ಡೆಹ್ರಾಡೂನ್:ಆಘಾತಕಾರಿ ಪ್ರಕರಣವೊಂದರಲ್ಲಿ, ಉತ್ತರಾಖಂಡ ಐಪಿಎಸ್ ಅಧಿಕಾರಿಯೊಬ್ಬರು ಹುಡುಗನೊಬ್ಬನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ.ಐಪಿಎಸ್ ಅಧಿಕಾರಿ, ಇತರ ಕೆಲ ಪೊಲೀಸ್ ಸಿಬ್ಬಂದಿಯೊಂದಿಗೆ ಸೇರಿ ಸೋಮವಾರ ಮಧ್ಯಾಹ್ನ ಬಿಂದಾಲ್ ಪೊಲೀಸ್ ಚೌಕಿಗೆ ಆ ಹುಡುಗನನ್ನು ಕರೆಸಿ ಆತನ ಬಟ್ಟೆಗಳನ್ನು ಬಿಚ್ಚಿ ಹೊಡೆದು, ಸಿಗರೇಟಿನಿಂದ ಸುಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿ:ಪತ್ನಿ ಹತ್ಯೆ ನಂತರ ಪೊಲೀಸರಿಗೆ ಹೆದರಿ ಮನೆಯಲ್ಲೇ ನೇಣಿಗೆ ಶರಣಾದ ಪತಿ
ಬಾಲಕನ ಕುಟುಂಬ ಉತ್ತರಾಖಂಡ ಪೊಲೀಸ್ ಪ್ರಧಾನ ಕಚೇರಿಗೆ ನೀಡಿದ ದೂರಿನಲ್ಲಿ, ಅವರ ಮಗ ಮತ್ತು ಐಪಿಎಸ್ ಅಧಿಕಾರಿಯ ಮಗಳು ಸ್ನೇಹಿತರಾಗಿದ್ದಾರೆ, ಅದು ಆ ಅಧಿಕಾರಿಗೆ ಇಷ್ಟವಾಗಿರಲಿಲ್ಲ. ತನಗೆ ಸಹಾಯ ಬೇಕಿದೆ ಎಂದು ಹೇಳಿ ಆಗಸ್ಟ್ 10 ರಂದು ಬಾಲಕನನ್ನು ಪೊಲೀಸ್ ಚೌಕಿಗೆ ಕರೆಸಿಕೊಂಡ ಆ ಅಧಿಕಾರಿ ಹಾಗೂ ಇತರ ಸಿಬ್ಬಂದಿ ಸೇರಿ ಅಲ್ಲಿ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬ ಆರೋಪಿಸಿದೆ.“ಅಲ್ಲಿಗೆ ತಲುಪಿದಾಗ, ಅವರು ನನಗೆ ನಿರ್ದಯವಾಗಿ ಹೊಡೆಯಲು ಪ್ರಾರಂಭಿಸಿದರು. ನಂತರ ಪೊಲೀಸ್ ಚೌಕಿಯಲ್ಲಿದ್ದ ಇತರ ಪೊಲೀಸ್ ಸಿಬ್ಬಂದಿಯೊಂದಿಗೆ ನನ್ನ ಬಟ್ಟೆಗಳನ್ನು ಬಿಚ್ಚಿ ಸಿಗರೇಟಿನಿಂದ ಸುಟ್ಟರು ಎಂದು ಬಾಲಕ ತಿಳಿಸಿದ್ದಾನೆ.ಅಷ್ಟೇ ಅಲ್ಲದೆ ಅಧಿಕಾರಿ ಈ ಘಟನೆ ಬಹಿರಂಗಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಬೆದರಿಕೆ ಹಾಕಿದ್ದಾರೆ ಎಂದು ಹುಡುಗ ತಿಳಿಸಿದ್ದಾನೆ.
ಇದನ್ನೂ ಓದಿ:ನಾಲ್ಕನೇ ದೀರ್ಘಾವಧಿಯ ಪ್ರಧಾನಿ ನಮೋ: ನಾಳೆ ಏಳನೇ ಬಾರಿ ಕೆಂಪುಕೋಟೆಯಿಂದ ಭಾಷಣ
ಹಲ್ಲೆಯ ನಂತರ, ಬಾಲಕನ ಮನೆಯವರು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದಾಗ ಬಾಲಕನ ಮೇಲೆ ಮೂರ್ನಾಲ್ಕು ಜನ ಹಲ್ಲೆ ಮಾಡಿದ್ದಾರೆ ಎಂದು ವೈದ್ಯಕೀಯ ವರದಿ ದೃಢಪಡಿಸಿದೆ. ಅವನ ಕಿವಿ ಮತ್ತು ಪೃಷ್ಠದ ಕೆಳಗೆ ಅನೇಕ ಗಾಯವಾಗಿದೆ. ಅವರ ಬಲಗೈ ಮೇಲೆ ಸಿಗರೇಟ್ ಸುಟ್ಟ ಗುರುತುಗಳಿವೆ.ಐಪಿಎಸ್ ಅಧಿಕಾರಿ ಆ ಹುಡುಗನ ದೂರಿಗೆ ಸಂಬಂಧಿಸಿದಂತೆ ಪ್ರತಿ ದೂರು ದಾಖಲಿಸಿದ್ದು, ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಬಾಲಕನ ಕುಟುಂಬ ಮಾಡಿದ ಆರೋಪಗಳನ್ನು ತಳ್ಳಿಹಾಕಿದ ಅಧಿಕಾರಿ ನಾನು ಹುಡುಗನನ್ನು ಕರೆದಿರಲಿಲ್ಲ ಎಂದು ಹೇಳಿದ್ದಾರೆ. ಹುಡುಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಗಳಿಗೆ ಬೆದರಿಸುತ್ತಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ :ಬಿಎಸ್‌-4 ವಾಹನ ಖರೀದಿಸಿದ್ದೀರಾ? ಸುಪ್ರೀಂಕೋರ್ಟ್‌ ನೀಡಿದೆ ಸಿಹಿ ಸುದ್ದಿ
ಎರಡೂ ಕಡೆಯವರು ನೀಡಿರುವ ದೂರುಗಳ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಲಾಗಿದೆ ಎಂದು ಮಹಾನಿರ್ದೇಶಕ (ಕಾನೂನು ಸುವ್ಯವಸ್ಥೆ) ಅಶೋಕ್ ಕುಮಾರ್ ತಿಳಿಸಿದ್ದಾರೆ. ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ನಗರ ಪೊಲೀಸ್ ವರಿಷ್ಠಾಧಿಕಾರಿ ಶ್ವೇತಾ ಚೌಬೆ ಅವರಿಗೆ ಡೆಹ್ರಾಡೂನ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಅತ್ಯಾಚಾರ ಆರೋಪಿ ಮಾಜಿ ಬಿಷಪ್​ ಫ್ರಾಂಕೋ ಮುಲ್ಲಕ್ಕಲ್ ವಿರುದ್ಧ ದೋಷಾರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
