ನವದೆಹಲಿ:ಭಾರತ ಚುನಾವಣಾ ಪ್ರಕ್ರಿಯೆಯಲ್ಲಿ ಇಸ್ರೇಲ್​ನ ಗುತ್ತಿಗೆ ತಂಡದ ಹಸ್ತಕ್ಷೇಪದ ಬಗ್ಗೆ ತನಿಖೆ ನಡೆಯಬೇಕು. ಈ ವಿಷಯದಲ್ಲಿ ಸರ್ಕಾರ ಮೌನ ಮುರಿಯಬೇಕು ಎಂದು ಕಾಂಗ್ರೆಸ್ ಗುರುವಾರ ಒತ್ತಾಯಿಸಿದೆ. ಇಸ್ರೇಲ್​ನ ‘ಟೀಮ್ ಜಾರ್ಜ್’ಗೆ ಮತದಾರರ ವಿವರ ನೀಡಲಾಗಿದೆ ಮತ್ತು ಈ ತಂಡ ಹಾಗೂ ಬಿಜೆಪಿಯ ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗಗಳು ಸುಳ್ಳುಸುದ್ದಿ ಮತ್ತು ತಪು್ಪ ಮಾಹಿತಿಯನ್ನು ಪಸರಿಸಿ ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವ ಕಾರ್ಯ ಮಾಡುತ್ತಿವೆ ಎಂದು ಕಾಂಗ್ರೆಸ್ ವಕ್ತಾರಾದ ಪವನ್ ಖೇರಾ ಮತ್ತು ಸುಪ್ರಿಯಾ ಶ್ರೀನತೆ ಆರೋಪಿಸಿದ್ದಾರೆ.
ಟೀಮ್ ಜಾರ್ಜ್ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ 30 ಚುನಾವಣೆಗಳಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಸಾಫ್ಟ್​ವೇರ್ ಆಧಾರಿತವಾಗಿ ನಡೆಸುತ್ತಿದೆ. ಬಿಜೆಪಿ ಐಟಿ ವಿಭಾಗಕ್ಕೂ ಟೀಮ್ ಜಾರ್ಜ್​ಗೂ ಏನು ಸಂಬಂಧ ಎಂಬುದರ ಬಗ್ಗೆ ಸರ್ಕಾರ ಮೌನ ಮುರಿಯಬೇಕು. ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಮೂಗುತೂರಿಸುತ್ತದೆ ಎಂದರೆ ಗಂಭೀರ ವಿಷಯ. ಇದನ್ನು ತನಿಖೆಗೆ ಒಳಪಡಿಸಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಸರ್ಕಾರ ತನಿಖೆ ನಡೆಸುವುದಿಲ್ಲ ಎಂದರೆ, ಟೀಮ್ ಜಾರ್ಜ್ ಜತೆಗೆ ಅದು ಶಾಮೀಲಾಗಿದೆ ಎಂದೇ ಅರ್ಥ. ದೇಶದ ಚುನಾವಣೆ ಮತ್ತು ಪ್ರಜಾಪಭುತ್ವದ ವಿಷಯದಲ್ಲಿ ಅನ್ಯದೇಶದ ಸಂಸ್ಥೆಯೊಂದಿಗೆ ಸರ್ಕಾರ ರಾಜಿ ಮಾಡಿಕೊಂಡಿದೆ ಎಂದೇ ತಿಳಿಯಬೇಕಾಗುತ್ತದೆ ಎಂದಿದ್ದಾರೆ. ಕರ್ನಾಟಕದಲ್ಲಿ ಮತದಾರರ ಡೇಟಾವನ್ನು ಖಾಸಗಿ ಸಂಸ್ಥೆಯೊಂದು ನಿರ್ವಹಣೆ ಮಾಡುತ್ತಿದ್ದ ವಿಷಯ ಇತ್ತೀಚೆಗೆ ಬಯಲಾಯಿತು. ಕರ್ನಾಟಕದಲ್ಲಿ ಏಪ್ರಿಲ್/ಮೇನಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಈ ಸಂಸ್ಥೆ ಲಾಭ ಮಾಡಿಕೊಟ್ಟಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಾಂಗ್ರೆಸ್ ವಕ್ತಾರರು ದೂರಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 10 =
Remember me
