ನವದೆಹಲಿ:ಚೀನಾದ ವೂಹಾನ್​ನಿಂದ ಮರಳುವವರಿಗೆ ತಪಾಸಣೆ ನಡೆಸಲು ವಿಶೇಷ ಚಿಕಿತ್ಸಾ ಕೊಠಡಿಯನ್ನು ದೆಹಲಿಯ ಮಣಿಸರ​ ಎಂಬಲ್ಲಿ ನಿರ್ಮಿಸಲಾಗಿದೆ.
ಕೊರೊನಾ ವೈರಸ್​ ಭೀತಿ ಹಿನ್ನೆಲೆಯಲ್ಲಿ ಚಿಕಿತ್ಸೆ ಉದ್ದೇಶಕ್ಕಾಗಿಯೇ ಪೂರ್ಣ ಪ್ರಮಾಣದ ಕಾರ್ಯಾಚರಣೆಯನ್ನು ಭಾರತೀಯ ಸೇನೆ ನಡೆಸಿದೆ. ಅಂದಾಜು 300 ವಿದ್ಯಾರ್ಥಿಗಳನ್ನು ತಪಾಸಣೆಗೊಳಪಡಿಸಲಿದ್ದು, ವೈದ್ಯರ ತಂಡ ಅವರ ಮೇಲೆ ಎರಡು ವಾರಗಳ ಕಾಲ ವಿಶೇಷ ನಿಗಾ ವಹಿಸಲಿದೆ.
ಅಲ್ಲದೆ ಅವರೆಲ್ಲ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ವಿಮಾನನಿಲ್ದಾಣದಲ್ಲೇ ತಪಾಸಣೆ ನಡೆಸಲಾಗುತ್ತದೆ. ಮಾರಕ ವೈರಸ್​ ಕೊರೊನಾ ಶಂಕಿತರೆಂದು ಕಂಡು ಬಂದಲ್ಲಿ ಈ ವಿಶೇಷ ಕೊಠಡಿಗೆ ರವಾನಿಸಲಾಗುವುದು.
ಹಾಗೆ ಬರುವ ವಿದ್ಯಾರ್ಥಿಗಳ ಗುಂಪನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗುವುದು. ಈ ಗುಂಪುಗಳಲ್ಲಿ ವೈರಸ್​ ಪೀಡಿತರು ಎಂದು ಕಂಡು ಬಂದಲ್ಲಿ ಅದಕ್ಕಾಗಿ ಸಿದ್ಧಪಡಿಸಿದ ವಾಹನದಲ್ಲಿ ವಿಶೇಷ ಕೊಠಡಿಗೆ ರವಾನಿಸಲಾಗುವುದು.
ಈ ವಿಶೇಷ ಕೊಠಡಿ ಒಳಗೆ ನಾಗರಿಕರಿಗೆ ಪ್ರವೇಶ ಇರುವುದಿಲ್ಲ. ಅಲ್ಲದೆ ತೀವ್ರ ತುರ್ತು ಪರಿಸ್ಥಿತಿ ಹೊರತು ಒಳಗಿರುವ ವೈದ್ಯರು ಮತ್ತು ದಾದಿಯರು ಕೂಡ ಹೊರಹೋಗುವಂತಿಲ್ಲ.
ಇಂಡೋ-ಟಿಬೇಟಿಯನ್​ ಬಾರ್ಡರ್​ ಪೊಲೀಸರು ಕೂಡ ದೆಹಲಿಯ ನೈಋತ್ಯ ಭಾಗದಲ್ಲಿ ಇದೇ ರೀತಿಯ ಚಿಕಿತ್ಸೆಗಾಗಿ ವಿಶೇಷ ಘಟಕವನ್ನು ಸ್ಥಾಪಿಸಿದ್ದಾರೆ.
ಕೇರಳದ ತ್ರಿಶೂರ್​ನಲ್ಲಿ ರಾಷ್ಟ್ರದ ಮೊದಲ ಕೊರೊನಾ ವೈರಸ್​ ಪೀಡಿತ ಮಹಿಳೆ ಗುರುವಾರ ಪತ್ತೆಯಾಗಿದ್ದರು. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಕೇರಳ ಆರೋಗ್ಯ ಸಚಿವಾಲಯ ತಿಳಿಸಿತ್ತು.
ಚೀನಾದ ವುಹಾನ್​ನ ವೈದ್ಯಕೀಯ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆ ರಾಷ್ಟ್ರಕ್ಕೆ ಮರಳಿದ್ದು, ದೆಹಲಿಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಗಾಗಿ ನಂತರ ತ್ರಿಶೂರ್​ಗೆ ಬಂದಿದ್ದರು. ತಪಾಸಣೆ ವರದಿಯಲ್ಲಿ ಆಕೆಗೆ ವೈರಸ್​ ಹರಡಿರುವುದು ದೃಢಪಟ್ಟಿತು. ಕೂಡಲೇ ಕೇಂದ್ರ ಸರ್ಕಾರ, ಕೇರಳ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.
ಮಹಿಳೆಗೆ ವೈರಸ್​ ಹರಡಿರುವ ಪ್ರಕರಣ ಪರಿಶೀಲನೆಗೆ ಕೇರಳ ಸರ್ಕಾರ ಮೈದ್ಯಕೀಯ ಮಂಡಳಿ ರಚನೆ ಮಾಡಿದೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 12 =
Remember me
