ನವದೆಹಲಿ:ಭಾರತದಲ್ಲಿ ಎಂಪಾಕ್ಸ್ ವೈರಸ್​ ಪ್ರತ್ಯೇಕ ಪ್ರಕರಣ ಪತ್ತೆಯಾಗಿದ್ದು, ಇತ್ತೀಚೆಗೆ ವಿದೇಶದಲ್ಲಿ ಪ್ರಯಾಣ ಮಾಡಿ ಭಾರತಕ್ಕೆ ಬಂದಿದ್ದ ವ್ಯಕ್ತಿಗೆ ಎಂಪಾಕ್ಸ್ ಸೋಂಕು ತಗಲಿರುವುದು ಖಚಿತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ವೈರಸ್‌ಗಿಂತ ಭಿನ್ನವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದನ್ನೂ ಓದಿ:ಕರ್ನಾಟಕಕ್ಕೆ ಗಣೇಶ ಹಬ್ಬದ ಗಿಫ್ಟ್ ನೀಡಿದ ಕೇಂದ್ರ ಸರ್ಕಾರ; ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸಂಚಾರಕ್ಕೆ ಅಸ್ತು!
ಶಂಕಿತ ಎಂಪಾಕ್ಸ್ ಪ್ರಕರಣ ದೃಢಪಟ್ಟಿದ್ದು, ಪ್ರಯಾಣ ಸಂಬಂಧಿತ ಸೋಂಕು ಎಂದು ಪರಿಶೀಲಿಸಲಾಗಿದೆ. ಪ್ರಯೋಗಾಲಯದ ಪರೀಕ್ಷೆಯಲ್ಲಿ ರೋಗಿಯಲ್ಲಿ ಪಶ್ಚಿಮ ಆಫ್ರಿಕಾದ ಕ್ಲೇಡ್- 2 ನ ಎಂಪಾಕ್ಸ್ ವೈರಸ್ ಇರುವಿಕೆಯನ್ನು ದೃಢಪಡಿಸಿದೆ. ಜುಲೈ 2022 ರಿಂದ ಭಾರತದಲ್ಲಿ ವರದಿಯಾದ ಹಿಂದಿನ 30 ಪ್ರಕರಣಗಳಂತೆ ಇದು ಒಂದು ಪ್ರತ್ಯೇಕ ಪ್ರಕರಣವಾಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಭಾಗವಲ್ಲ ಸಚಿವಾಲಯ ಹೇಳಿದೆ.
ಇದು ಎಂಪಾಕ್ಸ್‌ನ ಕ್ಲೇಡ್-1ಗೆ ಸಂಬಂಧಿಸಿದೆ. ಎಂಪಾಕ್ಸ್‌ ಸೋಂಕಿತ ವ್ಯಕ್ತಿಯನ್ನು ಎಂಪಾಕ್ಸ್ ಕಾಯಿಲೆ ಚಿಕಿತ್ಸೆಗೆ ಮೀಸಲಾಗಿಟ್ಟಿರುವ ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕವಾಗಿರಸಲಾಗಿದೆ. ಆತನ ಆರೋಗ್ಯ ಸ್ಥಿರವಾಗಿದೆ. ಮತ್ತು ಯಾವುದೇ ಕೊಮೊರ್ಬಿಡಿಟಿಗಳನ್ನು ಎದುರಿಸುತ್ತಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸೋಮವಾರ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜಾಗತಿಕ ಎಂಪಾಕ್ಸ್ ಸೋಂಕು ಹರಡುವಿಕೆ ಕುರಿತು ಸಲಹೆಯನ್ನು ನೀಡಿದೆ. ರಾಜ್ಯ ಅಧಿಕಾರಿಗಳು ಮುನ್ನೆಚ್ಚರಿಕೆಗಳನ್ನು ಕಾಪಾಡಿಕೊಳ್ಳಲು ಮತ್ತು ಎಂಪಾಕ್ಸ್​ನ ತಡಗಟ್ಟುವಿಕೆಯ ಬಗ್ಗೆ ಹರಡುವಂತೆ ಒತ್ತಾಯಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಸೋಂಕು ಸಾರ್ವಜನಿಕವಾಗಿ ಹರಡುವ ಯಾವುದೇ ಅಪಾಯವಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಎಂಪಾಕ್ಸ್ ವೈರಸ್ ಎಂದರೇನು?: ಎಂಪಾಕ್ಸ್ ವೈರಸ್ ಸಿಡುಬಿನ ವೈರಸ್‌ಗಳ ಕುಟುಂಬದ ಭಾಗವಾಗಿದೆ. ಇದನ್ನು ಮೊದಲು 1958 ರಲ್ಲಿ ಪ್ರಯೋಗಾಲಯ ಕೋತಿಗಳಲ್ಲಿ ಗುರುತಿಸಲಾಯಿತು. ನಂತರ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ದೇಶಗಳ ಉಷ್ಣವಲಯದ ಮಳೆ ಕಾಡುಗಳಲ್ಲಿ ಈ ವೈರಸ್ ಕಂಡು ಬಂದಿದ್ದವು.
ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಮತ್ತೆ ನಿರಾಳ; ಸೆ.12ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 4 =
Remember me
