ಚೆನೈ:ಬುಧವಾರ ರಾಜಸ್ಥಾನ ರಾಯಲ್ಸ್​ ಹಾಗೂ ಚೆನೈ ಸೂಪರ್​​ ಕಿಂಗ್ಸ್​ ನಡುವೆ ನಡೆದ IPL ಪಂದ್ಯದ ಟಿಕೆಟ್​ ಅನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ವಿಚಾರವಾಗಿ ಪೊಲೀಸರು 24 ಮಂದಿಯನ್ನು ಬಂಧಿಸಿದ್ದಾರೆ.
ಚೆಪಾಕ್​ನ ಚಿದಂಬರಂ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದ ಟಿಕೆಟ್​ಗಳನ್ನು ಬಂಧಿತ ಆರೋಪಿಗಳು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಪೊಲೀಸರು 65,700 ರೂಪಾಯಿ ಮೌಲ್ಯದ 62 ಟಿಕೆಟ್​ಗಳನ್ನು ವಶಕ್ಕೆ ಪಡೆದಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:UP ಪೊಲೀಸ್​-STF ಜಂಟಿ ಕಾರ್ಯಾಚರಣೆ; ಅತೀಕ್ ಪುತ್ರ, ಶೂಟರ್ ಗುಲಾಮ್​ ಹತ್ಯೆ
ಏಪ್ರಿಲ್​ 11ರಂದು ಪೊಲೀಸರು ನಕಲಿ ಐಪಿಟಲ್​ ಟಿಕೆಟ್​ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿದ್ದರು. ಬಂಧಿತರಿಂದ ದೊರೆತ ಮಾಹಿತಿ ಮೇರೆಗೆ 13 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ.
ಏಪ್ರಿಲ್​ 11ರಂದು ದೆಹಲಿ ಪೊಲೀಸರು ಅರುಣ್​ ಜೇಟ್ಲಿ ಕ್ರೀಡಾಂಗಣದ ಬಳಿ ದೆಹಲಿ-ಮುಂಬೈ ನಡುವಿನ ಪಂದ್ಯದ ನಕಲಿ ಐಪಿಎಲ್​ ಟಿಕೆಟ್​ ಮಾರುತ್ತಿದ್ದವರನ್ನು ಮಫ್ತಿಯಲ್ಲಿ ಬಂಧಿಸಿದ್ದರು.
ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಐಪಿಎಲ್​ ಶುರುವಾದಾಗಿನಿಂದಲೂ ದಿನದಿಂದ ದಿನಕ್ಕೆ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿದ್ದು ಇದು ಕ್ರಿಕೆಟ್​ ಮಂಡಳಿಗಳ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ. ಸ್ಟೇಡಿಯಂ ಹೊರತುಪಡಿಸಿ ಖಾಸಗಿ ಸಿಬ್ಬಂದಿಗಳಿಂದ ಟಿಕೆಟ್​ ಖರೀದಿಸಬೇಡಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
