ಜೈಪುರ:ಮೊನ್ನೆಮೊನ್ನೆಯಷ್ಟೇ ಐಪಿಎಸ್​ ಅಧಿಕಾರಿ ಡಾ.ಡಿ. ರೂಪಾ ಟ್ವೀಟ್​ ವೈರಲ್​ ಆಗಿತ್ತು. ನಟಿ ಕಂಗನಾ ಹಾಗೂ ಅವರ ಮಧ್ಯೆ ಟ್ವಿಟರ್​ನಲ್ಲಿ ವಾಗ್ವಾದ ನಡೆದಿತ್ತು. ಇದೀಗ ಮತ್ತೊಬ್ಬ ಐಪಿಎಸ್​ ಅಧಿಕಾರಿ ಟ್ವೀಟ್​ ಕೂಡ ವೈರಲ್​ ಆಗಿದ್ದು, ಪೊಲೀಸ್ ಇಲಾಖೆಯೇ ಹುಬ್ಬೇರಿಸುವಂತೆ ಮಾಡಿದೆ.
ಏಕೆಂದರೆ ಈ ಅಧಿಕಾರಿ ‘ಥ್ಯಾಂಕ್​ಲೆಸ್​ ಜಾಬ್’​ ಎಂದು ಟ್ವೀಟ್​ ಮಾಡಿದ್ದಾರೆ. ‘ನೀನು ಥ್ಯಾಂಕ್​ಲೆಸ್ ಕೆಲಸವನ್ನು ಆರಿಸಿಕೊಂಡಿದ್ದಿ. ಯಾರೂ ಥ್ಯಾಂಕ್ಸ್ ಹೇಳದಾಗ ಅಪ್​ಸೆಟ್​ ಆಗಬಾರದು. ಚಪ್ಪಾಳೆ ಹಾಗೂ ಮೆಚ್ಚುಗೆಯನ್ನು ಬೆನ್ನತ್ತಬೇಡ..’ ಎಂಬುದಾಗಿ ಅವರು ಟ್ವೀಟ್​ ಮಾಡಿಕೊಂಡಿದ್ದಾರೆ. ಅವರ ಈ ಟ್ವೀಟ್​ ವೈರಲ್​ ಆಗಿದ್ದು, ಎರಡೇ ದಿನಗಳಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
ಅಂದಹಾಗೆ ಇಂಥದ್ದೊಂದು ಟ್ವೀಟ್ ಮಾಡಿ ಗಮನ ಸೆಳೆದಿರುವ ಐಪಿಎಸ್​ ಅಧಿಕಾರಿಯ ಹೆಸರು ಗೌರವ್ ಯಾದವ್. ಇತ್ತೀಚೆಗೆ ಇವರನ್ನು ಎತ್ತಂಗಡಿ ಮಾಡಿದ ಹಿನ್ನೆಲೆಯಲ್ಲಿ ಹೀಗೆ ಟ್ವೀಟ್​ ಮಾಡಿದ್ದಾರೆ ಎನ್ನಲಾಗಿದ್ದರೂ ಸ್ವತಃ ಅಧಿಕಾರಿಯೇ ಅದನ್ನು ನಿರಾಕರಿಸಿದ್ದಾರೆ.
ರಾಜಸ್ಥಾನದ ಕೋಟಾದಲ್ಲಿ ಇತ್ತೀಚೆಗೆ ಕಾಂಗ್ರೆಸ್​ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್​ ಆಗಿತ್ತು. ಅದೇ ಕಾರಣಕ್ಕೆ ಅಲ್ಲಿನ ಎಸ್​ಪಿ ಆಗಿದ್ದ ಗೌರವ್​ ಯಾದವ್​ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ನಾನು ಲೋಕಾಭಿರಾಮವಾಗಿ ಆ ಟ್ವೀಟ್ ಮಾಡಿದ್ದು, ಅದಕ್ಕೂ ಇತ್ತೀಚಿನ ಬೆಳವಣಿಗೆಗೂ ಯಾವುದೇ ಸಂಬಂಧವಿಲ್ಲ. ಅಷ್ಟಕ್ಕೂ ನಾನು ಅದನ್ನು ಗೆಳೆಯರೊಬ್ಬರ ವಾಲ್​ನಿಂದ ಕಾಪಿ ಮಾಡಿದ್ದಾಗಿಯೂ ಸ್ಪಷ್ಟನೆ ನೀಡಿದ್ದಾರೆ. ಗೌರವ್ ಯಾದವ್ ಸದ್ಯ ಜೈಪುರದ ಸಿಐಡಿ ಕ್ರೈಂ ಬ್ರ್ಯಾಂಚ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್​)
You chose a thankless job, you can’t be upset when nobody thanks you. Don’t start chasing applause and acclaim. That way lies madness.— Gaurav Yadav (@GauravYadavIPS)November 21, 2020
You chose a thankless job, you can’t be upset when nobody thanks you. Don’t start chasing applause and acclaim. That way lies madness.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
