ನವದೆಹಲಿ:ದೇಶದಲ್ಲಿ ಎಲ್ಲ ಪ್ರಜೆಗಳಿಗೂ ಒಂದೇ ತರಹದ ಕಾನೂನು ಅನ್ವಯವಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಆಶಯ ವ್ಯಕ್ತಪಡಿಸುತ್ತಿರುವ ನಡುವೆಯೇ, 22ನೇ ರಾಷ್ಟ್ರೀಯ ಕಾನೂನು ಆಯೋಗ ಇದೇ ವಿಷಯದ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆದುಕೊಳ್ಳಲು ಮುಂದಾಗಿರುವುದು ಮಹತ್ವ ಪಡೆದಿದೆ. ಜನರು, ಪ್ರಮುಖ ಧಾರ್ವಿುಕ ಸಂಸ್ಥೆಗಳು ನಾಗರಿಕ ಸಂಹಿತೆ ಬಗ್ಗೆ ಅಭಿಪ್ರಾಯಗಳನ್ನು 30 ದಿನಗಳಲ್ಲಿ ಆಯೋಗಕ್ಕೆ ಸಲ್ಲಿಸಬೇಕು ಎಂದು ಕೋರಲಾಗಿದೆ.
2024ರ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಪೂರ್ವತಯಾರಿ ನಡೆಸುತ್ತಿರುವ ಮಧ್ಯೆ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದ್ದು, ಇದು ಬಿಜೆಪಿ ಮತಬ್ಯಾಂಕ್ ಕ್ರೋಡೀಕರಣಕ್ಕೆ ನೆರವಾಗುವ ನಿರೀಕ್ಷೆಯೂ ಇದೆ. ನಾಗರಿಕ ಸಂಹಿತೆಗೆ ಬಿಜೆಪಿ ಭರವಸೆ ನೀಡಿರುವುದಲ್ಲದೆ, ಉತ್ತರಾಖಂಡ, ಗುಜರಾತ್​ನಲ್ಲಿ ಈಗಾಗಲೇ ಈ ಸಂಬಂಧ ತಜ್ಞರ ಸಮಿತಿಗಳನ್ನೂ ರಚಿಸಲಾಗಿದೆ.
ವಿಪಕ್ಷಗಳ ಹಲವು ನಾಯಕರು ಏಕರೂಪ ನಾಗರಿಕ ಸಂಹಿತೆಗೆ ವಿರೋಧ ಹೊರಹಾಕುತ್ತಿರುವ ಮಧ್ಯೆ ದೇಶದ ಬಹುಸಂಖ್ಯಾತ ಸಮುದಾಯಗಳು ಇಂಥದ್ದೊಂದು ಕಾನೂನಿನ ಅಗತ್ಯದ ಬಗ್ಗೆ ಒಲವು ವ್ಯಕ್ತಪಡಿಸುತ್ತಿರುವುದನ್ನೂ ಕಾಣಬಹುದು. ಆರ್​ಎಸ್​ಎಸ್ ಮತ್ತು ಬಿಜೆಪಿ ಹಿಂದಿನಿಂದಲೂ
ನಾಗರಿಕ ಸಂಹಿತೆ ಜಾರಿ ಮಾಡುವ ಉದ್ದೇಶ ಹೊರಹಾಕಿದ್ದು, ಕಾನೂನು ಆಯೋಗ ಜನರ ಅಭಿಪ್ರಾಯ ಸಂಗ್ರಹಿಸಿ, ನಂತರ ತನ್ನ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ.
ಸಂವಿಧಾನದಲ್ಲೇನಿದೆ?:ಸಂವಿಧಾನದ 44ನೇ ವಿಧಿ ಕೂಡ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಇರಬೇಕು ಎಂದೇ ಹೇಳುತ್ತದೆ. 21ನೇ ಕಾನೂನು ಆಯೋಗವು ಈ ವಿಷಯವನ್ನು ಪರಿಶೀಲಿಸಿತ್ತು ಮತ್ತು 2016ರ ಅಕ್ಟೋಬರ್ 7ರಂದು ನೀಡಲಾದ ಪ್ರಶ್ನಾವಳಿ ಮತ್ತು ಮಾ.19ರಂದು ಹೊರಡಿಸಲಾದ ಸಾರ್ವಜನಿಕ ಮನವಿ/ನೋಟಿಸ್​ಗಳ ಜತೆಗೆ 2018ರ ಮಾ.19, 27, ಏಪ್ರಿಲ್ 10ರಂದೂ ಆಯೋಗವು ಜನರಿಂದ ಅಭಿಪ್ರಾಯಗಳನ್ನು ಕೇಳಿತ್ತು. ಇದರ ಭಾಗವಾಗಿ 21ನೇ ಕಾನೂನು ಆಯೋಗವು ಕುಟುಂಬ ಕಾನೂನಿನ ಸುಧಾರಣೆಗಳು ಕುರಿತ ಸಮಾಲೋಚನಾ ಪತ್ರವನ್ನು 2018ರ ಆ.31ರಂದು ಬಿಡುಗಡೆ ಮಾಡಿತ್ತು. ಇದಾಗಿ ಮೂರು ವರ್ಷವಾಗಿದ್ದು, ಈಗ ಈ ವಿಷಯದ ಪ್ರಸ್ತುತತೆ, ಪ್ರಾಮುಖ್ಯತೆ ಹಾಗೂ ವಿವಿಧ ನ್ಯಾಯಾಲಯಗಳ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು 22ನೇ ಕಾನೂನು ಆಯೋಗವು ಮತ್ತೊಮ್ಮೆ ಸಂಹಿತೆ ಬಗ್ಗೆ ರ್ಚಚಿಸಲು ಉದ್ದೇಶಿಸಿದೆ.
