ನವದೆಹಲಿ:ಕರೊನಾ ಲಸಿಕೆ ಸಂಶೋಧನೆಯಲ್ಲಿ ಇನ್ನಿಲ್ಲದ ಪೈಪೋಟಿ ನಡೆಯುತ್ತಿದ್ದು, ಅಂತಿಮ ಹಂತದ ಪರೀಕ್ಷೆ ನಡೆಸುತ್ತಿರುವ ಕಂಪನಿಗಳು ಮತ್ತಷ್ಟು ವೇಗದಲ್ಲಿ ಪ್ರಯೋಗಗಳನ್ನು ಪೂರ್ಣಗೊಳಿಸುವ ಒತ್ತಡಕ್ಕೆ ಒಳಗಾಗಿವೆ.
ಈ ನಡುವೆ, ಹಲವು ಕಂಪನಿಗಳು ಆರಂಭಿಕ ಹಂತದಲ್ಲಿ ಯಶಸ್ಸು ಗಳಿಸಿ ತುರ್ತು ಬಳಕೆಗೆ ಔಷಧ ಉತ್ಪಾದನೆ ಆರಂಭಿಸಿವೆ. ಜಗತ್ತಿನ ಹಲವು ಕಂಪನಿಗಳು ಇದಕ್ಕೆ ಹೊರತೇನಲ್ಲ.
ಇದನ್ನೂ ಓದಿ;ರಾಜ್ಯಕ್ಕೆಲ್ಲ ಹೋಮಿಯೋಪಥಿ ಔಷಧ ಹಂಚಿದ ಗುಜರಾತ್​; ಆಯುಷ್​ ಚಿಕಿತ್ಸೆ ಪಡೆದವರಲ್ಲಿ ಸೋಂಕು ದೂರ…!
ಅದರಂತೆ, ಆಕ್ಸ್​ಫರ್ಡ್​ ವಿವಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯನ್ನು ಭಾರತದಲ್ಲಿ ತಯಾರಿಸಲು ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ಇದಕ್ಕೆ ಕೋವಿಶೀಲ್ಡ್​ ಎಂದು ಹೆಸರಿಟ್ಟಿದೆ. ಸದ್ಯ ಈ ಲಸಿಕೆಯ ಮೂರನೇ ಹಂತದ ಹಾಗೂ ಅಂತಿಮ ಕ್ಲಿನಿಕಲ್​ ಟ್ರಯಲ್​ ಜಗತ್ತಿನ ವಿವಿಧೆಢೆ ನಡೆಯುತ್ತಿದೆ. ಅಂತೆಯೇ, ಇದೇ ಲಸಿಕೆಯ 2ನೇ ಹಾಗೂ 3ನೇ ಹಂತದ ಪರೀಕ್ಷೆ ಭಾರತದಲ್ಲೂ ನಡೆಯಬೇಕಿದೆ.
ಆದರೆ, ಈ ಲಸಿಕೆ 73 ದಿನಗಳಲ್ಲಿ ವಾಣಿಜ್ಯ ಬಳಕೆಗಾಗಿ ಮಾರುಕಟ್ಟೆಗೆ ಬಲಿದೆ ಎಂದು ಹೇಳಲಾಗುತ್ತಿದೆ. ಈ ಲಸಿಕೆಯ ಉತ್ಪಾದನೆ ಕಾರ್ಯ ಆರಂಭವಾಗಿರುವುದರಿಂದ ಇಂಥದ್ದೊಂದು ಸುದ್ದಿ ಹೆಚ್ಚು ಚರ್ಚೆಯಾಗುತ್ತಿದೆ. ಆದರೆ, ವಾಸ್ತವವೇ ಬೇರೆ.
ಇದನ್ನೂ ಓದಿ;ಸುಶಾಂತ್​ ಸಿಂಗ್​ ರಜಪೂತ್​ ಮಾದಕ ದ್ರವ್ಯ ವ್ಯಸನಿಯೇ? ತನಿಖೆಯಲ್ಲಿ ಹೊರಬಿತ್ತು ಭಯಾನಕ ಸತ್ಯ…!
ಸದ್ಯ ಸರ್ಕಾರ ಉತ್ಪಾದನೆಗೆ ಅನುಮತಿ ನೀಡಿರುವುದು ಕೇವಲ ದಾಸ್ತಾನು ಮಾಡಿಕೊಳ್ಳಲು ಮಾತ್ರ. ಎಲ್ಲ ಹಂತದ ಪರೀಕ್ಷೆಗಳು ಮುಗಿದು ಫಲಿತಾಂಶ ಬಂದ ಬಳಿಕವಷ್ಟೇ ಇದು ಮಾರುಕಟ್ಟೆಯಲ್ಲಿ ಅಥವಾ ವಾಣಿಜ್ಯ ಬಳಕೆಗೆ ಮುಕ್ತವಾಗಲಿದೆ ಎಂದು ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಮುಖ್ಯಸ್ಥ ಆದಾರ್​ ಪೂನಾವಾಲಾ ಸ್ಪಷ್ಟಪಡಿಸಿದ್ದಾರೆ.
ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ; ಭಾರತೀಯ ರೂಪಾಯಿಗೆಷ್ಟು ಮೌಲ್ಯ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − two =
Remember me
