7.47 ಮತ್ತು ಈ ಗುಂಪಿನ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಶೇಕಡಾ 6.02 ರಷ್ಟು ಹೆಚ್ಚಳ ದಾಖಲಿಸಿದವು.ಎಸಿಸಿ ಸ್ಟಾಕ್ 5.20 ರಷ್ಟು ಏರಿತು. ಎನ್​ಡಿಟಿವಿ ಶೇಕಡಾ 3.26 ರಷ್ಟು ಹೆಚ್ಚಳವಾಯಿತು. ಅದಾನಿ ಟೋಟಲ್ ಗ್ಯಾಸ್ ಶೇಕಡಾ 2.67 ರಷ್ಟು; ಅದಾನಿ ವಿಲ್ಮರ್ ಶೇಕಡಾ 0.77 ರಷ್ಟು ಮತ್ತು ಅದಾನಿ ಪವರ್ ಶೇಕಡಾ 0.32 ರಷ್ಟು ಏರಿಕೆ ಕಂಡಿವೆ. ಆದರೆ, ಅದಾನಿ ಎನರ್ಜಿ ಸಲ್ಯೂಷನ್ಸ್ ಷೇರು ಬೆಲೆ ಶೇ. 2.58ರಷ್ಟು ಕುಸಿದಿದೆ.
ಬುಧವಾರದ ವಹಿವಾಟಿನ ಮುಕ್ತಾಯಕ್ಕೆ ಒಂಬತ್ತು ಅದಾನಿ ಗ್ರೂಪ್ ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ 15,57,765.43 ಕೋಟಿ ರೂಪಾಯಿ ತಲುಪಿತು.
ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಮಂಗಳವಾರ ಕುಸಿದಿದ್ದವು. ಈ ಪೈಕಿ ಅನೇಕ ಷೇರುಗಳು ಲೋವರ್​ ಸರ್ಕ್ಯೂಟ್ ಹಿಟ್​ ಆಗಿದ್ದವು. ಸೋಮವಾರದಂದು ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ತೀವ್ರವಾಗಿ ಏರಿಕೆ ದಾಖಲಿಸಿದ್ದವು, ಅದಾನಿ ಪವರ್ ಷೇರು ಬೆಲೆ ಶೇಕಡಾ 16 ರಷ್ಟು ಏರಿಕೆಯಾಗಿತ್ತು.
“ಮೋದಿ ಹೋದರೆ ಅದಾನಿಯೂ ಹೋಗುತ್ತಾರೆ, ಆಪ್ನೆ ಅದಾನಿ ಕೆ ಸ್ಟಾಕ್ಸ್ ದೇಖೆ (ನೀವು ಅದಾನಿ ಷೇರುಗಳನ್ನು ನೋಡಿದ್ದೀರಾ)?” ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದರು. ಆದರೀಗ ರಾಹುಲ್​ ಗಾಂಧಿ ಮಾತಿಗೆ ವ್ಯತಿರಿಕ್ತ ಎನ್ನುವಂತೆ ಅದಾನಿ ಸಮೂಹದ ಷೇರುಗಳ ಬೆಲೆಯಲ್ಲಿ ಚೇತರಿಕೆ ಕಂಡುಬಂದಿದೆ.
ಯುಪಿಐ ರೀತಿಯ ಪಾವತಿ ವ್ಯವಸ್ಥೆ: ಪೆರು ಜತೆ ಎನ್​ಐಪಿಎಲ್​ ಪಾಲುದಾರಿಕೆ ಘೋಷಣೆ
ದುರ್ಬಲಗೊಂಡ ಬಹುಮತವು ಸುಧಾರಣೆಯ ಕಾರ್ಯಸೂಚಿಗೆ ಸವಾಲು: ಫಿಚ್ ವಿಶ್ಲೇಷಣೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
