ನವದೆಹಲಿ:ಅತ್ಯಾಧುನಿಕ ಮತ್ತು ನಿಖರ ದಿಕ್ಸೂಚಿಯಾದ ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ವ್ಯವಸ್ಥೆಗೆ (ಐಆರ್​ಎನ್​ಎಸ್​ಎಸ್) ಅಂತಾರಾಷ್ಟ್ರೀಯ ಮಾನ್ಯತೆ ದೊರಕಿದೆ. ಜಿಪಿಎಸ್​ಗೆ (ಗ್ಲೋಬಲ್ ಪಸಿಷನ್ ಸಿಸ್ಟಂ) ಪರ್ಯಾಯವಾಗಿ ಇದು ಕೆಲಸ ಮಾಡಲಿದೆ. ಪ್ರಾದೇಶಿಕವಾಗಿ ಇಂಥ ವ್ಯವಸ್ಥೆಯನ್ನು ಹೊಂದಿದ ಪ್ರಪಂಚದ ನಾಲ್ಕನೇ ರಾಷ್ಟ್ರ ಎಂಬ ಶ್ರೇಯಕ್ಕೆ ಭಾರತ ಭಾಜನವಾಗಿದೆ. ವಿಶ್ವಸಂಸ್ಥೆಯ ಭಾಗವಾಗಿರುವ ಅಂತಾರಾಷ್ಟ್ರೀಯ ಕಡಲ ಒಕ್ಕೂಟ (ಐಎಂಒ) ನವೆಂಬರ್ 11ರಂದು ಐಆರ್​ಎನ್​ಎಸ್​ಎಸ್​ಗೆ ವಿಶ್ವವ್ಯಾಪಿ ರೇಡಿಯೋ ನ್ಯಾವಿಗೇಷನ್ ವ್ಯವಸ್ಥೆಯ (ಡಬ್ಲ್ಯೂಡಬ್ಲ್ಯೂಆರ್​ಎನ್​ಐಎಸ್) ಮಾನ್ಯತೆ ನೀಡಿದೆ. ಎರಡು ವರ್ಷದ ಪ್ರಕ್ರಿಯೆ ಮೂಲಕ ಇದು ಪ್ರಾಪ್ತವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಉಪಗ್ರಹಗಳ ನೆರವಿನಿಂದ ಇದು ಸಾಕಾರವಾಗಿದೆ.
ಭಾರತದ ಕಡಲ ಸೀಮೆಯಲ್ಲಿ ಯಾವುದೇ ಸಮಯದಲ್ಲಿ ಲೆಕ್ಕಹಿಡಿದರೂ ಸರಾಸರಿ 2,500 ವ್ಯಾಪಾರಿ ಹಡಗುಗಳ ಸಂಚಾರ ಇರುತ್ತದೆ. ಇವೆಲ್ಲವೂ ಏಕಕಾಲದಲ್ಲಿ ಐಆರ್​ಎನ್​ಎಸ್​ಎಸ್ ಬಳಕೆ ಮಾಡಬಹುದು. ಜತೆಗೆ ಮೀನುಗಾರರ ಸಣ್ಣ ನೌಕೆಗಳು ಇದನ್ನು ಬಳಸಬಹುದಾಗಿದೆ. ಇದು ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಮಹತ್ವದ ಸಾಧನೆಯೂ ಆಗಿದೆ.– ಅಮಿತಾಭ್ ಕುಮಾರ್, ಶಿಪ್ಪಿಂಗ್ ಮಹಾನಿರ್ದೇಶಕ
ಏನಿದು ಐಆರ್​ಎನ್​ಎಸ್​ಎಸ್?ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ವ್ಯವಸ್ಥೆಯನ್ನು (ಐಆರ್​ಎನ್​ಎಸ್​ಎಸ್) ದೇಶೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿಲಾಗಿದೆ. ಇದು ಜಿಪಿಎಸ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದು, ವ್ಯಕ್ತಿ ಅಥವಾ ವಸ್ತುವಿನ ನಿಖರ ನೆಲೆಯನ್ನು ಹಾಗೂ ದಿಕ್ಸೂಚಿಯ ಮಾಹಿತಿಯನ್ನು ಅತ್ಯಾಧುನಿಕ ವಿಧಾನದಲ್ಲಿ ಸಂಹವನ ಮಾಡುತ್ತದೆ. ವಿಶೇಷವಾಗಿ ಭಾರತ ಉಪಖಂಡದಲ್ಲಿನ ಕಡಲಯಾನಕ್ಕೆ ಐಆರ್​ಎನ್​ಎಸ್​ಎಸ್ ಉಪಯೋಗಿಯಾಗಿದೆ. ಭಾರತದ ಸಾಗರದ ಗಡಿಯಿಂದ 1,500 ಕಿ.