ಮಹಾರಾಷ್ಟ್ರ:ಮಹತ್ವದ ಪುನರ್ರಚನೆಯಲ್ಲಿ, ಮಹಾರಾಷ್ಟ್ರ ಪೊಲೀಸ್ ಡಿಜಿಪಿ ಮತ್ತು 1988ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ರಜನೀಶ್ ಸೇಠ್ ಅವರನ್ನು ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ:ಆರ್‌ಟಿಐ ಕಾರ್ಯಕರ್ತರಲ್ಲಿ ಭೀತಿ ಸೃಷ್ಟಿಸುವ ಹವಣಿಕೆ; ಬಿಜೆಪಿ ಆರೋಪ
ಇದೇ ವೇಳೆ 1988ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯೂ ಆಗಿರುವ ರಶ್ಮಿ ಶುಕ್ಲಾ ಕೂಡ ಮಹಾರಾಷ್ಟ್ರ ರಾಜ್ಯದ ಹೊಸ ಪೊಲೀಸ್ ಮಹಾನಿರ್ದೇಶಕರಾಗಿ (DGP) ನೇಮಕಗೊಂಡಿದ್ದಾರೆ. ಎಂಪಿಎಸ್‌ಸಿ ಅಧ್ಯಕ್ಷ ಕಿಶೋರರಾಜೆ ನಿಂಬಾಳ್ಕರ್ ಬುಧವಾರ ನಿವೃತ್ತಿ ಹೊಂದಿದ್ದು, ಆ ಸ್ಥಾನ ಖಾಲಿಯಾಗಿದೆ.
ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗೆ ರಜನೀಶ್ ಸೇಠ್ ಅರ್ಜಿ ಸಲ್ಲಿಸಿದ್ದರು. ಮುಖ್ಯ ಕಾರ್ಯದರ್ಶಿ ಮನೋಜ್ ಸೌನಿಕ್ ನೇತೃತ್ವದ ಸಮಿತಿಯು ಸ್ವೀಕರಿಸಿದ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಮೂರು ಹೆಸರುಗಳ ಪಟ್ಟಿಯನ್ನು ಮುಖ್ಯಮಂತ್ರಿಯ ಪರಿಗಣನೆಗೆ ಕಳುಹಿಸಿದೆ.
ಇದನ್ನೂ ಓದಿ:‘ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಬಿಡುಗಡೆ ಸಿಕ್ಕಿಲ್ಲ’: ಪತ್ರಕರ್ತ ಪಿ ಸಾಯಿನಾಥ್
ಈ ಪಟ್ಟಿಯಲ್ಲಿ ರಜನೀಶ್ ಸೇಠ್, ಎಸ್‌ಟಿ ನಿಗಮದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶೇಖರ್ ಚನ್ನೆ, ಅರಣ್ಯ ಸೇವೆಯಲ್ಲಿ ನಿವೃತ್ತ ಹಿರಿಯ ಅಧಿಕಾರಿ ಪ್ರದೀಪ್‌ಕುಮಾರ್ ಸೇರಿದ್ದರು. ಈ ಮೂವರಲ್ಲಿ ರಜನೀಶ್ ಸೇಠ್ ಹೆಸರು ಮುಂಚೂಣಿಯಲ್ಲಿತ್ತು. ಅಂತಿಮವಾಗಿ ಆ ಸ್ಥಾನಕ್ಕೆ ರಜನೀಶ್ ಸೇಠ್ ಅವರನ್ನು ಇದೀಗ ಆಯ್ಕೆ ಮಾಡಲಾಗಿದೆ.
ಐಪಿಎಸ್ ರಶ್ಮಿ ಶುಕ್ಲಾ ಅವರು ರಾಜ್ಯ ಪೊಲೀಸ್‌ನ ಮುಂದಿನ ಡಿಜಿಪಿ ಆಗುವ ಸುಳಿವು ಕೂಡ ಲಭಿಸಿತ್ತು. ರಜನೀಶ್ ಸೇಠ್ ಹುದ್ದೆಯನ್ನು ತೆರವು ಮಾಡಿದ್ದರಿಂದ ಶುಕ್ಲಾ ಅವರನ್ನು ರಾಜ್ಯ ಪೊಲೀಸ್ ಪಡೆ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ,(ಏಜೆನ್ಸೀಸ್).
VIDEO | ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ 31 ಸಾವು; ಡೀನ್ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ ಬಿಜೆಪಿ ಸಂಸದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + five =
Remember me
