ನವದೆಹಲಿ:ಐಪಿಎಲ್​ನಲ್ಲಿ ಚೆನ್ನೈ ಮತ್ತು ಕೆಕೆಆರ್​ ತಂಡಗಳು ಮುಖಾಮುಖಿಯಾಗಿತ್ತು. ಪಂದ್ಯ ಮುಗಿದ ಬಳಿಕ ಗಂಭೀರ್​ ಅವರು ಧೋನಿಯನ್ನು ತಬ್ಬಿಕೊಂಡು ಕೆಲ ಕಾಲ ಮಾತನಾಡಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
138 ರನ್‌ಗಳ ಗುರಿಯೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಏಳು ವಿಕೆಟ್‌ಗಳಿಂದ ಕೆಕೆಆರ್ ಅನ್ನು ಸುಲಭವಾಗಿ ಸೋಲಿಸಿತು.  ಮೈದಾನದಲ್ಲಿ ಬ್ಯಾಟಿಂಗ್ ಮಾಡುವಾಗ ಮಹೇಂದ್ರ ಸಿಂಗ್ ಧೋನಿ ಒಂದು ರನ್ ಗಳಿಸಿ ಔಟಾಗದೆ ಉಳಿದರು. ಪಂದ್ಯದ ಬಳಿಕ ಕೆಕೆಆರ್ ಆಟಗಾರರಿಗೆ ಧೋನಿ ಕೈಕುಲುಕಿದರು . ಆಗ ಗಂಭೀರ್ ಬಂದು ಧೋನಿ ಕೈ ಕುಲುಕಿ ಅಪ್ಪಿಕೊಂಡರು. ಪಂದ್ಯ ಮುಗಿದ ಬಳಿಕ ಗಂಭೀರ್​ ಅವರು ಧೋನಿಯನ್ನು ತಬ್ಬಿಕೊಂಡು ಕೆಲ ಕಾಲ ಮಾತನಾಡಿದ್ದಾರೆ. ಈ ಘಟನೆಯ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗಿದೆ.
A post shared by IPL (@iplt20)

ಜತೆಗೆ ವಿಭಿನ್ನ ಕಮೆಂಟ್​ಗಳು ಕೂಡ ಬಂದಿವೆ. ಇತ್ತೀಚೆಗೆ ಕೊಹ್ಲಿ ಜತೆಯೂ ಗಂಭೀರ್​ ಬಹಳ ಸ್ನೇಹದಿಂದ ವರ್ತಿಸಿಕೊಂಡಿದ್ದರು. ಆರ್​ಸಿಬಿ ಪಂದ್ಯದ ವೇಳೆ ಗಂಭೀರ್​ ನೇರವಾಗಿ ಕೊಹ್ಲಿ ಬಳಿ ಬಂದು ಅವರನ್ನು ತಬ್ಬಿಕೊಂಡು ಮಾತನಾಡಿಸಿದ್ದರು. ಇದೀಗ ಧೋನಿಯನ್ನು ಕೂಡ ಇದೇ ರೀತಿಯಾಗಿ ಮಾತನಾಡಿದ್ದಾರೆ. ಈ ಇಬ್ಬರು ಆಟಗಾರರ ನಡುವಿನ ಈ ಮುಖಾಮುಖಿಯ ವಿಡಿಯೋ ಅಭಿಮಾನಿಗಳ ಮನ ಗೆದ್ದಿದೆ.
2011 ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಗೆಲುವಿಗೆ ಧೋನಿ ಒಬ್ಬರೇ ಕಾರಣರಲ್ಲ ಎಂದು ಗಂಭೀರ್ ಪದೇ ಪದೇ ಕಿಡಿ ಕಾರುತ್ತಲೇ ಇದ್ದರು. ಆದರೆ ಚೆನ್ನೈ ವಿರುದ್ಧದ ಪಂದ್ಯಕ್ಕೆ ಮುನ್ನ ಗಂಭೀರ್, ಧೋನಿ ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕ ಎಂದು ಹೊಗಳಿ ಎಲ್ಲರ ಅಚ್ಚರಿಗೆ ಕಾರಣರಾಗಿದ್ದರು. ಇದು ಇಷ್ಟಕ್ಕೇ ನಿಂತಿಲ್ಲ.  ಆದರೆ ಕಳೆದ ಆರ್ ಸಿಬಿ ವಿರುದ್ಧದ ಪಂದ್ಯದ ಬಳಿಕ ಗಂಭೀರ್ ತಾವೇ ಮುಂದಾಗಿ ಕೊಹ್ಲಿಯನ್ನು ತಬ್ಬಿಕೊಂಡು ಮಾತನಾಡಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಮೂಲಕ ತಾವು ಈ ಬಾರಿ ಕೂಲ್ ಆಗಿರುವುದಾಗಿ ಸಂದೇಶ ರವಾನಿಸಿದ್ದಾರೆ.
ಬಿಸಿಲೋ ಬಿಸಿಲು…ರಣ ಬಿಸಿಲಿನಲ್ಲಿ ಶಾಖದ ಹೊಡೆತ ತಡೆಗಟ್ಟಲು ಹೀಗೆ ಮಾಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
