ಕೊಚ್ಚಿ:ಯಾರಿಗೂ ಶೇರ್​ ಮಾಡದೆ ಮತ್ತು ಇತರರಿಗೆ ತೋರಿಸದೆ ಖಾಸಗಿಯಾಗಿ ಪೋರ್ನ್​ ವಿಡಿಯೋಗಳನ್ನು ನೋಡುವುದು ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್​ 292ರ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗದು ಎಂದು ಕೇರಳ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.
ರಸ್ತೆ ಬದಿಯಲ್ಲಿ ತನ್ನ ಮೊಬೈಲ್​​ನಲ್ಲಿ ಪೋರ್ನ್​ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಬಂಧಿತನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್​ ಕೇಸ್​ ಅನ್ನು ರದ್ದು ಮಾಡಿ, ಖಾಸಗಿಯಾಗಿ ಪೋರ್ನ್​ ವಿಡಿಯೋ ನೋಡುವುದು ಅಪರಾಧವಲ್ಲ ಎಂಬ ತೀರ್ಪನ್ನು ಪ್ರಕಟಿಸಿದೆ.
ರಸ್ತೆ ಬದಿಯಲ್ಲಿ ನಿಂತು ತನ್ನ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್​ 292ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಕೇಸ್​ ಅನ್ನು ವಜಾಗೊಳಿಸಿದ ನ್ಯಾಯಮೂರ್ತಿ ಪಿ.ವಿ. ಕುನ್ಹಿಕೃಷ್ಣನ್, ಈ ಸಂದರ್ಭದಲ್ಲಿ ನಿರ್ಧರಿಸಬೇಕಾದ ಪ್ರಶ್ನೆಯೆಂದರೆ ಒಬ್ಬ ವ್ಯಕ್ತಿಯು ತನ್ನ ಖಾಸಗಿ ಸಮಯದಲ್ಲಿ ಪೋರ್ನ್ ವಿಡಿಯೋವನ್ನು ಇತರರಿಗೆ ಪ್ರದರ್ಶಿಸದೆ ನೋಡುವುದು ಅಪರಾಧವಾಗುತ್ತದೆಯೇ? ವ್ಯಕ್ತಿಯ ಇಂತಹ ನಡೆಯನ್ನು ಅಪರಾಧ ಎಂದು ಘೋಷಿಸಲಾಗದು, ಇದು ನಾಗರಿಕನೊಬ್ಬನ ಖಾಸಗಿ ಆಯ್ಕೆಯಾಗಿದೆ ಮತ್ತು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ವ್ಯಕ್ತಿಯ ಗೌಪ್ಯತೆಯ ಧಕ್ಕೆಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಬಿಜೆಪಿ ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪ; ಚೈತ್ರಾ ಕುಂದಾಪುರ ಸೇರಿ ನಾಲ್ವರು ಪೊಲೀಸರ ವಶ
ಅಂದಹಾಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 292, ಅಶ್ಲೀಲ ಪುಸ್ತಕಗಳು, ವಿಡಿಯೋಗಳು ಮತ್ತು ವಸ್ತುಗಳ ಮಾರಾಟ, ವಿತರಣೆ ಮತ್ತು ಪ್ರದರ್ಶನಕ್ಕೆ ದಂಡ ವಿಧಿಸುತ್ತದೆ. ತೀರ್ಪನ್ನು ಪ್ರಕಟಿಸುವ ಸಂದರ್ಭದಲ್ಲಿ ಯಾರಾದರೂ ಅಶ್ಲೀಲ ವಸ್ತುಗಳನ್ನು ಪ್ರಸಾರ ಮಾಡಲು, ವಿತರಿಸಲು ಅಥವಾ ಸಾರ್ವಜನಿಕವಾಗಿ ಪ್ರದರ್ಶಿಸಲು ಪ್ರಯತ್ನಿಸಿದಾಗ ಮಾತ್ರ ಸೆಕ್ಷನ್ 292 ಅನ್ವಯಿಸುತ್ತದೆ ಎಂದು ನ್ಯಾಯಾಲಯವು ಸ್ಪಷ್ಟವಾಗಿ ಸೂಚಿಸಿತು.
ಇದಲ್ಲದೆ ಕೇರಳ ಹೈಕೋರ್ಟ್ ಅಶ್ಲೀಲತೆಯ ಐತಿಹಾಸಿಕ ಅಸ್ತಿತ್ವವನ್ನು ಎತ್ತಿ ತೋರಿಸಿತು. ಇದು ಶತಮಾನಗಳಿಂದ ಮಾನವ ಸಂಸ್ಕೃತಿಯ ಭಾಗವಾಗಿದೆ ಎಂದು ಹೇಳಿತು. ಇದೇ ಸಂದರ್ಭದಲ್ಲಿ ಈ ತೀರ್ಪು ಅಪ್ರಾಪ್ತ ಮಕ್ಕಳಿಗೆ ಸರಿಯಾದ ಮೇಲ್ವಿಚಾರಣೆಯಿಲ್ಲದೆ ಮೊಬೈಲ್ ಫೋನ್‌ಗಳನ್ನು ನೀಡುವುದರಿಂದ ಉಂಟಾಗುವ ಸಂಭಾವ್ಯ ಅಪಾಯಗಳ ಬಗ್ಗೆ ಪೋಷಕರಿಗೆ ಎಚ್ಚರಿಕೆಯನ್ನೂ ನೀಡಿದೆ.
ಇಂಟರ್ನೆಟ್ ಸಂಪರ್ಕವಿರುವ ಮೊಬೈಲ್ ಫೋನ್‌ಗಳ ಮೂಲಕ ಅಶ್ಲೀಲ ವಿಡಿಯೋಗಳು ಸೇರಿದಂತೆ ಸ್ಪಷ್ಟ ವಿಷಯವನ್ನು ಸುಲಭವಾಗಿ ಪ್ರವೇಶಿಸಬಹುದು ಎಂದು ನ್ಯಾಯಾಲಯವು ಒತ್ತಿಹೇಳಿದೆ.(ಏಜೆನ್ಸೀಸ್​)
ತಂದೆ ಜತೆ ಲಿಪ್‌ಲಾಕ್‌ ಮಾಡಿದ್ದ ಬಾಲಿವುಡ್ ನಟಿ!; ಹೇಳಿದ್ದೇನು ಗೊತ್ತಾ?

AC Side Effects: ಎಸಿಯಲ್ಲಿ ಅತಿ ಹೆಚ್ಚು ಸಮಯ ಕಳೆಯುತ್ತಿದ್ದೀರಾ? ಹಾಗದರೆ ನೀವಿದನ್ನು ಓದಲೇಬೇಕು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 2 =
Remember me
