ಹೊಸದಿಲ್ಲಿ:ಐಆರ್‌ಸಿಟಿಸಿಯ ಇ-ಕ್ಯಾಟರಿಂಗ್ ಪೋರ್ಟಲ್ ಮೂಲಕ ರೈಲು ಪ್ರಯಾಣಿಕರಿಗೆ ಮುಂಚಿತವಾಗಿ ಆರ್ಡರ್​ ಮಾಡಲಾದ ಆಹಾರಗಳನ್ನು ಪೂರೈಕೆ ಮತ್ತು ವಿತರಣೆಗಾಗಿ ಸ್ವಿಗ್ಗಿ ಫುಡ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಗುರುವಾರ ಪ್ರಕಟಣೆ ಮೂಲಕ ತಿಳಿಸಿದೆ. ಮೊದಲ ಹಂತದ ಭಾಗವಾಗಿ ಬೆಂಗಳೂರು, ಭುವನೇಶ್ವರ, ವಿಜಯವಾಡ ಮತ್ತು ವಿಶಾಖಪಟ್ಟಣಂ ರೈಲು ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದಿದೆ.
ಇದನ್ನೂ ಓದಿ:ಮೈಲಾರ ಲಿಂಗೇಶ್ವರನ ಜಾತ್ರೆಗಾಗಿ ಚಕ್ಕಡಿ ಏರಿ ಹೊರಟ ಭಕ್ತರು
“ಐಆರ್​ಸಿಟಿಸಿ ಬಂಡ್ಲ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ (ಸ್ವಿಗ್ಗಿ ಫುಡ್ಸ್) ಜತೆಗೆ IRCTC ಇ-ಕ್ಯಾಟರಿಂಗ್ ಪೋರ್ಟಲ್ ಮೂಲಕ ಮುಂಗಡ-ಆರ್ಡರ್ ಮಾಡಿದ ಊಟವನ್ನು ಸರಬರಾಜು ಮಾಡಲು ಮತ್ತು ತಲುಪಿಸಲು ನಾಲ್ಕು ರೈಲು ನಿಲ್ದಾಣಗಳಲ್ಲಿ ಮೊದಲ ಹಂತದಲ್ಲಿ PoC (ಪರಿಕಲ್ಪನೆಯ ಪುರಾವೆ) ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಬೆಂಗಳೂರು, ಭುವನೇಶ್ವರ, ವಿಜಯವಾಡ ಮತ್ತು ವಿಶಾಖಪಟ್ಟಣಂ ನಿಲ್ದಾಣಗಳಲ್ಲಿ ಈ ಸೇವೆ ಪ್ರಾರಂಭಗೊಳ್ಳಲಿದ್ದು, ಬಂಡಲ್ ಟೆಕ್ನಾಲಜೀಸ್ ಪ್ರೈವೇಟ್ ಮೂಲಕ ಇ-ಕ್ಯಾಟರಿಂಗ್ ಸೇವೆ ಶುರುವಾಗಲಿದೆ ಎಂದು ಐಆರ್​ಸಿಟಿಸಿ ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್​ನಲ್ಲಿ ತಿಳಿಸಿದೆ.
ಇದನ್ನೂ ಓದಿ:ಗುರುವಾರ 20% ಏರಿಕೆಯಾಗಿ ಅಪ್ಪರ್​ ಸರ್ಕ್ಯೂಟ್​ ಹಿಟ್​ ಆದ ಷೇರುಗಳು: ಶುಕ್ರವಾರವೂ ಈ ಸ್ಟಾಕ್​ನಲ್ಲಿ ಭಾರೀ​ ಲಾಭದ ನಿರೀಕ್ಷೆ
ಗುರುವಾರ (ಫೆ.22) ಐಆರ್​ಸಿಟಿಸಿಯ ಷೇರುಗಳು 1.04% ಏರಿಕೆಯಾಗಿ ಪ್ರತಿ ಈಕ್ವಿಟಿ ಷೇರಿಗೆ 935.95ಕ್ಕೆ ತಲುಪಿದೆ. ಸ್ವಿಗ್ಗಿ ಮತ್ತು IRCTC ನಡುವಿನ ಸಹಯೋಗವು ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಆಹಾರ ವಿತರಣಾ ಅಪ್ಲಿಕೇಶನ್‌ನ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).
ಸ್ಟಾರ್​​ ನಟಿಯರ ಮಧ್ಯೆ ನಿಂತಿರುವ ಈತ ಯಾರು ಗೊತ್ತೇ? ಫೋಟೋ ನೋಡಿದ್ರೆ ಖಂಡಿತ ತಿಳಿಯಲ್ಲ, ಸುದ್ದಿ ಓದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 10 =
Remember me
