ಅಯೋಧ್ಯೆ:ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ದಿನ ಹತ್ತಿರ ಬರುತ್ತಿದ್ದಂತೆ ಪ್ರತಿಪಕ್ಷಗಳ ನಾಯಕರು ಈ ಬಗ್ಗೆ ಮಾತನಾಡುತ್ತಿರುವುದೂ ಹೆಚ್ಚುತ್ತಿದೆ.
ನಿನ್ನೆ ಅಸಾದುದ್ದೀನ್​ ಓವೈಸಿ ಟ್ವೀಟ್​ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಬಾರದು ಎಂದಿದ್ದರು.
ಇಂದು ಕಾಂಗ್ರೆಸ್​ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಸಲ್ಮಾನ್​ ಖುರ್ಷಿದ್​ ಅವರು ಮತ್ತೊಂದು ಸಲಹೆ ನೀಡಿದ್ದಾರೆ.ಅಯೋಧ್ಯೆಯಲ್ಲಿ ಆಗಸ್ಟ್​ 5ರಂದು ನಡೆಯಲಿರುವ ಭೂಮಿ ಪೂಜೆಗೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರಿಗೂ ಆಹ್ವಾನ ನೀಡಬೇಕು ಎಂದು ಸಲ್ಮಾನ್​ ಹೇಳಿದ್ದಾರೆ. ನಾವೆಲ್ಲರೂ ಒಂದಾಗಿ ರಾಮಮಂದಿರ ಭೂಮಿ ಪೂಜೆ ನಡೆಸಬೇಕು ಎಂದಿದ್ದಾರೆ.ಇದನ್ನೂ ಓದಿ:ರಾಮಮಂದಿರ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿಗೆ ಓವೈಸಿ ನೀಡಿದ್ದಾರೊಂದು ಎಚ್ಚರಿಕೆ…!
ಹಾಗೇ, ಸಲ್ಮಾನ್​ ಖುರ್ಷಿದ್​ ಅವರ ಈ ಹೇಳಿಕೆಯ ವಿರುದ್ಧ ಎಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ, ಬಾಬ್ರಿ ಮಸೀದಿಯನ್ನು ಮತ್ತೆ ತೆರೆದವರು ರಾಜೀವ್​ ಗಾಂಧಿ. ಮಸೀದಿ ಧ್ವಂಸವಾದಾಗ ಪ್ರಧಾನಿಯಾಗಿದ್ದುಕೊಂಡು ವಿಷಯವನ್ನು ಪರಿಶೀಲನೆ ಮಾಡಿದವರ. ಬಾಬ್ರಿ ಮಸೀದಿ ಧ್ವಂಸದ ಸಮಯದಲ್ಲಿ ಕಾಂಗ್ರೆಸ್​ ಪಕ್ಷ ಸಂಘಪರಿವಾರದ ಕೈಗವಸು ಆಗಿತ್ತು ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್​)
‘ರಾಮಮಂದಿರ ಭೂಮಿ ಪೂಜೆಗೆ ದಯವಿಟ್ಟು ಬರಬೇಡಿ…ಅಂದು ಸಂಜೆ ಮನೆಯಲ್ಲಿ ದೀಪ ಹಚ್ಚಿ’

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 + 18 =
Remember me
