.ನವದೆಹಲಿ:ರಾಜಧಾನಿ ನವದೆಹಲಿ ಮೂಲದ ರಿಸೋರ್ಸ್​ಫುಲ್ ಆಟೋಮೊಬೈಲ್ ಕಂಪನಿಯು ಕೇವಲ 12 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯೊಂದಿಗೆ ಐಪಿಓ (ಇನಿಶಿಯಲ್ ಪಬ್ಲಿಕ್ ಆಫರಿಂಗ್) ಬಿಡುಗಡೆ ಮಾಡಿತ್ತು. ಆದರೆ, ಅಚ್ಚರಿ ಎಂಬಂತೆ 4800 ಕೋಟಿ ರೂಪಾಯಿ ಮೌಲ್ಯದ ಬಿಡ್​ಗಳು ಬಂದವು. ಕೇವಲ ಎರಡು ಶೋರೂಮ್ಳು ಮತ್ತು 8 ಉದ್ಯೋಗಿಗಳನ್ನು ಹೊಂದಿರುವ ಈ ಕಂಪನಿಯ ಐಪಿಓ ಓವರ್​ಸಬ್​ಸ್ಕ್ರಿಪ್ಶನ್ ಅಚ್ಚರಿ ಮೂಡಿಸಿದೆ. ಈ ಕಂಪನಿಯ ಷೇರುಗಳು ಆಗಸ್ಟ್ 29ರಂದು ಮಾರುಕಟ್ಟೆಯಲ್ಲಿ ಎಸ್​ಎಮ್ ವಿಭಾಗದಲ್ಲಿ ಲಿಸ್ಟಿಂಗ್ ಆಗಿವೆ. ಆದರೆ, ‘ಇಶ್ಯು ಪ್ರೖೆಸ್ ಬ್ರಾ್ಯಂಡ್’ನಡಿ ಲಿಸ್ಟ್ ಆಯಿತಾದರೂ (ಪ್ರತಿ ಷೇರಿಗೆ 117 ರೂ.), ಹೂಡಿಕೆದಾರರಿಗೆ ತಕ್ಷಣಕ್ಕೆ ಯಾವುದೇ ಲಾಭವಾಗಲಿಲ್ಲ. ಆ ಬಳಿಕದ ವಹಿವಾಟಿನಲ್ಲಿ ಷೇರು ಬೆಲೆ 124 ರೂ.ಗೆ ಸ್ಥಿರಗೊಂಡಿದೆ.
ಏನಾಯಿತು?:ದೆಹಲಿ ಮೂಲದ ಈ ಕಂಪನಿಯು ಯಮಹಾ ಮೋಟಾರ್​ಬೈಕ್​ಗಳನ್ನು ಅಧಿಕೃತವಾಗಿ ಮಾರಾಟ ಮಾಡುತ್ತದೆ. ನವದೆಹಲಿಯಲ್ಲಿ ಸಾಹ್ನಿ ಆಟೋಮೊಬೈಲ್ಸ್ ಹೆಸರಿನಲ್ಲಿ ಎರಡು ಶೋರೂಮ್ಳನ್ನು ಈ ಕಂಪನಿ ಹೊಂದಿದೆ. ಈ ಎರಡೂ ಶೋರೂಮ್ಳಲ್ಲಿ ಇರುವ ಉದ್ಯೋಗಿಗಳ ಸಂಖ್ಯೆ ಕೇವಲ 8. 2018ರಲ್ಲಿ ಆರಂಭಗೊಂಡಿರುವ ರಿಸೋರ್ಸ್​ಫುಲ್ ಆಟೋಮೊಬೈಲ್ ಆಗಸ್ಟ್ 22ರಂದು ಐಪಿಒ ಸಲ್ಲಿಸಿತ್ತು. ಹೂಡಿಕೆದಾರರು ಆಗಸ್ಟ್ 28ರವರಗೆ ಹೂಡಿಕೆ ಮಾಡಿದಾಗ, ಸಂಗ್ರಹಗೊಂಡದ್ದು 4,768.88 ಕೋಟಿ ರೂ.
ಕಂಪನಿಯ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಪ್ರಕಾರ, ರಿಸೋರ್ಸ್​ಫುಲ್ ಆಟೋಮೊಬೈಲ್ ಐಪಿಒ ಆದಾಯವನ್ನು ದೆಹಲಿ-ಎನ್​ಸಿಆರ್ ಪ್ರದೇಶದಲ್ಲಿ ಎರಡು ಹೊಸ ಶೋರೂಮ್ಳನ್ನು ತೆರೆಯಲು ಮತ್ತು ಸಾಲ ಮರುಪಾವತಿ ಹಾಗೂ ಕಾರ್ಯನಿರತ ಬಂಡವಾಳದ ಅಗತ್ಯಗಳನ್ನು ಒಳಗೊಂಡಂತೆ ತನ್ನ ಕಾರ್ಯಾಚರಣೆಗಳ ವಿಸ್ತರಣೆಗೆ ಬಳಸಲು ಯೋಜಿಸಿದೆ. ರಿಸೋರ್ಸ್​ಫುಲ್ ಆಟೋಮೊಬೈಲ್ಸ್ ಐಪಿಓ ಕ್ರೇಜ್​ಗೆ ಸಂಬಂಧಪಟ್ಟಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಅಚ್ಚರಿ ವ್ಯಕ್ತಪಡಿಸಿದ್ದು, ಓವರ್​ಸಬ್​ಸ್ಕ್ರಿಪ್ಶನ್ ಆಗಿದ್ದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.
ಅಬ್ಬಾ! ಎಂತಹ ಜಾಗದಲ್ಲಿ ಅಡಗಿದೆ MH370 ವಿಮಾನ: ನಿಗೂಢ ನಾಪತ್ತೆ ಕೇಸ್​ ಬಗೆಹರಿದಿದೆ ಎಂದ ವಿಜ್ಞಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
