ನವದೆಹಲಿ:ಸುಪ್ರೀಂ ಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ಬಿಜೆಪಿಯಿಂದ ಅಸ್ಸಾಂನ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರಾ..? ಇಂಥದ್ದೊಂದು ಬಹಳ ದಿನಗಳಿಂದ ಚರ್ಚೆಯಲ್ಲಿದೆ.
ಅಸ್ಸಾಂನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಬೇಕಿದೆ. ಇದ್ಕಕಾಗಿ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಗರಿಗೆದರಿವೆ. ವಿವಿಧ ಪಕ್ಷಗಳ ಮೈತ್ರಿಕೂಟಗಳು ರಚನೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇಂಥದ್ದೊಂದು ಸುದ್ದಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ.
ಇದನ್ನೂ ಓದಿ;ಬಾಬ್ರಿ ಮಸೀದಿ ಧ್ವಂಸದ ತೀರ್ಪು ಸೆ.30 ರೊಳಗೆ ನೀಡಿ; ಸುಪ್ರೀಂ ಸೂಚನೆ; ಏನಾಗುತ್ತೆ ಅಡ್ವಾಣಿ, ಜೋಶಿ, ಕಲ್ಯಾಣ್​ ಸಿಂಗ್​ ಭವಿಷ್ಯ?
ರಂಜನ್​ ಗೊಗೊಯ್​ ಬಿಜೆಪಿಯಿಂದ ಸಿಎಂ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗೆ ಕಾರಣವೂ ಇಲ್ಲದಿಲ್ಲ. ಸದ್ಯ ರಂಜನ್​ ಗೊಗೊಯ್​ ರಾಜ್ಯಸಭೆಯ ನಾಮ ನಿರ್ದೇಶಿತ ಸದಸ್ಯರಾಗಿದ್ದಾರೆ. ಈ ಆಹ್ವಾನವನ್ನು ಅವರು ಒಪ್ಪಿಕೊಂಡಿದ್ದೇ ರಾಜಕೀಯ ಪ್ರವೇಶಕ್ಕೆ ಹೆಜ್ಜೆಯಾಗಿದೆ ಎಂದೇ ವಿಶ್ಲೇಷಿಸಲಾಗಿದೆ.
ಆದರೆ, ಈ ಎಲ್ಲ ಸುದ್ದಿಯನ್ನು ಸ್ವತಃ ನ್ಯಾಯಮೂರ್ತಿ ರಂಜಯ್​ ಗೊಗೊಯ್​ ತಳ್ಳಿ ಹಾಕಿದ್ದಾರೆ. ನಾನು ರಾಜಕಾರಣಿಯಲ್ಲ, ರಾಜಕಾರಣಿಯಾಗುವ ಹಂಬಲವೂ ತನಗಿಲ್ಲ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆಗಳ ಬಗ್ಗೆಯೂ ತನಗೆ ಯಾರೂ ಕೂಡ ಮಾಹಿತಿಯನ್ನು ನೀಡಿಲ್ಲ ಎಂದಿರುವ ಗೊಗೊಯ್​, ರಾಜ್ಯಸಭೆ ಸದಸ್ಯತ್ವವನ್ನು ಒಪ್ಪಿಕೊಂಡ ಮಾತ್ರಕ್ಕೆ ರಾಜಕೀಯ ಪ್ರವೇಶಿಸುತ್ತೇನೆ ಎಂದೇನಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜ್ಯಸಭೆಗೆ ನಾಮ ನಿರ್ದೇಶನವಾಗುವುದಕ್ಕೂ, ರಾಜಕೀಯ ಪಕ್ಷವೊಂದರಿಂದ ಅಭ್ಯರ್ಥಿಯಾಗುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ ಎಂಬುದನ್ನು ಅರಿಯದಿರುವುದೇ ದುರಂತ ಅವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ;ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ; ಭಾರತೀಯ ರೂಪಾಯಿಗೆಷ್ಟು ಮೌಲ್ಯ ?
ಬಿಜೆಪಿಯಿಂದ ಸಿಎಂ ಅಭ್ಯರ್ಥಿಯಾಗುವವರ ಪಟ್ಟಿಯಲ್ಲಿ ರಂಜನ್​ ಗೊಗೊಯ್​ ಹೆಸರು ಇದೆ ಎಂಬುದು ಹಲವು ಮೂಲಗಳಿಂದ ತಮಗೆ ಗೊತ್ತಾಗಿದೆ ಎಂದು ಅಸ್ಸಾಂ ಸಿಎಂ ತರುಣ್​ ಗೊಗೊಯ್​ ಹೇಳಿದ್ದರು. ರಾಮ ಮಂದಿರ ಪ್ರಕರಣದಲ್ಲಿ ತೀರ್ಪು ನೀಡಿದ್ದಕ್ಕೆ ಸಂತೋಷವಾಗಿ ಬಿಜೆಪಿ ಅವರಿಗೆ ರಾಜ್ಯಸಭಾ ಸ್ಥಾನ ನೀಡಿದೆ. ಅದನ್ನವರು ಒಪ್ಪಿಕೊಂಡಿದ್ದು, ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ಇದ್ದಂತಿದೆ ಎಂಬುದನ್ನು ತೋರಿಸುತ್ತದೆ ಎಂದು ತರುಣ್​ ಗೊಗೊಯ್​ ಪ್ರತಿಕ್ರಿಯಿಸಿದ್ದರು.
ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್​ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
