ನವದೆಹಲಿ:  ಜಗತ್ತಿಗೆ ಜಗತ್ತೇ ಕರೊನಾ ವೈರಸ್‍ ಸೋಂಕಿನಿಂದ ತಲ್ಲಣಗೊಂಡು ಅದರಿಂದ ಹೊರಬರುವುದಕ್ಕೆ ದಾರಿ ಹುಡುಕಾಡುತ್ತಿದ್ದರೆ ಉಗ್ರರು ಅದನ್ನೇ ಅವಕಾಶವನ್ನಾಗಿ ಬಂಡವಾಳವನ್ನಾಗಿ ಬಳಸುವುದಕ್ಕೆ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ತಬ್ಲಿಘಿ ಜಮಾತ್ ಪ್ರಕರಣ ಆದಾಗಲೂ ಇಂಥದ್ದೇ ಹೇಳಿಕೆಗಳು ಪ್ರಭಾವಿಗಳ ಬಾಯಿಯಿಂದ ಹೊರಬಿದ್ದಿದ್ದವು. ಈಗ ಉಗ್ರ ಸಂಘಟನೆಗಳ ಸರದಿ!
ಇಂಡಿಯಾ ಟುಡೆ ವರದಿ ಪ್ರಕಾರ, ವಾಯ್ಸ್ ಆಫ್ ಹಿಂದ್ ಎನ್ನುವ ಇಸ್ಲಾಮಿಕ್ ಸ್ಟೇಟ್ಸ್‍ನ ಅಂತರ್ಜಾಲ ತಾಣದಲ್ಲಿ ಪ್ರಚೋದನಾತ್ಮಕ ಲೇಖನಗಳು ಪ್ರಕಟವಾಗಿವೆ. ಭಾರತದಲ್ಲಿ ದಾಳಿ ನಡೆಸುವುದಕ್ಕೆ ಇದೊಂದು ಅವಕಾಶವಾಗಿದ್ದು, ಯಾರಿಗೆಲ್ಲ ಸಾಧ್ಯವಿದೆಯೋ ಅವರೆಲ್ಲ ಕೋವಿಡ್ 19 ವಾಹಕರಾಗಿ ಎಂದು ಭಾರತ ವಿರೋಧಿ ಭಾವನೆಗೆ ಕಿಚ್ಚು ಹಚ್ಚಿದೆ. ಇಂಗ್ಲಿಷ್ ಭಾಷೆಯ ವಾಯ್ಸ್ ಆಫ್ ಹಿಂದ್‍ನ ಲಾಕ್‍ಡೌನ್ ಸ್ಪೆಷಲ್ ಎಂಬ 17 ಪುಟದ  ಸಂಚಿಕೆಯಲ್ಲಿ ಈ ರೀತಿ ಲೇಖನಗಳು ಪ್ರಕಟವಾಗಿವೆ.
ಇದನ್ನೂ ಓದಿ:ಅಲಿಬಾಬಾ, ಜಾಕ್‍ಮಾಗೆ ಸಮನ್ಸ್ ಜಾರಿಗೊಳಿಸಿದ ಜಿಲ್ಲಾ ಕೋರ್ಟ್
ವಾಯ್ಸ್ ಆಫ್ ಹಿಂದ್‍ನ ಸಂಚಿಕೆಯಲ್ಲಿ ನಿಜಾಮುದ್ದೀನ್ ಮರ್ಕಜ್‍ ಸಮಾರಂಭ, ದೆಹಲಿ ಗಲಭೆಯ ಚಿತ್ರಗಳನ್ನು ಪ್ರಕಟಿಸಲಾಗಿದೆ. ಅಲ್ಲದೆ, ಮೌಲಾನಾ ಸಾದ್‍ ಮತ್ತು ಜಮಾತ್‍ನ ಹೆಸರುಗಳೂ ಇದ್ದು, ಅವರನ್ನು ಕರೊನಾ ವೈರಸ್‍ ಸೂಪರ್ ಸ್ಪ್ರೆಡರ್‍ ಎಂದು ಹಾಡಿ ಹೊಗಳಲಾಗಿದೆ. ದೆಹಲಿ ಗಲಭೆ ಸಂದರ್ಭದಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಕೆಲವು ವಿದ್ಯಾರ್ಥಿಗಳನ್ನು ಬಂಧಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕೆಂಬ ಪ್ರಚೋದನೆಯೂ ಇದರಲ್ಲಿದ್ದು, ಇಸ್ಲಾಂ ವಿರೋಧಿಗಳಿಗೆ ಪಾಠ ಕಲಿಸಲು ಕೋವಿಡ್‍-19 ಅನ್ನೇ ಒಂದು ಅಸ್ತ್ರವನ್ನಾಗಿ ಬಳಸಬೇಕು ಎಂಬ ಸೂಚನೆಯೂ ಇದೆ! (ಏಜೆನ್ಸೀಸ್)
ದೇಗುಲವನ್ನು ಮಸೀದಿಯಾಗಿಸಿದ ತಬ್ಲಿಘಿಗಳು; ಪಾಕ್​ನಲ್ಲಿ 102 ಹಿಂದುಗಳ ಬಲವಂತದ ಮತಾಂತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
