ಅಹ್ಮದಾಬಾದ್:2004 ರಲ್ಲಿ ಗುಜರಾತ್​ನಲ್ಲಿ ನಡೆದಿದ್ದ ಇಸ್ರತ್ ಜಹಾನ್ ನಕಲಿ ಎನ್​ಕೌಂಟರ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಯ ಮೂವರು ಆರೋಪಿಗಳನ್ನೂ ಅಹ್ಮದಾಬಾದ್ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಖುಲಾಸೆಗೊಳಿಸಿದೆ. ಈ ಮೂಲಕ ರಾಷ್ಟ್ರದ್ಯಂತ ತೀವ್ರ ಚರ್ಚೆಗೆ ಈಡಾಗಿದ್ದ ಈ ಪ್ರಕರಣ ತಾರ್ಕಿಕ ಅಂತ್ಯ ಕಂಡಂತಾಗಿದೆ.
ಐಪಿಎಸ್ ಅಧಿಕಾರಿ ಜಿಎಲ್ ಸಿಂಘಾಲ್, ನಿವೃತ್ತ ಪೊಲೀಸ್ ಅಧಿಕಾರಿಗಳಾದ ತರುಣ್ ಬಾರೋಟ್ ಹಾಗೂ ಅಂಜು ಚೌದರಿ ಕೇಸ್​ನಿಂದ ಖುಲಾಸೆಗೊಂಡ ಆರೋಪಿಗಳಾಗಿದ್ದಾರೆ. ಈ ಕುರಿತು ಸಿಬಿಐ ಮೇಲ್ಮನವಿ ಸಲ್ಲಿಸದಿರಲು ನಿರ್ಧರಿಸಿದೆ.
ವಿಚಾರಣೆ ನಡೆಸಿ ಆದೇಶ ನೀಡಿರುವ ಅಹ್ಮದಾಬಾದ್ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ ಆರ್ ರಾವಲ್ ಅವರು, ಎನ್​ಕೌಂಟರ್​ನಲ್ಲಿ ಮೃತಪಟ್ಟ ನಾಲ್ವರು ಭಯೋತ್ಪಾದಕರಲ್ಲ ಎಂಬುದನ್ನು ಮೇಲ್ನೋಟಕ್ಕೆ ತೋರಿಸಲು ಯಾವುದೇ ದಾಖಲೆಗಳಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ:2004ರಲ್ಲಿ ದುಡ್ಡಿಲ್ಲದೆ ಖಾಲಿ ಡಬ್ಬದಂತಿದ್ದ ಕುಮಾರಸ್ವಾಮಿ ಇವತ್ತು ತುಂಬಿದ ಕೊಡ! ಅಂದಿನ ಹಣದ ರಹಸ್ಯ ಕೆದಕಿದ ಜಮೀರ್
ತನಿಖೆ ನಡೆಸಿದ್ದ ಸಿಬಿಐ ನ್ಯಾಯಾಲಯ 2013 ರಲ್ಲಿ ಇದೊಂದು ನಕಲಿ ಎನ್​ಕೌಂಟರ್ ಎಂದು ಏಳು ಪೊಲೀಸ್ ಅಧಿಕಾರಿಗಳ ಮೇಲೆ ಕೋರ್ಟ್​​ಗೆ ಚಾರ್ಜ್​ಶೀಟ್​ ಸಲ್ಲಿಸಿತ್ತು. ಆ ಪ್ರಕಾರ ಪಿಪಿ ಪಾಂಡೆ, ವಂಜಾರಾ, ಎನ್​ಕೆ ಅಮಿನ್ ಜೆಜಿ ಪರಮರ್ ಸೇರಿದಂತೆ ಮೇಲೆ ಉಲ್ಲೇಖಿಸಲಾದ ಮೂವರು ಅಧಿಕಾರಿಗಳು ಆರೋಪಿಗಳಾಗಿದ್ದರು. ಪಿಪಿ ಪಾಂಡೆ, ವಂಜಾರಾ, ಎನ್​ಕೆ ಅಮಿನ್ ಜೆಜಿ ಪರಮರ್ 2019 ರಲ್ಲಿ ಆರೋಪ ಮುಕ್ತರಾಗಿದ್ದರು.
ಲಷ್ಕರ್ ಏ ತೋಯ್ಬಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದೆ ಅವರ ಆದೇಶಾನುಸಾರ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಇಸ್ರತ್ ಜಹಾನ್, ಪ್ರಾಣೇಶ್ ಪಿಳ್ಳೈ, ಅಮ್ಜದ್ ಅಲಿ ರಾಣಾ ಹಾಗೂ ಜಿಶಾನ್ ಜೊಹರ್ ಎನ್ನುವರನ್ನು ಅಹ್ಮದಾಬಾದ್ ಪೊಲೀಸರು ಎನ್​ಕೌಂಟರ್ ಮಾಡಿ ಕೊಂದಿದ್ದರು.
ಗಂಡನ ಎದುರೇ ಹೆಂಡತಿಯ ಗ್ಯಾಂಗ್​ ರೇಪ್​! ವಿಡಿಯೋ ಚಿತ್ರೀಕರಿಸಿಕೊಂಡು ಎಸ್ಕೇಪ್​ ಆದ ಕಿರಾತಕರು​!

ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಇಟ್ಟವ ಅಂತೂ ಸಿಕ್ಕಿಬಿದ್ದ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + 15 =
Remember me
