ನವದೆಹಲಿ: ಜನ ಸಾಮಾನ್ಯರಿಗೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆಯನ್ನು ವಿಸ್ತರಿಸಲು ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ಆರೋಗ್ಯ ಹಾಗೂ ಸಾಮಾನ್ಯ ವಿಮಾ ಕಂಪನಿಗಳಿಗೆ ಅವಕಾಶ ಕಲ್ಪಿಸಿದೆ.
ಇದರಿಂದಾಗಿ ಪಾಲಿಸಿದಾರರು ಒಂದು ಲಕ್ಷ ರೂ.ಗಳಿಂದ ಗರಿಷ್ಠ ಐದು ಲಕ್ಷ ರೂ.ಗಳವರೆಗೆ ಪರಿಹಾರ ಮೊತ್ತವನ್ನು ಪಡೆಯಬಹುದಾಗಿದೆ. ಪ್ರಸ್ತುತ ವಿಮೆಯು ಕನಿಷ್ಠ ಒಂದು ಹಾಗೂ ಗರಿಷ್ಠ ಐದು ಲಕ್ಷ ರೂ. ಗಳದ್ದಾಗಿದೆ. ಆದರೆ, ಈಗ ಒಂದು ಲಕ್ಷ ರೂ.ಗೂ ಕಡಿಮೆ ಮೊತ್ತಕ್ಕೆ ಹಾಗೂ 5 ಲಕ್ಷಕ್ಕೂ ಅಧಿಕ ಮೊತ್ತಕ್ಕೆ ಪಾಲಿಸಿ ಮಾಡಿಸಬಹುದಾಗಿದೆ. 50 ಸಾವಿರ ರೂ.ಗಳ ಗುಣಕದಲ್ಲಿ ಪಾಲಿಸಿ ಪಡೆಯಬಹುದು.
ಇದನ್ನೂ ಓದಿ;ಕರೊನಾ ಲಸಿಕೆ ಪಡೆದ ಜಗತ್ತಿನ ಮೊತ್ತ ಮೊದಲ ವ್ಯಕ್ತಿ ಈತ; ಮೈನವಿರೇಳಿಸುವ ಕ್ಲಿನಿಕಲ್​ ಟ್ರಯಲ್​ ಅನುಭವ
ಕಳೆದ ಏಪ್ರಿಲ್ 1ರಂದು ಪ್ರಾಧಿಕಾರವು ವೈಯಕ್ತಿಕ ಹಾಗೂ ಕುಟುಂಬದ ಆರೋಗ್ಯ ವಿಮೆಗಾಗಿ ಐದು ಲಕ್ಷ ರೂ.ವರೆಗೆ ಪರಿಹಾರ ಒದಗಿಸುವ ಆರೋಗ್ಯ ಸಂಜೀವಿನಿ ಯೋಜನೆಯನ್ನು ಘೋಷಿಸಿತ್ತು. 29 ಕಂಪನಿಗಳಿಗೆ ವಿಮೆ ನೀಡಲು ಅನುಮತಿ ನೀಡಿತ್ತು.
ಆದರೆ, ಅತ್ಯಂತ ಕನಿಷ್ಠ ಮೊತ್ತ ಪರಿಹಾರವಾಗಿ ನೀಡುವುದು ಪಾಲಿಸಿದಾರರಿಗೆ ತೊಂದರೆಯಾಗಿ ಪರಿಣಮಿಸಿತ್ತು. ಜತೆಗೆ, ಕೊಠಡಿ ಬಾಡಿಗೆ ಹಾಗೂ ಪಾಲಿಸಿದಾರರು ಕೂಡ ಆಸ್ಪತ್ರೆ ವೆಚ್ಚವನ್ನು ಜತೆಯಾಗಿ ಭರಿಸಬೇಕಾದ ನಿಯಮ ಕೂಡ ತಲೆಬಿಸಿ ಮಾಡಿತ್ತು.
ಇದನ್ನೂ ಓದಿ;ಎಂಸಿಎ ಇನ್ನು ಎರಡು ವರ್ಷದ ಕೋರ್ಸ್​; ಎಇಸಿಟಿಇ ಆದೇಶ; ಹೇಗಿರಲಿದೆ ಪಠ್ಯಕ್ರಮ?
ಪ್ರಸ್ತುತ ವಿಮೆಯನ್ನು ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಪಡೆದುಕೊಳ್ಳಲು ವಿಮಾ ಪ್ರಾಧಿಕಾರ ಅವಕಾಶ ನೀಡಿದೆ. ಇದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಕರೊನಾ ಕೊನೆಯಾಗೋದು ಹೇಗೆ? ಲಸಿಕೆ ಸಿಗದಿದ್ದರೆ ಬೇರೆ ದಾರಿ ಏನಿದೆ? ಇಲ್ಲಿದೆ ಕುತೂಹಲಕಾರಿ ವಿಚಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
