ಲಂಡನ್​/ನವದೆಹಲಿ:ವಿವಾದಾತ್ಮಕ ಇಸ್ಲಾಮಿಕ್​ ಟೆಲಿಧರ್ಮಬೋಧಕ ಜಾಕೀರ್​ ನಾಯ್ಕ್​ ಒಡೆತನದ ಪೀಸ್​ ಟಿವಿ ಮತ್ತು ಪೀಸ್​ ಟಿವಿ ಉರ್ದು ಚಾನೆಲ್​ಗಳಿಗೆ ಬ್ರಿಟನ್​ನ ಟಿವಿ ಪ್ರಸಾರ ಸೇವೆಗಳ ನಿಯಂತ್ರಕ ಆಪ್​ಕಾಂ (Ofcom) 2.76 ಕೋಟಿ ರೂ. ದಂಡ ವಿಧಿಸಿದೆ.
ಈ ಚಾನೆಲ್​ಗಳಲ್ಲಿ ಧಾರ್ಮಿಕ ಸೌಹಾರ್ದತೆ ಹದಗೆಡಿಸಲು ದ್ವೇಷಪೂರಿತ ಭಾಷಣ ಮಾಡಿದ್ದಲ್ಲದೆ, ಜನರನ್ನು ಕೊಲ್ಲುವಂತೆ ಪದೇಪದೆ ಪ್ರೇರೇಪಿಸಿದ್ದಕ್ಕಾಗಿ ಬ್ರಿಟನ್​ನ ಮಾಧ್ಯಮ ಮೇಲ್ವಿಚಾರಣಾ ಸಂಸ್ಥೆ ಆಫ್​ಕಾಂ (Ofcom) ಈ ಕ್ರಮ ಕೈಗೊಂಡಿದೆ.
ಜಾಕೀರ್​ ನಾಯ್ಕ್​ ಒಡೆತನದ ಪೀಸ್​ ಟಿವಿಯ ಮೂಲ ಕಂಪನಿ ಲಾರ್ಡ್​ ಕಮ್ಯುನಿಕೇಷನ್ಸ್​ಗೆ 92.16 ಲಕ್ಷ ರೂ. ಮತ್ತು ಪೀಸ್​ ಟಿವಿ ಉರ್ದು ಮಾಲೀಕತ್ವ ಹೊಂದಿರುವ ಕ್ಲಬ್​ ಟಿವಿಗೆ 1.84 ಕೋಟಿ ರೂ. ದಂಡ ವಿಧಿಸಲಾಗಿದೆ.
ಇದನ್ನೂ ಓದಿ:ಕರೊನಾ ಹೆಸರಿನಲ್ಲಿ ಪ್ರತಿ ವಾರ ನಡೆಯುತ್ತಿವೆ 2 ಲಕ್ಷ ಸೈಬರ್ ವಂಚನೆ ಪ್ರಕರಣಗಳು!
ಪೀಸ್​ ಟಿವಿ ಉರ್ದು ಮತ್ತು ಪೀಸ್​ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಸೌಹಾರ್ದತೆ ಕದಡುವ ರೀತಿಯ ದ್ವೇಷಪೂರಿತ ಭಾಷಣಗಳನ್ನು ಪ್ರಸಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲದೆ, ಕೆಲವು ಕಾರ್ಯಕ್ರಮಗಳಂತೂ ಹಿಂಸೆಗೆ ಪ್ರಚೋದನೆ ನೀಡುವಂತಿರುತ್ತವೆ ಎಂದು ಆಫ್​ಕಾಂ ಹೇಳಿದೆ.
ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರಚೋದನೆ ಮತ್ತು ಧನಸಹಾಯ ನೀಡಿದ ಆರೋಪದಲ್ಲಿ ಜಾಕೀರ್​ ನಾಯ್ಕ್​ ಭಾರತ ಮತ್ತು ಬಾಂಗ್ಲಾದೇಶಗಳಿಗೆ ಬೇಕಾಗಿದ್ದಾನೆ. ಸದ್ಯ ಆತ ಮಲೇಷ್ಯಾದಲ್ಲಿ ಶರಣಾಗತಿ ಪಡೆಯಲು ಯತ್ನಿಸುತ್ತಿದ್ದಾನೆ ಎನ್ನಲಾಗಿದೆ.
ಮಹಾರಾಷ್ಟ್ರದಿಂದ ಕರ್ನಾಟಕದ ತುಂಬೆಲ್ಲಾ ಕರೊನಾ ಕೇಕೆ: ಒಂದೇ ದಿನ 99 ಪ್ರಕರಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 15 =
Remember me
