ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯ ನಡೆಸುವುದಕ್ಕೆ ಹೊಂಚುಹಾಕುತ್ತಿದ್ದ ಐಎಸ್​ಐಎಸ್ ಉಗ್ರನನ್ನು ದೆಹಲಿಯ ದೌಲಾ ಕಾನ್​ ಪ್ರದೇಶದಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ. ಆತನ ಬಳಿ ಇದ್ದ ಎರಡು ಇಂಪ್ರೂವೈಸ್ಡ್​ ಎಕ್ಸ್​ಪ್ಲೋಸಿವ್ ಡಿವೈಸಸ್​(ಐಇಡಿ) ಗಳನ್ನು ವಶಪಡಿಸಲಾಗಿದೆ.
ವಿಶೇಷ ಕಾರ್ಯಾಚರಣೆಯ ಮೂಲಕ ನಿನ್ನೆ ತಡರಾತ್ರಿ ಆತನನ್ನು ಬಂಧಿಸಲಾಗಿದೆ. ಕರೋಲ್ ಬಾಘ್​ ಮತ್ತು ದೌಲಾ ಕಾನ್​ ನಡುವೆ ರಿಡ್ಜ್​ ರೋಡ್​ನಲ್ಲಿ ಆತ ಪೊಲೀಸ್ ತಂಡಕ್ಕೆ ಮುಖಾಮುಖಿಯಾಗಿದ್ದ. ಸಣ್ಣ ಪ್ರಮಾಣದ ಗುಂಡಿನ ದಾಳಿಯ ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ವಿಶೇಷ ಪೊಲೀಸ್ ಘಟಕದ ಡೆಪ್ಯುಟಿ ಕಮಿಷನರ್ ಪ್ರಮೋದ್ ಸಿಂಗ್ ಕುಶ್ವಾಹ ತಿಳಿಸಿದ್ದಾರೆ.
ಇದನ್ನೂ ಓದಿ:ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಮಹಾ ವಿಸ್ಮಯ!
ಐಇಡಿಗಳನ್ನು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್​ (ಎನ್​ಎಸ್​ಜಿ) ತಂಡದ ವಶಕ್ಕೆ ನೀಡಲಾಗಿದ್ದು, ಅವರು ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ. ಬಂಧಿತನಿಂದ ಒಂದು ಪಿಸ್ತೂಲ್​ ಕೂಡ ವಶಪಡಿಸಕೊಳ್ಳಲಾಗಿದೆ. ಬಂಧಿತನನ್ನು ಉತ್ತರ ಪ್ರದೇಶ ಮೂಲದ ಅಬು ಯೂಸುಫ್ ಖಾನ್ ಎಂದು ಗುರುತಿಸಲಾಗಿದೆ. (ಏಜೆನ್ಸೀಸ್)
ಸೂರತ್​ನ ಕೋವಿಡ್ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಡ್ರೈ ಫ್ರುಟ್ ಗಣಪ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 9 =
Remember me
