ಪೋಖ್ರನ್​ :ಭಾರತದ ರಕ್ಷಣಾ ಸಂಸ್ಥೆಗಳ ಮೇಲೆ ಗೂಢಚಾರಿಕೆ ನಡೆಸುತ್ತಾ ಪಾಕಿಸ್ತಾನಕ್ಕೆ ಮತ್ತು ಐಎಸ್​ಐಗೆ ಮಹತ್ವದ ಮಾಹಿತಿ ಮತ್ತು ದಾಖಲಾತಿಗಳನ್ನು ಒದಗಿಸುತ್ತಿದ್ದ ಐಎಸ್​ಐ ಏಜೆಂಟ್​ ಒಬ್ಬನನ್ನು ರಾಜಸ್ತಾನದ ಪೋಖ್ರನ್​ನಲ್ಲಿ ಬಂಧಿಸಲಾಗಿದೆ. ಹಬೀಬುರ್ ರೆಹಮಾನ್ ಎಂಬ ಈ ಏಜೆಂಟು ನೀಡಿದ ಮಾಹಿತಿಯ ಮೇರೆಗೆ ಸೇನಾ ಸಿಬ್ಬಂದಿಯೊಬ್ಬರು ಅಪರಾಧದಲ್ಲಿ ಭಾಗಿಯಾಗಿರುವ ಅನುಮಾನ ಎದ್ದಿದೆ ಎನ್ನಲಾಗಿದೆ.
ಪಾಕಿಸ್ತಾನದ ಐಎಸ್​ಐಗಾಗಿ ಕೆಲಸ ಮಾಡುತ್ತಿದ್ದು, ಆ ದೇಶಕ್ಕೂ ಭೇಟಿ ನೀಡಿದ್ದಾನೆ ಎನ್ನಲಾದ ರೆಹಮಾನ್​ನನ್ನು, ದೆಹಲಿ ಅಪರಾಧ ವಿಭಾಗದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆತನ ಮೇಲೆ ಅಫಿಶಿಯಲ್ ಸೀಕ್ರೆಟ್ಸ್ ಆ್ಯಕ್ಟ್​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಅಕ್ರಮ ವಿದೇಶಿ ಪ್ರಜೆಗಳಿಗೆ ಸಿಸಿಬಿ ಶಾಕ್! ನಗರದಲ್ಲಿ ಭಾರೀ ರೇಯ್ಡ್​!
ರೆಹಮಾನ್​ ಬಳಿಯಿಂದ ಸೇನಾ ಪ್ರದೇಶಗಳ ವಿಶ್ವಸನೀಯ ದಾಖಲಾತಿಗಳು ಮತ್ತು ನಕ್ಷೆಗಳು ಲಭ್ಯವಾಗಿವೆ. ಇವುಗಳನ್ನು ಆಗ್ರಾದಲ್ಲಿ ಪೋಸ್ಟಿಂಗ್ ಇರುವ ಸೇನಾ ಸಿಬ್ಬಂದಿ ಪರಂಜೀತ್​ ಕೌರ್ ಎಂಬುವರು ತನಗೆ ನೀಡಿದರು ಎಂದು ಆತ ಹೇಳಿದ್ದಾನೆ ಎನ್ನಲಾಗಿದೆ. ಪ್ರಸ್ತುತ, ಸೇನಾ ಅಧಿಕಾರಿಗಳು ಕೌರ್​ ಅವರನ್ನು ವಿಚಾರಣೆ ಮಾಡುತ್ತಿದ್ದು, ಸದ್ಯದಲ್ಲೇ ಮುಂದಿನ ತನಿಖೆಗಾಗಿ ದೆಹಲಿ ಪೊಲೀಸರಿಗೆ ಒಪ್ಪಿಸಲಾಗುವುದು ಎನ್ನಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಪೋಖ್ರನ್​ ಆರ್ಮಿ ಬೇಸ್​ ಕ್ಯಾಂಪಿಗೆ ತರಕಾರಿಗಳನ್ನು ಸರಬರಾಜು ಮಾಡುತ್ತಿದ್ದ ರೆಹಮಾನ್​, ಈ ಸೇನಾ ದಾಖಲಾತಿಗಳನ್ನು ಕಮಲ್​ ಎಂಬುವವನಿಗೆ ಕೊಡುವವನಿದ್ದ. ಈ ನಿಟ್ಟಿನಲ್ಲಿ ದೊಡ್ಡ ರಾಕೆಟ್​ ಇರುವ ಶಂಕೆಯಿದ್ದು, ಇತರ ಕೆಲವು ಜನರನ್ನೂ ಪೊಲೀಸರು ಬಂಧಿಸಿದ್ದಾರೆ.(ಏಜೆನ್ಸೀಸ್)
ಡಿಕೆಶಿ ಮುಂದೆಯೇ ‘ಮುಂದಿನ ಸಿಎಂ ಸಿದ್ದರಾಮಯ್ಯ’ ಎಂಬ ಕೂಗು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + fourteen =
Remember me