ನೀವೂ ಅಭಿಪ್ರಾಯ ನೀಡಬಹುದು:ಗಣ್ಯರು, ಧಾರ್ವಿುಕ ಸಂಸ್ಥೆಗಳು ಮಾತ್ರವಲ್ಲದೆ, ದೇಶದ ಸಾಮಾನ್ಯ ಜನರೂ ತಮ್ಮ ಅಭಿಪ್ರಾಯಗಳನ್ನು ರಾಷ್ಟ್ರೀಯ ಕಾನೂನು ಆಯೋಗಕ್ಕೆ ಸಲ್ಲಿಸಬಹುದು. ಅಭಿಪ್ರಾಯಗಳನ್ನು ಞಛಿಞಚಿಛ್ಟಿಠಛ್ಚಿ್ಟಠಿಚ್ಟಢ -್ಚಜಟಡ.ಜ್ಞಿಗೆ 30 ದಿನಗಳ ಒಳಗೆ ಇ-ಮೇಲ್ ಮಾಡಬಹುದು.
ಹಲವು ಬದಲಾವಣೆ:ಏಕರೂಪ ನಾಗರಿಕ ಸಂಹಿತೆ ಜಾರಿಯಾದಲ್ಲಿ ವಿವಾಹ ಸೇರಿದಂತೆ ಹಲವು ವಿಚಾರಗಳಲ್ಲಿ ಎಲ್ಲ ಸಮುದಾಯಗಳು ಒಂದೇ ತರಹದ ಕಾನೂನುಗಳಿಗೆ ಒಳಪಡಲಿವೆ. ಮುಸ್ಲಿಮರ ಬಹುಪತ್ನಿತ್ವಕ್ಕೂ ಇದು ಕಡಿವಾಣ ಹಾಕಲಿರುವುದರಿಂದ ಕೆಲ ಪಕ್ಷಗಳು ಈ ಕಾನೂನು ಜಾರಿಗೆ ವಿರೋಧಿಸಿವೆ. ಕೆಳ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್​ಗಳಲ್ಲಿ ನಡೆದ ವಿವಿಧ ಪ್ರಕರಣಗಳ ಸಂದರ್ಭದಲ್ಲೂ ನಾಗರಿಕ ಸಂಹಿತೆ ಬಗ್ಗೆ ಚರ್ಚೆಯಾಗಿದ್ದಲ್ಲದೆ, ಇಂಥದ್ದೊಂದು ಕಾನೂನಿನ ಅಗತ್ಯದ ಬಗ್ಗೆ ನ್ಯಾಯಾಲಯಗಳು ಅನಿಸಿಕೆ ಹೊರಹಾಕಿರುವುದು ಗಮನಾರ್ಹ.
ಈ ಕಾರ್ ‘ರೇಂಜೇ’ ಬೇರೆ!: ಬ್ಯಾಟರಿ ಫುಲ್ ಚಾರ್ಜ್ ಮಾಡಲು ಹತ್ತೇ ನಿಮಿಷ, ಒಮ್ಮೆ ಚಾರ್ಜ್​ ಮಾಡಿದ್ರೆ 1,200 ಕಿ.ಮೀ. ಪ್ರಯಾಣ!

ಸ್ಪೇಸ್​ಎಕ್ಸ್ ಇಂಜಿನಿಯರ್​ಗೆ ಲಿಂಕ್ಡ್​​ಇನ್​ನಲ್ಲಿ ‘ಸ್ಪೇಸ್’ ಇಲ್ಲ; 14ರ ಹರೆಯದಲ್ಲೇ ಭಾರಿ ಸಾಧನೆ ಮಾಡಿದಾತನ ಖಾತೆ ಬ್ಲಾಕ್​ ಮಾಡಿದ್ಯಾಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