ಮೀ. ಆಚೆಗೂ ಇದರ ಸೇವೆ ಲಭ್ಯವಾಗಲಿದೆ. ಹಿಂದು ಮಹಾಸಾಗರವು ಪೂರ್ವ ಮತ್ತು ಪಶ್ಚಿಮದ ರಾಷ್ಟ್ರಗಳ ನೌಕಾಯಾನದ ಪ್ರಮುಖ ಮಾರ್ಗವಾಗಿರುವುದರಿಂದ ಐಆರ್​ಎನ್​ಎಸ್​ಎಸ್ ಉಪಯೋಗಕಾರಿಯಾಗಿದೆ. ಐಆರ್​ಎನ್​ಎಸ್​ಎಸ್ ಬಳಸಲು ಹಡಗಿನಲ್ಲಿ ಟ್ರಾನ್ಸ್​ಪಾಂಡರ್​ಗಳನ್ನು ಅಳವಡಿಸಿಕೊಂಡಿರಬೇಕು. ಇದರಿಂದ ಸ್ಯಾಟಲೈಟ್​ಗೆ ನೇರ ಸಂವಹನವಾಗಿ ನೌಕೆ ಎಲ್ಲಿದೆ, ಯಾವ ದಿಕ್ಕಿನತ್ತ ಮುನ್ನಡೆದರೆ ಸಮೀಪದ ದಾರಿಯಲ್ಲಿ ಗಮ್ಯ ತಲುಪಬಹುದು ಎಂಬ ಮಾಹಿತಿಗಳು ಲಭ್ಯವಾಗುತ್ತದೆ.
ಐಎಂಒ ಮಾನ್ಯತೆ ಎಂದರೇನು?ಅಂತಾರಾಷ್ಟ್ರೀಯ ಕಡಲ ಒಕ್ಕೂಟ (ಐಎಂಒ) ವಿಶ್ವಸಂಸ್ಥೆಯ ಶಿಪ್ಪಿಂಗ್ ಮತ್ತು ಕಡಲಯಾನದ ಸುರಕ್ಷತೆ ಹಾಗೂ ಭದ್ರತೆಯನ್ನು ಖಾತ್ರಿ ಪಡಿಸುವ ವಿಶೇಷ ಅಂಗಸಂಸ್ಥೆ. ನೌಕೆಗಳಿಂದ ಉಂಟಾಗುವ ಜಲ ಮತ್ತು ವಾಯು ಮಾಲಿನ್ಯವನ್ನೂ ತಡೆಯಲು ಶ್ರಮಿಸುತ್ತಿ್ತೆ. ಇಂತಹ ಐಎಂಒದ ಅಂಗವಾದ ಕಡಲ ಸುರಕ್ಷತಾ ಸಮಿತಿಯು (ಎಂಎಸ್​ಸಿ) ತನ್ನ ಉಪಸಮಿತಿ ಸಂವಹನ ಮತ್ತು ಶೋಧ ಹಾಗೂ ಪರಿಹಾರ (ಎನ್​ಸಿಎಸ್​ಆರ್) ಮೂಲಕ ಸತತ ಎರಡು ವರ್ಷಗಳ ಕೂಲಂಕಷ ಪರಿಶೀಲನೆ, ವಾಣಿಜ್ಯ ಹಡಗುಗಳಲ್ಲಿ ಪ್ರಾಯೋಗಿಕ ಬಳಕೆಯ ವರದಿ, ಇಸ್ರೊ ಸಲ್ಲಿಸಿದ ಸಮಗ್ರ ವರದಿಯನ್ನು ಪರಿಶೀಲಿಸಿ ಐಆರ್​ಎನ್​ಎಸ್​ಎಸ್​ಗೆ ವಿಶ್ವವ್ಯಾಪಿ ರೇಡಿಯೋ ನ್ಯಾವಿಗೇಷನ್ ವ್ಯವಸ್ಥೆಯನ್ನು (ಡಬ್ಲ್ಯೂಡಬ್ಲ್ಯೂಆರ್​ಎನ್​ಐಎಸ್) ಸಮರ್ಥವಾಗಿ ನಿರ್ವಹಿಸಬಲ್ಲದು ಎಂಬ ಶ್ರೇಯವನ್ನು ನವೆಂಬರ್ 4ರಿಂದ 11ರವರೆಗೆ ವರ್ಚುವಲ್ ವೇದಿಕೆಯಲ್ಲಿ ನಡೆದ 102ನೇ ಮಹಾಸಭೆಯಲ್ಲಿ ನೀಡಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ನಂತರ ಪ್ರಾದೇಶಿಕವಾಗಿ ಇಂಥ ಸಾಧನೆಯನ್ನು ಭಾರತ ಮಾಡಿದೆ.
ಕಳ್ಳಭಟ್ಟಿ ದುರಂತಕ್ಕೆ ಏಳು ಸಾವು, ಕನಿಷ್ಠ 15 ಮಂದಿ ಆಸ್ಪತ್ರೆಗೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:six + twelve =
Remember me
