ಮುಂಬೈ:ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಯುದ್ಧದ ಭೀತಿ ಹೆಚ್ಚಾಗಿದೆ. ಈ ದಾಳಿಗೆ ಪ್ರತ್ಯುತ್ತರ ನೀಡುವುದಾಗಿ ಇಸ್ರೇಲ್ ಕೂಡ ಘೋಷಿಸಿದೆ. ಉಭಯ ದೇಶಗಳ ನಡುವಿನ ಈ ಉದ್ವಿಗ್ನತೆಯ ನಡುವೆ, ಅದಾನಿ ಸಮೂಹದ ಷೇರುಗಳ ಬೆಲೆ ಕುಸಿತ ಕಂಡಿದೆ.
ಭಾರತೀಯ ಷೇರು ಮಾರುಕಟ್ಟೆಯಲ್ಲೂ ಭೂಕಂಪವಾಗಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಅದಾನಿ ಗ್ರೂಪ್ ಈ ಕಂಪನಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಏಕೆಂದರೆ, ಅದಾನಿ ಪೋರ್ಟ್ಸ್ ಕಂಪನಿಯು ಉತ್ತರ ಇಸ್ರೇಲ್‌ನಲ್ಲಿ ಹೈಫಾ ಬಂದರನ್ನು ನಿರ್ವಹಿಸುತ್ತದೆ. ಇರಾನ್‌ನಿಂದ ಇತ್ತೀಚಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಇಸ್ರೇಲ್ ಮತ್ತು ಇರಾನ್ ನಡುವಿನ ಯಾವುದೇ ಸಂಘರ್ಷವು ಆತಂಕದ ವಿಷಯವಾಗಿದೆ. ಇದರ ಪರಿಣಾಮ ಸೋಮವಾರ ಅದಾನಿ ಗ್ರೂಪ್‌ ಷೇರುಗಳ ಬೆಲೆ ಮೇಲೆ ಗೋಚರಿಸುತ್ತಿದೆ.
ಅದಾನಿ ಪವರ್ ಷೇರು ಬೆಲೆ ಶೇ. 4.12ರಷ್ಟು ಕುಸಿದು ರೂ.570.65ಕ್ಕೆ ತಲುಪಿದೆ. ಅದಾನಿ ಗ್ರೀನ್ ಎನರ್ಜಿ ಕೂಡ ಶೇಕಡಾ 4.32ರಷ್ಟು ಕುಸಿದು ಅಂದಾಜು 1802 ರೂ. ತಲುಪಿದೆ. ಅದಾನಿ ಎಂಟರ್‌ಪ್ರೈಜ್‌ ಷೇರು ಬೆಲೆ ಶೇ.3.20ರಷ್ಟು ಕುಸಿತವಾಗಿದೆ. ಅದಾನಿ ಟೋಟಲ್ ಷೇರು ಬೆಲೆ ಕೂಡ ಶೇ.4ಕ್ಕಿಂತ ಹೆಚ್ಚು ಕುಸಿದಿದೆ.
ಅದಾನಿ ಪೋರ್ಟ್ಸ್‌ ಆ್ಯಂಡ್​ ಸ್ಪೇಷಲ್​ ಎಕನಾಮಿಕ್​ ಜೋನ್​ ಲಿಮಿಟೆಡ್​ ಬೆಲೆ ಶೇ.2.13ರಷ್ಟು ಕುಸಿತ ಕಂಡು 1315.55 ರೂ. ಮುಟ್ಟಿದೆ. ಅದಾನಿ ಎನರ್ಜಿ ಸಲ್ಯೂಷನ್‌ನಲ್ಲಿ ಶೇ.3.60ರಷ್ಟು ಇಳಿಕೆಯಾಗಿದ್ದು, 1030.45 ರೂ. ತಲುಪಿದೆ.
ಎಸಿಸಿ ಶೇ.1.35ರಷ್ಟು ಇಳಿಕೆಯಾಗಿ 2435 ರೂ.ಗೆ ವಹಿವಾಟು ನಡೆಸುತ್ತಿದೆ. ಅಂಬುಜಾ ಸಿಮೆಂಟ್ ಕೂಡ ಶೇಕಡಾ 1 ಕ್ಕಿಂತ ಹೆಚ್ಚು ಕುಸಿದಿದ್ದು, 602 ರೂ ಸಮೀಪದಲ್ಲಿದೆ. ಎನ್‌ಡಿಟಿವಿ ಕೂಡ ಶೇ. 3.84ರಷ್ಟು ಕುಸಿದು 216.90 ರೂ.ನಲ್ಲಿ ವಹಿವಾಟು ನಡೆಸುತ್ತಿದೆ.

3 ವರ್ಷಗಳಲ್ಲಿ 1 ಲಕ್ಷವಾಯ್ತು 1.68 ಕೋಟಿ ರೂಪಾಯಿ: ವಿದ್ಯುತ್ ಕಂಪನಿಯ ಷೇರು ಬೆಲೆ ಮತ್ತೆ ಈಗ ಹೆಚ್ಚಳವಾಗಿದ್ದೇಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 11 =
Remember me
