ನವದೆಹಲಿ:ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಐಎಎಸ್​ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಯಿದು ಎಂಬ ಶೀರ್ಷಿಕೆಯಲ್ಲಿ ಕೆಲ ಕಠಿಣ ಪ್ರಶ್ನೆಗಳು ಹರಿದಾಡುತ್ತಿರುವುತ್ತವೆ. ಅಂತೆಯೇ ಅದಕ್ಕೆ ಕಂಡುಕೊಳ್ಳಲು ಓದುಗರು ಪ್ರಯತ್ನಪಟ್ಟಿದ್ದು ವರದಿಯಾಗಿರುತ್ತದೆ.
ಈಗ ಅಂಥದ್ದೇ ಒಂದು ಪ್ರಶ್ನೆ ಹಾಗೂ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಹಾಗಂಥ ಐಎಎಸ್​ ಸಂದರ್ಶನದಲ್ಲಿ ಕೇಳಿದ ಪ್ರಶ್ನೆ ಎಂಬ ಹಣೆಪಟ್ಟಿ ಇದಕ್ಕಿಲ್ಲ. ಬದಲಾಗಿ, ಐಪಿಎಸ್​ ಅಧಿಕಾರಿಯೊಬ್ಬರಿಗೆ ಯುಪಿಎಸ್​ಸಿ ಪರೀಕ್ಷಾರ್ಥಿಯೊಬ್ಬರು ಕೇಳಿದ ಪ್ರಶ್ನೆಯಿದು. ಅವರು ನೀಡಿದ ಉತ್ತರ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ;73 ದಿನಗಳಲ್ಲಿ ಬಳಕೆಗೆ ಸಿಗುತ್ತಾ ‘ಕೋವಿಶೀಲ್ಡ್’​ ಕರೊನಾ ಲಸಿಕೆ? ಭಾರತೀಯ ಉತ್ಪಾದಕರ ವಾದವೇನು?
ಓಡಿಶಾ ಕೇಡರ್​ನಲ್ಲಿ ಐಪಿಎಸ್ ಅಧಿಕಾರಿಯಾಗಿರುವ ಅರುಣ್​ ಬೋಥ್ರಾ ಅವರಿಗೆ ಕೇಂದ್ರ ನಾಗರಿಕ ಸೇವಾ ಪರೀಕ್ಷೆ ಆಕಾಂಕ್ಷಿಯೊಬ್ಬರು ಒಂದೇ ಸಾಲಿನ ಉತ್ತರ ಬಯಸಿದ್ದರು. ಅಷ್ಟಕ್ಕೂ ಅವರ ಪ್ರಶ್ನೆ ಏನಾಗಿತ್ತು ಎಂದರೆ, ನಾನು ಯುಪಿಎಸ್​ಸಿ ಪರೀಕ್ಷೆ ಸಜ್ಜಾಗುತ್ತಿದ್ದೇನೆ? ನನಗೆ ಒಂದೇ ಸಾಲಿನಲ್ಲಿ ನಿಮ್ಮ ಸಲಹೆ ಬೇಕು ಭಿನ್ನವಿಸಿಕೊಂಡಿದ್ದ.
ರಾಜು ಭೈಯ್ಯಾ ಎಂಬ ಖಾತೆಯಿಂದ ಕೇಳಲಾದ ಅಷ್ಟೇ ಸರಳವಾಗಿ ಉತ್ತರ ನೀಡಿದ್ದರು ಅರುಣ್​. ‘ ನಿಮ್ಮ ಸ್ಮಾರ್ಟ್​ಫೋನ್​​ಅನ್ನು ನೋಕಿಯಾ 5310 ಮಾದರಿಗೆ ಬದಲಾಯಿಸಿಕೊಳ್ಳಿ’ ಎಂದು ಅವರು ಪ್ರತಿಕ್ರಿಯಸಿದ್ದರು.
ಇದನ್ನೂ ಓದಿ;ವಾಹನ ಸವಾರರಿಗೆ ಶುಭ ಸುದ್ದಿ; ಡಿ.31ರವರೆಗೂ ಲೈಸೆನ್ಸ್​, ದಾಖಲೆಗಳ ಮಾನ್ಯತಾ ಅವಧಿ ವಿಸ್ತರಣೆ
ಬೇಕಾಗಿದ್ದೆಲ್ವೂ ಮೊಇಬೈಲ್​ನಲ್ಲಿಯೇ ದೊರಕುತ್ತದೆ ಎಂಬ ಭ್ರಮೆಯಲ್ಲಿರುವ ಯುವಪೀಳೀಗೆ ಅಧ್ಯಯನದಿಂದ ವಿಮುಖವಾಗಿದೆ ಎಂಬುದು ಈ ಮಾತಿನ ಒಳಾರ್ಥವಾಗಿತ್ತು. ಹೀಗಾಗಿ ಹಳೆಯ ಮೊಬೈಲ್​ ಬಳಸಿದರೆ ಸಾಮಾಜಿಕ ಜಾಲತಾಣದಿಂದ ದೂರವಾಗಿ ಓದಿ ಎಂಬುದನ್ನು ಅತ್ಯಂತ ಸರಳವಾಗಿ ಅವರು ಹೇಳಿದ್ದರು.
Replace your mobile with Nokia 5310.https://t.co/AAAZ8S3lS3
— Arun Bothra 🇮🇳 (@arunbothra)August 20, 2020

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್ ಸಾವು? ಇನ್ನು ಸಹೋದರಿಯದ್ದೇ ಆಧಿಪತ್ಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 13 =
Remember me
