ಮುಂಬೈ:ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ತಮ್ಮ 8ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಪತ್ನಿ ಸಫಾ ಬೇಗ್ ಅವರೊಂದಿಗೆ ಫೆಬ್ರವರಿ 3, ಶನಿವಾರದಂದು ಆಚರಿಸಿಕೊಂಡರು. ಇರ್ಫಾನ್ ಪಠಾಣ್ ಪತ್ನಿ ಸಫಾ ಬೇಗ್ ಅವರು ಇದೇ ಮೊದಲ ಬಾರಿಗೆ ಫರ್ದಾ ತೆಗೆದು ಚಿತ್ರವನ್ನು ತೆಗಿಸಿಕೊಂಡಿದ್ದಾರೆ. ಈ ಫೋಟೋ ಸಖತ್​​ ವೈರಲ್​​ ಆಗಿದೆ.
ಇರ್ಫಾನ್ ಪಠಾಣ್​  ಪತ್ನಿ ಸಫಾ ಬೇಗ್ ಇದುವರೆಗೆ ತಮ್ಮ ಮುಖವನ್ನು ಸಾರ್ವಜನಿಕವಾಗಿ ತೋರಿಸಿರಲಿಲ್ಲ. ಅವರು ಪ್ರತಿ ಚಿತ್ರದಲ್ಲೂ ಬುರ್ಖಾ ಧರಿಸಿಕೊಂಡಿರುತ್ತಿದ್ದರು. ಇದೀಗ ಮೊದಲ ಬಾರಿಗೆ ಪತಿಯೊಂದಿಗೆ ಬುರ್ಖಾ ಹಾಗೂ ಫರ್ದಾ  ರಹಿತ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಠಾಣ್ ಅವರು ತಮ್ಮ ಪತ್ನಿಯೊಂದಿಗೆ ಸುಂದರವಾದ ಚಿತ್ರವನ್ನು ಅಪ್‌ಲೋಡ್ ಮಾಡಿದ್ದಾರೆ ಮತ್ತು ಪ್ರೀತಿಯಿಂದ ಟಿಪ್ಪಣಿಯನ್ನು ಬರೆದಿದ್ದಾರೆ. ಮನಸ್ಸು ಉಲ್ಲಾಸ ಮಾಡುವವರು, ಹಾಸ್ಯ ಮಾತಿನವರು, ತೊಂದರೆ ನೀಡುವವರು ಮತ್ತು ನನ್ನ ಮಕ್ಕಳ ನಿರಂತರ ಒಡನಾಡಿ, ನನ್ನ ಸ್ನೇಹಿತೆ ಮತ್ತು ಆತ್ಮ. ಈ ಸುಂದರ ಪ್ರಯಾಣದಲ್ಲಿ, ನನ್ನ ಹೆಂಡತಿಯಾಗಿ ಅಪಾರವಾಗಿ ಪ್ರೀತಿಸುತ್ತೇನೆ. ಎಂದು ಪಠಾಣ್ ತಮ್ಮ ಪತ್ನಿಯೊಂದಿಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Infinite roles mastered by one soul – mood booster, comedian, troublemaker, and the constant companion, friend, and mother of my children. In this beautiful journey, I cherish you as my wife. Happy 8th my love ❤️pic.twitter.com/qAUW8ndFAJ
— Irfan Pathan (@IrfanPathan)February 3, 2024

ವಿಶೇಷವೆಂದರೆ, ಪಠಾಣ್ ಈ ಹಿಂದೆ ತನ್ನ ಹೆಂಡತಿಯೊಂದಿಗಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವಾಗ ಅವಳ ಮುಖವನ್ನು ಮರೆಮಾಚಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದರು.
ಇರ್ಫಾನ್ 2016 ರಲ್ಲಿ ಸಫಾ ಅವರನ್ನು ವಿವಾಹವಾದರು ಮತ್ತು ದಂಪತಿಗೆ ಇಮ್ರಾನ್ ಮತ್ತು ಸುಲೈಮಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಪಾಕಿಸ್ತಾನ ವಿರುದ್ಧದ 2007 ರ ಟಿ 20 ವಿಶ್ವಕಪ್ ಫೈನಲ್​ನಲ್ಲಿ ವೀರೋಚಿತ ಪ್ರದರ್ಶನ ನೀಡಿದ ಆಲ್​ರೌಂಡರ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದ ನಂತರ, ಪಠಾಣ್ ಟಿವಿ ವಿಶ್ಲೇಷಕ ಕರ್ತವ್ಯಗಳನ್ನು ಮಾಡುತ್ತಿದ್ದಾರೆ.
ಸಾನಿಯಾ ಮಿರ್ಜಾ ಮಗನಿಗೆ ಶಾಲೆಯಲ್ಲಿ ಕಿರುಕುಳ; ಇನ್ಮುಂದೆ ಶಾಲೆಗೆ ಹೋಗುವುದಿಲ್ಲವೆಂದು ಹಠ ಹಿಡಿದ ಪುತ್ರ..ತಂದೆ 3ನೇ ಮದುವೆಯೇ ಕಾರಣ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − twelve =
Remember me
