ನವದೆಹಲಿ:ಶಿಕ್ಷಣ ಸಂಸ್ಥೆಗಳು, ಚಿತ್ರಮಂದಿರ ಹಾಗೂ ಸಾರ್ವಜನಿಕ ಸಭೆ ಸಮಾರಂಭ ಹೊರತುಪಡಿಸಿದರೆ ಇನ್ನುಳಿದ ಚಟುವಟಿಕೆಗಳ ಮೇಲಿದ್ದ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ.
ಆದರೆ, ಕಂಟೇನ್​ಮೆಂಟ್​ ಝೋನ್​ಗಳಲ್ಲಿ ವಿಧಿಸಬಹುದಾದ ನಿರ್ಬಂಧಗಳನ್ನು ರಾಜ್ಯ ಸರ್ಕಾರಗಳೇ ನಿರ್ಧರಿಸಲಿವೆ. ಕರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಮತ್ತೆ ಲಾಕ್​ಡೌನ್​ ಜಾರಿ ಮಾಡಲಾಗುತ್ತಿದೆ.
ಇದನ್ನೂ ಓದಿ;ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟ ವ್ಯಕ್ತಿಯೀಗ ಭಾರತದಲ್ಲೇ ಇಂಗ್ಲೆಂಡ್​ ಹೈಕಮೀಷನರ್​
ಪಟನಾದಲ್ಲಿ ಈಗಾಗಲೇ ಲಾಕ್​ಡೌನ್​ ವಿಧಿಸಲಾಗಿದ್ದು, ಇದೀಗ ಪಶ್ಚಿಮ ಬಂಗಾಳ ಸರ್ಕಾರ ಕೂಡ ಕೋಲ್ಕತ್ತ, ಹೌರಾ, ಉತ್ತರ 24 ಪರಗಣ ಜಿಲ್ಲೆಯಲ್ಲಿ ಗುರುವಾರದಿಂದಲೇ (ಜು.9) ಸಂಜೆ 5 ಗಂಟೆಯಿಂದ ಲಾಕ್​​​ಡೌನ್​ ಜಾರಿಗೊಳಿಸಲಿದೆ. ಇದು ಏಳು ದಿನಗಳ ಅವಧಿಗೆ ಸೀಮಿತವಾಗಿದ್ದ, ಅಗತ್ಯ ಬಿದ್ದರಷ್ಟೇ ವಿಸ್ತರಿಸಲಾಗುವುದು ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈಗಾಗಲೇ ಲಾಕ್​ಡೌನ್​ ವಿಧಿಸಲಾಗಿರುವ ಜಿಲ್ಲೆಗಳಲ್ಲಿ ಎಂದಿನಂತೆ ಆದೇಶ ಮುಂದುವರಿಯಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಕಳೆದ 24 ತಾಸುಗಳಲ್ಲಿ 850 ಹೊಸ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ;ನದಿಯ ಮೇಲೆ ಬೋಟ್​ಗಳಲ್ಲಿ ಕುಳಿತು ಸಿನಿಮಾ ನೋಡಿ; ಉಚಿತ ಪ್ರವೇಶ…!
ಇದಲ್ಲದೆ, ಅಸ್ಸಾಂ ಗುವಾಹಟಿ, ಚೆನ್ನೈ, ಜಾರ್ಖಂಡ್​, ಹರಿಯಾಣ, ಮಹಾರಾಷ್ಟ್ರದ ಹಲವೆಡೆಗಳಲ್ಲಿ ಜು.13ರವರೆಗೆ ಜಾರಿಯಲ್ಲಿದೆ. ಹೀಗಾಗಿ ಕರೊನಾ ಸೋಂಕು ಹೆಚ್ಚಾಗಿತ್ತಿರುವ ಕಾರಣ ಇನ್ನಷ್ಟು ರಾಜ್ಯಗಳು ಲಾಕ್​ಡೌನ್​ಗೆ ಮೊರೆ ಹೋಗುತ್ತಿವೆ.
ಕರೊನಾ ಲಸಿಕೆ ಪಡೆದ ಜಗತ್ತಿನ ಮೊತ್ತ ಮೊದಲ ವ್ಯಕ್ತಿ ಈತ; ಮೈನವಿರೇಳಿಸುವ ಕ್ಲಿನಿಕಲ್​ ಟ್ರಯಲ್​ ಅನುಭವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 18 =
Remember me
