ಬೆಂಗಳೂರು:ಕ್ಷಣ ಕ್ಷಣಕ್ಕೂ ಕರೊನಾ ಸೋಂಕಿನ ಪ್ರಕರಣಗಳು ಏರುತ್ತಲೇ ಇವೆ. ಇದೀಗ ಕರೊನಾ ವಾರಿಯರರ್ಸ್‌ ಆಗಿರುವ ಪೊಲೀಸರ ಮೇಲೆ ಕರೊನಾ ಕೆಂಗಣ್ಣು ಬಿಟ್ಟಿದೆ.ಐಪಿಎಸ್ ಅಧಿಕಾರಿ, ಕೆಎಸ್‌ಆರ್‌ಪಿ ಕಮಾಂಡೆಂಟ್ ಅಜಯ್ ಹಿಲೋರಿ ಅವರಿಗೆ ಕರೊನಾ ಪಾಸಿಟಿವ್ ವರದಿ ಬಂದಿದೆ. ಅಷ್ಟೇ ಅಲ್ಲದೇ ಒಟ್ಟು ಐವರು ಪೊಲೀಸರಿಗೆ ಹೊಸದಾಗಿ ಈ ಹೆಮ್ಮಾರಿ ಮೆಟ್ಟಿಕೊಂಡಿದೆ.
ಈವರೆಗೆ ಬೆಂಗಳೂರು ನಗರದಲ್ಲಿಯೇ 80ಕ್ಕೂ ಹೆಚ್ಚು ಪೊಲೀಸರು ಕರೊನಾ ಬಾಧಿತರಾಗಿದ್ದಾರೆ.
ಇದನ್ನೂ ಓದಿ:VIDEO| ಕರೊನಾಗೆ ಹೆದರಬೇಡಿ: ಪೊಲೀಸರಿಗೆ ಯೋಗ ಟೀಚರ್ ಆಗಿ ಧೈರ್ಯ ತುಂಬಿದ ಅಲೋಕ್​ ಕುಮಾರ್​!
ನಿನ್ನೆ ಒಂದೇ ದಿನ ಬೆಂಗಳೂರಿನ ಮಾರತ್ ಹಳ್ಳಿಯ ಪೊಲೀಸ್ ಠಾಣೆಯ ನಾಲ್ವರು ಹಾಗೂ ವಿವಿಪುರ ಠಾಣೆಯ ಒಬ್ಬ ಕಾನ್ಸ್‌ಟೆಬಲ್‌ ಸೇರಿ‌ ಐವರು ಪೊಲೀಸರಿಗೆ ಸೋಂಕು ದೃಢಪಟ್ಟಿತ್ತು. ಹಲಸೂರು ಗೇಟ್‌ ಪೊಲೀಸ್‌ ಠಾಣೆಯ ಹೆಡ್‌ ಕಾನ್ಸ್‌ಟೆಬಲ್‌, ಕುಮಾರಸ್ವಾಮಿ ಸಂಚಾರ ಠಾಣೆಯ ಕಾನ್ಸ್‌ಟೆಬಲ್‌ಗೂ ಕರೊನಾ ಪಾಸಿಟಿವ್‌ ಬಂದಿದೆ. ಈಗಾಗಲೇ ಲಾಕ್‌ಡೌನ್‌ ಆಗಿರುವ ಕಬ್ಬನ್‌ಪಾರ್ಕ್ ಪೊಲೀಸ್‌ ಠಾಣೆಯ ಮತ್ತೊಬ್ಬ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ.
ಜತೆಗೆ, ನಿನ್ನೆ ಕ್ವಾರಂಟೈನ್‌ನಲ್ಲಿದ್ದ ಸಿಸಿಬಿಯ ಇಬ್ಬರು ಪೊಲೀಸರಲ್ಲಿ ನಿನ್ನೆ ಕರೊನಾ ವೈರಸ್‌ ಕಾಣಿಸಿಕೊಳ್ಳುವ ಮೂಲಕ ಸಿಸಿಬಿಯ 6 ಮಂದಿ ಪೊಲೀಸರಿಗೆ ಸೋಂಕು ತಗುಲಿದಂತಾಗಿದೆ. ಕರೊನಾ ವೈರಸ್‌ನಿಂದ ಇದಾಗಲೇ ಮೂವರು ಪೊಲೀಸರು ಪ್ರಾಣ ಕಳೆದುಕೊಂಡಿದ್ದಾರೆ.
ರಾಜ್ಯದಲ್ಲಿ 175ಕ್ಕೂ ಹೆಚ್ಚು ಪೊಲೀಸರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಇಡೀ ಇಲಾಖೆಯಲ್ಲಿ ಆತಂಕ ಮನೆಮಾಡಿದೆ.
ಐಎಎಸ್‌ ಅಧಿಕಾರಿಗಳ ಬದುಕಿನ ಕರಾಳ ಸತ್ಯ ಬಿಚ್ಚಿಟ್ಟ ಶಂಕರ್‌ ಬಿದರಿ

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:seventeen + six =
Remember me
