ನವದೆಹಲಿ:ದ್ವಿಚಕ್ರವಾಹನ ಸವಾರರು ಹೆಲ್ಮೆಟ್​​ ಧರಿಸದಿದ್ದರೆ ದಂಡ ಪಾವತಿಸಬೇಕಿತ್ತು. ಈಗ ಇನ್ನೊಂದು ಹೊಸ ನಿಯಮ ಜಾರಿಗೆ ಬಂದಿದ್ದು, ಸರ್ಕಾರ ಹೇಳಿರುವ ಮಾರ್ಕ್​​ ಇರುವ ಹೆಲ್ಮೆಟ್ಟನ್ನೇ ಧರಿಸಬೇಕೆಂಬ ನಿಯಮವನ್ನು ಜಾರಿಗೆ ತಂದಿದೆ.
ಈವೆರಗೂ ಹೆಲ್ಮೆಟ್​ ಧರಿಸದವರಿಗೆ ದಂಡ ವಿಧಿಸಲಾಗುತ್ತಿತ್ತು. ಈಗ ಹೆಲ್ಮೆಟ್​ ಧರಿಸಿದ್ದರೂ ದಂಡ ಪಾವತಿಸಬೇಕಾಗುತ್ತದೆ. ಅರೆ… ಏನಿದು ಹೆಲ್ಮೆಟ್​ ಧರಿಸದರೂ ಯಾಕೆ ದಂಡ ಪಾವತಿಸಬೇಕು ಎನ್ನುವವರಿಗೆ ಇಲ್ಲಿದೆ ಉತ್ತರ.
ಹೌದು…. ಮೋಟಾರ್​ ವೆಹಿಕಲ್​ ಕಾಯಿದೆ ಅನ್ವಯ ದ್ವಿ-ಚಕ್ರ ವಾಹನ ಚಲಾಯಿಸುವವರು ಕಡ್ಡಾಯವಾಗಿ ಹೆಲ್ಮೆಟ್​​ ಧರಿಸುವುದು ಹಿಂದಿನ ನಿಯಮವಾಗಿತ್ತು. ಈಗ ಹೆಲ್ಮೆಟ್​​ ಜತೆಗೆ ಐಎಸ್​​ಐ ಮಾರ್ಕ್​​ ಹೊಂದಿರುವುದು ಕೂಡ ಕಡ್ಡಾಯವಾಗಿದೆ.
ಒಂದು ವೇಳೆ ಐಎಸ್​​ಐ ಮಾರ್ಕ್​ ಇಲ್ಲದಿದ್ದರೆ 1000 ರೂ. ದಂಡ ಪಾವತಿಸಬೇಕಾಗುತ್ತದೆ. ಇನ್ನು ಈ ಹೆಲ್ಮೆಟ್​​ ಮಾನದಂಡಗಳಿಗನುಗುಣವಾಗಿ ಪೂರ್ತಿ ತಲೆಯನ್ನು ಮುಚ್ಚಿರಬೇಕು. ಇದಕ್ಕೂ 1000 ರೂ. ದಂಡ ಎರಡು ಸೇರಿ ಒಟ್ಟು 2 ಸಾವಿರ ರೂ. ದಂಡ ವಿಧಿಸಬೇಕಾಗುತ್ತದೆ.
2021 ಜೂನ್​ 1 ರಿಂದ ಐಎಸ್​ಐ ಮಾರ್ಕ್​ ಇಲ್ಲದ ಹೆಲ್ಮೆಟ್​ ಬಳಕೆಯನ್ನು ನಿಷೇಧಿಸಲಾಗಿದೆ. ಒಟ್ಟಾರೆ ದ್ವಿ ಚಕ್ರ ವಾಹನ ಬಳಕೆದಾರರು ಐಎಸ್​ಐ ಮಾರ್ಕ್​ ಇರುವ ಹೆಲ್ಮೆಟ್​​ನ್ನೇ ಧರಿಸಬೇಕೆಂದು ಕೇಂದ್ರ ಸರ್ಕಾರ ಹೇಳಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + twelve =
Remember me
