ನವದೆಹಲಿ:ಪ್ರಾಣಿ ಸಾಮ್ರಾಜ್ಯವನ್ನೂ ಕಾನೂನುಬದ್ಧಗೊಳಿಸಿ ಅದಕ್ಕೂ ಸಮಾನತೆ ನೀಡಬೇಕು ಎಂದು ಒಬ್ಬ ದೂರುದಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ! ಈ ದೂರು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ, ನಿನ್ನ ನಾಯಿ ನಿಂಗೆ ಈಕ್ವಲಾ? – ಹೀಗೊಂದು ಪ್ರಶ್ನೆಯನ್ನು ದೂರುದಾರನಿಗೆ ಬುಧವಾರ ಕೇಳಿದೆ.
ಮುಖ್ಯನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ ಈ ವಿಚಿತ್ರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಪ್ರಾಣಿಗಳಿಗೆ ಕಾನೂನುಬದ್ಧ ರಕ್ಷಣೆ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದ ಪಿಐಎಲ್​ ವಿಚಾರಣೆ ನಡೆಸಿದ ನ್ಯಾಯಪೀಠ, ಇದ್ಯಾವ ನಮೂನೆಯ ಪ್ರಾರ್ಥನೆ ಇದು ಎಂದು ಅಚ್ಚರಿವ್ಯಕ್ತಪಡಿಸಿತು. ಅಲ್ಲದೆ, ನೀವು (ದೂರುದಾರರು) ಸಂಪೂರ್ಣ ಪ್ರಾಣಿ ಸಾಮ್ರಾಜ್ಯವನ್ನು ಕಾನೂನುಬದ್ಧಗೊಳಿಸಬೇಕು ಎಂದು ಬಯಸುತ್ತಿದ್ದೀರಿ. ಪ್ರಾಣಿಗಳು ಕೇಸ್​ ದಾಖಲಿಸಲು, ಕೇಸ್ ಹಾಕಿಸಿಕೊಳ್ಳಲು ಸಮರ್ಥರೆಂದು ನಾವು ಘೋಷಿಸಬೇಕು ಎಂದು ನೀವು ಹೇಳ್ತಾ ಇದ್ದೀರಾ ? ಎಂದೂ ಪ್ರಶ್ನಿಸಿತು.
ಇದನ್ನೂ ಓದಿ:ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ವಿರುದ್ಧ ಜಮೀರ್​ ಅಹ್ಮದ್​ ದೂರು
ಪ್ರತಿಯೊಂದು ಪ್ರಾಣಿಗೂ ಕಾನೂನುಬದ್ಧ ವ್ಯಕ್ತಿತ್ವ ಇದೆ ಎಂದು ಅಂಗೀಕರಿಸಬೇಕು ಎಂದು ನೀವು ಬಯಸುತ್ತಿದ್ದೀರಾ ಎಂದೂ ನ್ಯಾಯಪೀಠ ದೂರುದಾರರನ್ನು ಪ್ರಶ್ನಿಸಿತು. ಆದರೆ, ಅವುಗಳು ನಿಮಗೆ ಸಮ ಅಲ್ಲವಲ್ಲ. ನಿಮ್ಮ ನಾಯಿ ನಿಮ್ಗೆ ಈಕ್ವಲಾ ಎಂದೂ ಪ್ರಶ್ನಿಸಿತು. ಪ್ರಾಣಿಗಳ ರಕ್ಷಣೆಗೆ ಈಗಾಗಲೇ ಹಲವು ಕಾನೂನು, ನಿಯಮಗಳಿವೆ. ಅವುಗಳ ಅನುಷ್ಠಾನವಾದರೆ ಸಾಕು ಎಂದೂ ನ್ಯಾಯಪೀಠ ಇದೇವೇಳೆ ಅಭಿಪ್ರಾಯಪಟ್ಟಿತು. (ಏಜೆನ್ಸೀಸ್)
ವಾರಸುದಾರರಿಲ್ಲದ ಸೂಟ್​ಕೇಸ್ ನಿಂದ​ ಪೂಂಛ್​ನಲ್ಲಿ ಬಾಂಬ್ ಭೀತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
