ನವದೆಹಲಿ:ಕರೊನಾ ವೈರಸ್ ನಿಯಂತ್ರಣಾ ನಿರ್ಬಂಧದ ನಡುವೆಯೂ ದೆಹಲಿಯ ನಿಜಾಮುದ್ದೀನ್​ ಮಸೀದಿಯಲ್ಲಿ ಧಾರ್ಮಿಕ ಸಮಾವೇಶ ನಡೆಸಿ, ಸದ್ಯ ನಾಪತ್ತೆಯಾಗಿರುವ ತಬ್ಲಿಘಿ ಜಮಾತ್​ ಮುಖ್ಯಸ್ಥ ಮೌಲಾನಾ ಸಾದ್​ ಖಾಂಡಲ್ವಿ ದೆಹಲಿ ಪೊಲೀಸರಿಗೆ ಪತ್ರವೊಂದನ್ನು ಬರೆದಿದ್ದಾರೆ.
ತಬ್ಲಿಘಿ ಜಮಾತ್​ನ ಧಾರ್ಮಿಕ ಸಮಾವೇಶದ ಬಳಿಕ ಅದು ಕರೊನಾ ವೈರಸ್​ ಹಾಟ್​ಸ್ಫಾಟ್​ ಆಗಿ ಬದಲಾಗಿದೆ. ಮೌಲಾನಾ ಸಾದ್​​ ವಿರುದ್ಧ ಸಾಂಕ್ರಾಮಿಕ ಕಾಯಿಲೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆದರೆ ಮಾ.28ರಿಂದಲೂ ಸಾದ್​ ಪತ್ತೆಯಿಲ್ಲ. ತಾನು ಕ್ವಾರಂಟೈನ್​ನಲ್ಲಿದ್ದೇನೆ. ಅದು ಮುಗಿದ ಬಳಿಕ ತನಿಖೆಗೆ ಹಾಜರಾಗುತ್ತೇನೆ ಎಂದು ಸಾದ್​ ತಮ್ಮ ವಕೀಲರ ಮೂಲಕ ಪೊಲೀಸರಿಗೆ ಹೇಳಿದ್ದರು. ಅವರ ಕ್ವಾರಂಟೈನ್​ ಅವಧಿ ಏಪ್ರಿಲ್​ 13ಕ್ಕೆ ಮುಕ್ತಾಯವಾಗಿದೆ. ಸಾದ್​ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಸಂಬಂಧ ಪ್ರಕರಣವನ್ನೂ ದಾಖಲಿಸಿದೆ.
ಇದೀಗ ಮೌಲಾನಾ ಸಾದ್​ ದೆಹಲಿ ಕ್ರೈಂ ಬ್ರ್ಯಾಂಚ್​​ ಪೊಲೀಸರಿಗೆ ಪತ್ರ ಬರೆದಿದ್ದು, ನೀವು ಏಪ್ರಿಲ್​ 1 ಮತ್ತು 2ರಂದು ನೀಡಿದ್ದ ಎರಡೂ ನೋಟಿಸ್​ಗಳಿಗೆ ಉತ್ತರ ನೀಡುವ ಮೂಲಕ ತನಿಖೆಗೆ ಸಹಕರಿಸುತ್ತಿದ್ದೇನೆ. ಇನ್ನು ಮುಂದೆ ಕೂಡ ವಿಚಾರಣೆಗೆ ಸಹಕರಿಸಲು ಸಿದ್ಧನಿದ್ದೇನೆ. ತನಿಖೆಗೆ ನಾನು ರೆಡಿ ಎಂದು ಏ.16ರಂದು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 15 =
Remember me
